ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಸಂಘದ ಒತ್ತಾಯ

0
18
loading...

ಚಿಕ್ಕೋಡಿ 05: ನಿಂತು ಹೋಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನಿಯಮಾನುಸಾರ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕಾ ಘಟಕದಿಂದ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಗಷ್ಟ1ರ ನಂತರ ನೇಮಕ ಮತ್ತು ಬಡ್ತಿ ಹೊಂದಿದ ಶಿಕ್ಷಕರಿಷ ವೇತನ ವಿಸ್ತರಿಸಲು ಮತ್ತು ಶಿಕ್ಷಕರ ವರ್ಗಾವಣೆ ಪ್ರಾರಂಭಿಸಬೇಕು. ರಾಜ್ಯದಲ್ಲಿ 6ನೇ ವೇತನ ಆಯೋಗದ ವರದಿ ಜಾರಿಯಾಗಿರುವುದರಿಂದ ಶಿಕ್ಷಕರಿಗೆ ಒಂದು ವೇತನ ಬಡ್ತಿ ನಷ್ಟವಾಗುತ್ತಿದೆ. ಇದರಿಂದ ಶಿಕ್ಷಕರ ಸೇವಾ ಅವಧಿಯಲ್ಲಿ ಆರ್ಥಿಕ ಬಹುದೊಡ್ಡ ನಷ್ಟವಾಗುತ್ತಿದೆ. ಜೊತೆಗೆ ಶಿಕ್ಷಕರ ಮಧ್ಯದಲ್ಲಿ ಅಸಮಾನತೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿ ಗಮನ ಹರಿಸಿ ಎಲ್ಲ ಶಿಕ್ಷಕರಿಗೂ ವಿಶೇಷ ವೇತನ ವಿಸ್ತರಿಸಲು ಒತ್ತಾಯಿಸಿದರು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಿಂತು ಹೋಗಿದೆ. ಆನಾರೋಗ್ಯ ಪೀಡಿತರು, ಅಂಗವಿಕಲರು, ಪತಿ-ಪತ್ನಿ ಮತ್ತು ಪಾಲಕರ ಪೋಷಣೆಯಲ್ಲಿ ತೊಡಗುವ ಶಿಕ್ಷಕರು, ತೊಂದರೆ ಅನುಭವಿಸುತ್ತಿದ್ದು, ವರ್ಗಾವಣೆಗಾಗಿ ಕಳೆದ ಒಂದು ವರ್ಷದಿಂದ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದ್ದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನಿಯಮಾನುಸಾರ ಪ್ರಾರಂಭಿಸಬೇಕು ಎಂದು ಆಗೃಹಿಸಿದರು.ಸಂಘದ ತಾಲೂಕಾ ಅಧ್ಯಕ್ಷ ಎಸ್‌.ಆರ್‌.ಡೊಂಗರೆ, ಅಲಗೌಡ ಸೊಲ್ಲಾಪೂರೆ, ರಾಜು ದೇವರುಷಿ, ದಯಾನಂದ ಹಿರೇಮಠ, ಅಪ್ಪಾಸಾಹೇಬ ನಾಗನೂರೆ, ಎನ್‌.ಎನ್‌.ಬೇವೂರ, ಎಸ್‌.ಎಸ್‌.ಕಮತೆ, ಸುಭಾಷ ಸಂಕಪಾಳ ಮುಂತಾದವರು ಉಪಸ್ಥಿತರಿದ್ದರು.

loading...