ವೃತ್ತಿರಂಗಭೂಮಿ ಮೂಲಿಗುಂಪಾಗುತ್ತಿದೆ: ಡಾ. ಸಿದ್ಧರಾಮ ಶ್ರಿÃಗಳು

0
18
loading...

ಬೆಳಗಾವಿ: ಆಧುನಿಕ ತಂತ್ರಜ್ಞಾನದ ಭರಾಟೆಯ ಇಂದಿನ ದಿನಗಳಲ್ಲಿ ವೃತ್ತಿರಂಗಭೂಮಿ ಮೂಲಿಗುಂಪಾಗುತ್ತಲಿವೆ ಎಂದು ನಾಗನೂರ ರದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಸಾದಶಿವನಗರದ ಚಿಂದೋಡಿಲೀಲಾ ರಂಗಮಂದಿರದಲ್ಲಿ ನಿನ್ನೆ ಭಾನುವಾರ ದಿ. ೧ ರಂದು ನಗರದ ವೀರೇಶ್ವರ ನಾಟ್ಯಸಂಘ(ರಿ) ಬಾಗಲಕೋಟ ಇವರು ಕಲಾವಿದರ ಮಕ್ಕಳ ಶಿಕ್ಷಣ ಸಹಾಯಾರ್ಥವಾಗಿ “ಕಿವುಡ ಮಾಡಿದ ಕಿತಾಪತಿ” ನಾಟಕವನ್ನು ಕಾರ್ಯಕ್ರಮ ಉದ್ಘಾಟಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಎಲ್ಲರೂ ಟಿ.ವಿ. ಮೊಬೈಲ್, ವಾಟ್ಸಾಪ್ ಗಳಲಲ್ಲಿ ಮುಳಿಗಿರುವುದಿಂದ ರಂಗಭೂಮಿ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಲಿದೆ. ಸಂಕಷ್ಟ ಸ್ಥಿತಿಯಲ್ಲಿರುವ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೆಕಾದುದು ನಮ್ಮ ನಿಮ್ಮೆಲ್ಲ ಕರ್ತವ್ಯವಾಗಿದೆ ಎಂದರು.
ಕಾರಂಜಿ ಮಠದ ಪ.ಪೂ. ಗುರುಸಿದ್ಧ ಮಹಾಸ್ವಾಮಿಗಳು ವೃತ್ತಿರಂಗ ಭೂಮಿಯಿಂದ ಜೀವನ ನಡೆಸುವುದು ತುಂಬ ಕಷ್ಟದ ಕೆಲಸವಾಗಿದೆ. ಈ ಕಲಾವಿದರ ಮಕ್ಕಳ ಶಿಕ್ಷಣ ಸಹಾಯಾರ್ಥವಾಗಿ ಈ ನಾಟಕವನ್ನು ಹಮ್ಮಿಕೊಂಡಿರುವ ವೀರೇಶ್ವರ ನಾಟ್ಯ ಸಂಘದ ಕರ‍್ಯ ಶ್ಲಾಘನೀಯವಾದುದು. ಕಲಾವಿದರನ್ನು ಕಷ್ಟ ಕಾಲದಲ್ಲಿ ಸಹಾಯ ಮಾಡಿ ಕಲಾವಿದರನ್ನು ಎತ್ತಿ ಹಿಡಿಯುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.
ಕಲಾವಿದರ ಮಕ್ಕಳ ಶಿಕ್ಷಣ ಸಹಾಯ ಮಾಡಿದ ಡಿ.ಎಸ್. ಕಲ್ಲತ್ರಿ, ಎಸ್. ಎಂ. ಕೋಲಕಾರ ಬಸವರಾಜ ಸಸಾಲಟ್ಟಿ, ಸರಳಾ ಹೇರೆಕರ, ಡಾ.ಎಚ್. ಆಯ್ ತಿಮ್ಮಾಪೂರ, ಗುರುನಗೌಡ ಪಾಟೀಲ, ರಾವ್‌ಸಾಹೇಬ ಪಾಟೀಲ, ಎಸ್. ಮುತಾಲಿಕದೇಸಾಯಿ, ಶಂಕರ ಅರಕೇರಿ,ಚಂದ್ರಶೇಖರ ಕೋತಿನ, ಹನಮಂತ ಸಂಶಿ, ಪ್ರಕಾಶ ಚೆನ್ನಾಳ, ದಾದು ಶೇಠ, ರವೀಂದ್ರ ತೋಟಿಗೇರ, ಅಪ್ಪಣ್ಣಗೌಡ ಪಾಟೀಲ, ಈರಣ್ಣ ಮದವಾಲ, ಬಿ.ಎ. ಪಾಟೀಲ ಡಿ.ಎನ್. ಕಾಂಬಳೆ, ಡಾ. ಮನೋಹರ, ಎಚ್. ಬಿ. ವಿರಕ್ತಮಠ ಮುಂತಾದ ಮಹನೀಯರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ನಗರಾಭಿವೃದ್ಧಿ ಕರ‍್ಯನಿರ್ವಾಹಕ ಅಭಿಯಂತರರಾದ ಮಹಾವೀರ ಗಣಿ ಆಗಮಿಸಿದ್ದರು. ಮುರುಗೇಶ ಶಿವಪೂಜಿ ಸ್ವಾಗತಿಸಿದರು.

loading...