ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಖಾದರಗೆ ಮನವಿ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ದಕ್ಷಿಣ ಮತಕ್ಷೆÃತ್ರದ ಒಳಚರಡಿ ಹಾಗೂ ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರಿ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ ವಿಧಾನ ಸಭೆಯಲ್ಲಿ ಭೇಟಿಯಾಗಿ ಮನವಿ ಮಾಡಿಕೊಂಡರು.

ಬೆಳಗಾವಿ ದಕ್ಷಿಣ ಕ್ಷೆÃತ್ರದಲ್ಲಿ ಒಳಚರಂಡಿ ಸಮಸ್ಯೆಯಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ. ದಕಿಣ ಕ್ಷೆÃತ್ರದಲ್ಲಿ ಒಳಚರಂಡಿ ನಿರ್ಮಾಣ ಮಾಡಬೇಕು ಅದಕ್ಕಾಗಿ ಕೂಡಲೇ ಕ್ರಮ ಜರುಗಿಸಬೇಕು ಜೊತೆಗೆ ಕ್ಷೆÃತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನಗರದಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸರಿಸಮನಾಗಿ ನೀರು ಹಂಚಿಕೆ ಮಾಡಲು ಕ್ರಮ ಜರಗಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ನಗರದಲ್ಲಿ ಕೇವಲ ೧೦ ವಾರ್ಡಗಳಲ್ಲಿ ೨೪*೭ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಈ ಯೋಜನೆಯನ್ನು ಬೆಳಗಾವಿ ನಗರದ ೫೮ ವಾರ್ಡಗಳಲ್ಲಿ ವಿಸ್ತರಿಸಲು ಟೆಂಡರ ಕರೆಯಲಾಗಿತ್ತು, ಆದರೆ ಹಲವಾರು ತಾಂತ್ರಿಕ ಕಾರಣಗಳಿಂದ ಟೆಂಡರ ಪ್ರಕ್ರಿÃಯೆ ಪೂರ್ಣಗೊಂಡಿಲ್ಲ ಕೂಡಲೇ ಈ ಯೋಜನೆಯನ್ನು ಮರು ಟೆಂಡರ್ ಕರೆದು ಈ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿದರು.

ದಕ್ಷಿಣ ಮತಕ್ಷೆÃತ್ರದಲ್ಲಿ ಸಾವಿರಾರು ನೇಕಾರ ಕುಟುಂಬಳಿವೆ ಬಡ ನೇಕಾರ ಕುಟುಂಬಗಳಿಗೆ ವಿಶೇಷವಾದ ವಸತಿ ಸಮುಚ್ಚಯ ನಿರ್ಮಿಸಿ, ದಕ್ಷಿಣ ಮತಕ್ಷೆÃತ್ರದ ಬಡ ಕುಟುಂಬಗಳಿಗೆ ಹೆಚ್ಚುವರಿ ಆಶ್ರಯ ಮನೆಗಳನ್ನು ಮಂಜೂರು, ನಗರದಲ್ಲಿ ಸ್ವಚ್ಚತಾ ಕಾಮಗಾರಿಗಳ ಸರಿಯಾಗಿ ನಡೆಯುತ್ತಿಲ್ಲ ಸ್ಮಾರ್ಟಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ನಗರದಲ್ಲಿ ಕಂಡು ಕಂಡಲ್ಲಿ ಗಲೀಜು ಕಾಣಿಸುತ್ತಿದೆ ಎಂದು ಶಾಸಕ ಅಭಯ ಪಾಟೀಲ ಮಾನ್ಯ ನಗರಾಭಿವೃದ್ಧಿ ಸಚಿವ ಶ್ರಿÃ ಯು. ಟಿ. ಖಾದರ ರವರಿಗೆ ದೂರು ನೀಡಿದರು.

==========ಬಾಕ್ಸ್=========

ಮುಂದಿನ ವಾರ ಬೆಳಗಾವಿಗೆ ಯು.ಟಿ ಖಾದರ ಆಗಮಿಸಲಿದ್ದಾರೆ. ಮಹಾನಗರ ಪಾಲಿಕೆಯ ಸ್ವಚ್ಚತಾ ಕಾಮಗಾರಿಗಳು ಸೇರಿದಂತೆ ಪಾಲಿಕೆಯ ಪ್ರಗತಿ ಪರಶೀಲನೆ ಮಾಡುವುದರ ಮೂಲಕ ನಗರದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಾಸಕ ಅಭಯ ಪಾಟೀಲ

loading...