ಶತಮಾನದ ಚಂದ್ರಗ್ರಹಣ ನೋಡಲು ವಿಶ್ವ ಕಾತುರ

0
10
loading...

ಇಂದು ನಡೆಯುವ ವಿಸ್ಮಯಕ್ಕಾಗಿ ಈಡೀ ವಿಶ್ವವೇ ಕಾದು ಕುಳಿದೆ. ಇಂದು ರಾತ್ರಿ ಸಂಭವಿಸುವ ರಕ್ತ ಚಂದ್ರಗ್ರಹಣ ಇದು ೧೦೦ ವರ್ಷಗಳಿಗೊಮ್ಮೆ ನಡೆಯುವ ಈ ಕೌತುಕಕ್ಕೆ ಇಡಿ ವಿಜ್ಞಾನಲೋಕವೇ ಕುತೂಹಲದಿಂದ ಕಾಯುತ್ತಿದೆ. ಮತ್ತೊಂದು ಕಡೆದ ದೇವಾಲಯ ಬಾಗಿ ಬಂದ್ ಆಗಿರಲಿದ್ದು ಪೂಜೆ ಪುನಸ್ಕಾರ ಹೋಮ ಹವನ ಮಾಡಲು ಜನರಿಗೆ ತಿಳಿ ಹೇಳಲಾಗಿದೆ.
ಗ್ರಹಣದಿಂದ ಏನೋ ದುಷ್ಪರಿಣಾ ನಡೆಯಲಿದೆ ಎಂಬ ಮೂಢನಂಬಿಕೆಯನ್ನು ಬಿತ್ತಲಾಗುತ್ತಿದೆ.. ಅಷ್ಟೆÃ ಅಲ್ಲ ಜನ ಹಾಗೆ ನಂಬಿಕೊಂಡೇ ಬರುತ್ತಿದ್ದಾರೆ…. ಚಂದ್ರಗ್ರಹಣವು ಇಂದು ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ.
ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಲಿದೆ. ಇದು ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ. ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ.೩೧ ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು `ಸೂಪರ್ ಬ್ಲಡ್ ಮೂನ್’ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ `ಬ್ಲಡ್ ಮೂನ್’ ಎಂದು ಹೆಸರಿಸಲಾಗಿದೆ.
ಮಂಗಳ ಗ್ರಹವೂ ಚಂದ್ರನ ಸಮೀಪಕ್ಕೆ ಬರಲಿರುವುದು ಈ ಬಾರಿಯ ಚಂದ್ರಗ್ರಹಣದ ವಿಶೇಷ. ಅತಿ ದೀರ್ಘಾವಧಿ ಕೆಂಪು ಚಂದ್ರ ಬಾನಂಗಳದಲ್ಲಿ ಗೋಚರಿಸುತ್ತಾನೆ. ನೂರು ವರ್ಷಗಳಿಗೊಮ್ಮೆ ನಭೋಮಂಡಲದಲ್ಲಿ ಇಂತಹದ್ದೊಂದು ಕೌತುಕ ಸಂಭವಿಸುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೆÃ ನೋಡಲು ಸಾಧ್ಯವಿದೆ. ಜತೆಗೆ ಸಮೀಪದಲ್ಲೆÃ ಬರುವ ಮಂಗಳ ಗ್ರಹವನ್ನೂ ನೋಡಬಹುದು.
ಇಂದು ಸಂಭವಿಸಲಿರುವ ಖಗ್ರಾಸ್ ಕೇತು ಚಂದ್ರ ಗ್ರಹಣದ ನಿಮಿತ್ತ ಪೂರ್ವಾಷಾಢ, ಉತ್ತರಾಷಾಡ, ಶ್ರವಣ ನಕ್ಷತ್ರದವರು ಹಾಗೂ ಧನುರ್ ಮತ್ತು ಮಕರ ರಾಶಿಯವರು, ಜುಲೈ ೨೮ರಂದು ನಡೆಯುವ ಶಾಂತಿ ಹೋಮದಲ್ಲಿ ಪಾಲ್ಗೊಳ್ಳತ್ತಕ್ಕದ್ದು…. ಇದು ಬೆಂಗಳೂರಿನ ಕೆಲ ದೇವಸ್ಥಾನಗಳ ಮುಂದೆ ಹಾಕಲಾಗಿರುವ ಕರಪತ್ರಗಳ ಮಹಿಮೆ..
ಗ್ರಹಣ ಅಂದ್ರೆ ಜನರಲ್ಲಿ ಮೊದಲೇ ಅದೇನೋ ಒಂಥರ ಭಯ. ಜನರಲ್ಲಿನ ಭಯ ಹೋಗಲಾಡಿಸುವುದಕ್ಕೊÃ ಅಥವಾ ಭಕ್ತರನ್ನು ಆಕರ್ಷಿಸುವುದಕ್ಕೊÃ ಗೊತ್ತಿಲ್ಲ. ಇಲ್ಲಿನ ಪ್ರಮುಖ ದೇವಸ್ಥಾನಗಳಾದ ಕಾಡು ಮಲ್ಲೆÃಶ್ವರ, ಲಕ್ಷಿ÷್ಮÃ ನರಸಿಂಹಸ್ವಾಮಿ, ಗಂಗಮ್ಮ ದೇವಸ್ಥಾನಗಳಲ್ಲಿ ಈ ರೀತಿ ಎಚ್ಚರಿಕೆ ನೋಟಿಸ್ ಅಂಟಿಸಲಾಗಿದೆ. ಕೆಲವು ದೇವಾಲಯಗಳು ಅಂದು ತೆರೆಯುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದರೆ, ಮತ್ತೆ ಕೆಲವು ಶಾಂತಿ ಹೋಮ ನಡೆಸಿ ಎಂದು ಜನರಿಗೆ ಸಲಹೆ ನೀಡುತ್ತಿವೆ.

loading...