ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ

0
46
loading...

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ

ಕನ್ನಡಮ್ಮ ಸುದ್ದಿ -ಬೆಳಗಾವಿ: ನಗರದ‌ ಬೀಮ್ಸ್ ಆಸ್ಪತ್ರೆ ಯಲ್ಲಿ ಹೊರ‌ ಗುತ್ತಿಗೆ ಆದಾರ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಯುವಕನಿಗೆ ಕೆಲ ತಿಂಗಳಿಂದ ವೇತನ‌‌ ನೀಡದಿರುವುದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ನಗರದ ಬಾಕ್ಸೈಟ್ ರಸ್ತೆಯ ನಿವಾಸಿಯಾಗಿರುವ ರಾಕೇಶ ಕಾಂಬಳೆ ಎಂಬ ೨೨ವರ್ಷದ ಯುವಕ ಕೆಲ ತಿಂಗಳಿಂದ ವೇತನ ನೀಡಿದಿರುವುದಕ್ಕೆ ಮನನೊಂದು ಬೆಳಿಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಈತ ಕಳೆದ ಒಂದೂವರೆ ವರ್ಷದಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕಾಂಟ್ಯಾಕ್ಟ ಬೇಸಿಕ್ ಮೇಲೆ ಕೆಲಸ ಮಾಡುತ್ತಿದ್ದು, ಇತನಿಗೆ ಒಂಬತ್ತು ತಿಂಗಳಿಂದ ಸಂಬಳ ನೀಡದಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಮನೆಯವರು
ತಕ್ಷಣ ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆ ಸೇರಿಸಿ ಆತನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಎಪಿಎಮ್ ಸಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

loading...