ಶಾರ್ಟ್‌ ಸಕ್ರ್ಯೂಟ್‌: ಮನೆಗೆ ಬೆಂಕಿ

0
7
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಶಾರ್ಟ್‌ ಸಕ್ರ್ಯೂಟ್‌ ನಿಂದ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆಯಲ್ಲಿದ್ದ ದವಸಧಾನ್ಯ ಸೇರಿ ವಿವಿಧ ಗೃಹ ಉಪಯೋಗಿ ಸಾಮಗ್ರಿಗಳು ಬೆಂಕಿಗಾಹುತಿಯಾದ ಘಟನೆ ಸಮೀದಪ ಬೂದಿಹಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಬೂದಿಹಾಳ ಗ್ರಾಮದ ಅಮೀರಸಾಬ ನದಾಫ ಎಂಬುವವರಿಗೆ ಸೇರಿದ ಮೆನಯಲ್ಲಿ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ಸದಸ್ಯರೆಲ್ಲ ಹೊರಗಡೆ ಮಲಗಿದ್ದಾಗ ಅವಘಡ ಸಂಭವಿಸಿದ್ದು, ಧವಸಧ್ಯಾನಗಳು, ಜಮೀನಿನ ಕಾದ ಪತ್ರಗಳು, ಟಿ.ವಿ, ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಗ್ರಾಮಸ್ಥರು ಬಂದು ಬೆಂಕಿಯನ್ನು ನಂದಿಸಿದರು. ಯಾವುದೇ ರೀತಿ ಪ್ರಾಣಹಾನಿಯಾಗಿಲ್ಲ ಎಂದು ಅಮೀರಸಾಬ ತಿಳಿಸಿದರು. ಘಟನೆ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರೀಶಿಲನೆ ಮಾಡಿ ತಹಶೀಲ್ದಾರ ಅವರಿಗೆ ಪರಿಹಾರ ನೀಡುವ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

loading...