ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗಿದೆ: ನ್ಯಾ. ಮಲ್ಲಿಕಾರ್ಜುನ

0
15
loading...

ವಿಜಯಪುರ: ಸಮಾಜದ ಸೃಷ್ಟಿದ ಪ್ರಭು ಒಬ್ಬ ಆದರೆ, ಅದನ್ನು ಆರೋಗ್ಯವಾಗಿ ಕಾಪಾಡುವ ವೈದ್ಯರನ್ನು ಎರಡನೇ ದೇವರು ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಇಲ್ಲಿನ ರೋಟರಿ ಕ್ಲಬ್‌, ವೇದಾಂತ ಶಿಖರ ಲ್ಯಾಬ್‌ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಲನಗರದ ವೀರಾಂಜನೆಯ ದೇವಸ್ಥಾನದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಪ್ರತಿಭಾನ್ವಿತರಾದ ಜಿಲ್ಲೆಯ ಖ್ಯಾತ ಹಿರಿಯ ವೈದ್ಯರನ್ನು ಸನ್ಮಾನ ಮತ್ತು ಉಚಿತ ರಕ್ತ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ವೈದ್ಯರ ದಿನಾಚಾರಣೆಯನ್ನು ವಿಷಿಷ್ಟವಾಗಿ ವೇದಾಂತ ಲ್ಯಾಬ್‌ ಹಾಗೂ ರೋಟರಿ ಕ್ಲಬನವರ ಆಶ್ರಯದಲ್ಲಿ ನಡೆಸಿದ್ದು, ಶ್ಲಾಘನೀಯವಾಗಿದೆ, ಸಮಾಜ ಉತ್ತಮ ಬೆಳವಣಿಗೆಗೆ ವೈದ್ಯರ ಸಲಹೆ ಅಗತ್ಯ, ವೈದ್ಯರನ್ನು ನಮ್ಮ ಸಮಾಜ ಗೌರವಿಸಿಕೊಂಡೇ ಬಂದಿದೆ ವಿಷೇಶವಾಗಿ ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗಿದೆ ಎಂದರು.
ಹಿರಿಯ ವೈದ್ಯ ಹಾಗೂ ರೊಟರಿ ಕ್ಲಬನ ಅಧ್ಯಕ್ಷ ಡಾ. ಅಶೋಕ ಎಂ. ವಾಲಿ ಮಾತನಾಡಿ, ಬೀಜೀ ಜೀವನದಲ್ಲಿರುವ ವೈದ್ಯರು ಸಮಾಜದಲ್ಲಿ ಜನರ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗುತ್ತಾರೆ. ಪ್ರತಿಯೊಬ್ಬರಿಗೂ ಇಂದಿನ ದಿನಮಾನಗಳಲ್ಲಿ ವೈದ್ಯರ ಸಲಹೆ ಹಾಗೂ ಲ್ಯಾಬ್‌ ತಪಾಸಣೆ ಅತೀ ಮುಖ್ಯವಾಗಿದೆ, ಆರೋಗ್ಯ ತಪಾಸಣೆಯಿಂದ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ. ಒಂದು ವೇಳೆ ಜನರು ವೈದ್ಯರ ಸಲಹೆ ನಿರ್ಲಕ್ಷಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ ಆದ್ದರಿಂದ ಎಲ್ಲರು ತಮ್ಮ ತಮ್ಮ ಆರೋಗ್ಯ ವನ್ನು ಉತ್ತಮವಾಗಿಟ್ಟುಕೊಳ್ಳಲು ಎಚ್ಚರಿಕೆ ವಹಿಸಬೇಕು ಎಂದು ಕರೆ ಕೊಟ್ಟರು.
