ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವದ್ದು: ಎನ್.ಎ. ಮಗದುಮ್ಮ

0
5
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 27: ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವದ್ದಾಗಿದ್ದು ನರ್ಸಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಎ.ಮಗದುಮ್ಮ ಹೇಳಿದರು.
ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರ್ಸೀಂಗ ಕಾಲೇಜ ಪ್ರಾಚಾರ್ಯ ಬಸವಣ್ಣಿ ಸಂಗಪ್ಪಗೋಳ ಮಾತನಾಡಿ, ನರ್ಸಿಂಗ್ ಪದವಿ ಮುಗಿಸಿದ ವಿದ್ಯಾರ್ಥಿಗಳು ಆರಂಭದಲ್ಲಿ ವೇತನಕ್ಕೆ ಆಧ್ಯತೆ ನೀಡಬಾರದು. ಮೊದಲು ಕ್ರೀಯಾಶೀಲ, ಏಕಾಗೃತೆ ಮತ್ತು ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ ವೈದ್ಯಕೀಯ ರಂಗದಲ್ಲಿ ಒಂದು ಹೆಸರು ಮಾಡಬೇಕು. ನಂತರ ವೇತನ ಮತ್ತು ಅವಕಾಶಗಳು ತಾನಾಗಿಯೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು ಹೇಳಿದರು.
ಸಂಸ್ಥೆಯ ಕೋಶಾಧ್ಯಕ್ಷೆ ಲಲಿತಾ ಎನ್.ಮಗದುಮ್ಮ, ವಿ.ಎ. ಜಾಧವ ಮತ್ತು ಆಯುರ್ವೇದಿಕ ಕಾಲೇಜ ಪ್ರಾಚಾರ್ಯ ಡಾ. ಬಸವರಾಜ ಗಂಟಿ ಮಾತನಾಡಿದರು. ಅಂತಿಮ ವರ್ಷ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಪ್ರಾಚಾರ್ಯ ಎನ್.ಎಸ್.ನಿಡಗುಂದೆ ಮುಂತಾದವರು ಉಪಸ್ಥಿತರಿದ್ದರು. ಅಪ್ರೀನಾ ಹೇರ ನಿರೂಪಿಸಿ,ವಂದಿಸಿದರು.
..

loading...