ಹಿರಿಯ ವೈದ್ಯ ಡಾ ಪ್ರಾಣೇಶ ಜಹಾಗೀರದಾರ ಅವರು ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು, ಮುಂಜಾಗ್ರತೆಯ ಕ್ರಮಗಳ ಮೂಲಕ ಅರೋಗ್ಯವನ್ನು ಚನ್ನಾಗಿ ಇಟ್ಟುಕೊಳ್ಳಬೇಕು ಎಂದ ಅವರು ರೊಟರಿ ಕ್ಲಬ ನಡೆಸುವ ಕಾರ್ಯಕ್ರಮಗಳ ಬಗ್ಗೆ ವಿವಿರ ನೀಡಿದರು.
ಸನ್ಮಾನ ಸ್ವೀಕರಿಸಿದ ನೇತ್ರ ತಜ್ಷ ಡಾ.ಪ್ರಭುಗೌಡ ಬಿ.ಎಲ್‌ ಮಾತನಾಡಿ, ಹಿಂದಿನ, ಇಂದಿನ ರೊಗಗಳು ಬೇರೆ ಯಾಗಿವೆ, ಉತ್ತಮ ಆರೋಗ್ಯಕ್ಕೆ ವೈದ್ಯರಿಂದ ಸಲಹೆ ಪಡೆದು ದೇಹಾರೋಗ್ಯ ಕಾಪಾಡಿಕೊಳ್ಳಬೇಕು. ವೈದ್ಯರಾದ ನಮ್ಮನ್ನು ಸನ್ಮಾನಿಸಿದ್ದು ನಮಗೆ ಮತ್ತಷ್ಟು ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದರು.
ಡಾ. ಬಿ.ವಾಯ್‌ ಸಾವಳಗಿ, ಡಾ, ಬಿ ಎಸ್‌ ತಮಗೊಂಡ. ಡಾ; ಎ ಎನ್‌ ತೊಬ್ಬಿ. ಡಾ. ಎ.ವಿ ಡಾಣಕಶಿರೂರ. ಡಾ. ನಿತೀನ ಟಿಕಾರೆ. ಡಾ.ಪ್ರಭುಗೌಡ ಪಾಟೀಲ್‌, ಡಾ. ಕೆ.ಆರ್‌ ಜೋಶಿ, ಡಾ.ಶ್ರೀಕಾಂತ ಮಿರಜಕರ. ಡಾ.ಎಸ್‌.ಎಸ್‌ ಯರನಾಳ. ಡಾ.ಸಿ.ಎಸ್‌ ಭೂಪಾಳೆ. ಡಾ.ರಮೇಶ ಕುಲಕರ್ಣಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯರಾದ ಅಮೃತ ತೋಶ್ನಿವಾಲ್‌, ಶೈಲೇಶ ಸಾವಳ, ವಿಠಲ್‌ ತೇಲಿ, ಶ್ರೀಕಾಂತ ಶಿರಾಡೋಣ, ದಿಲಿಪ ತಾಳಿಕೋಟಿ, ಸಹರ್ಶ ಶಹಾ, ಗುರುಶಾಂತ ನಿಡೋಣಿ, ಆನಂದ ಚಿನಿವಾಲ, ಬಸವರಾಜ ಕಡಪಟ್ಟಿ. ಉದಯ ಯಾಳವಾರ, ವಿಠಲ್‌ ಕಿರಸೂರ ಮುಂತಾದವರು ಪಾಲ್ಗೊಂಡಿದ್ದರು.
ವೇದಾಂತ ಶಿಖರ ಲ್ಯಾಬನ ಮುಖ್ಯಸ್ಥ ಮಲ್ಲು ಕಲಾದಗಿ ಸ್ವಾಗತಿಸಿದರು. ಸಹರ್ಶ ಶಹ ವಂದಿಸಿದರು. ಸುಮಾರು 500 ಜನರಿಗೆ ಉಚಿತ ರಕ್ತ ತಪಾಸಣೆ ಮಾಡಲಾಯಿತು. ಸೋಲಾಪುರಕರ್‌ ಅಧ್ಯಕ್ಷತೆ ವಹಿಸಿದ್ದರು. ಜಗದೇವಿ ಮಲ್ಲು ಕಲಾದಗಿ ವಂದಿಸಿದರು.

loading...