ಶಿಕ್ಷಣದಿಂದ ಮಾತ್ರ ಸಾಮಾಜಿಕ ಪ್ರಗತಿ ಸಾಧ್ಯ: ಶಾಸಕ ಸಿದ್ದು

0
7
loading...

ಕನ್ನಡಮ್ಮ ಸುದ್ದಿ-ರಬಕವಿ ಬನಹಟ್ಟಿ: ವೃತ್ತಿ ಆಧಾರಿತ ಕಸಬುಗಳಿಂದ ಜೀವನ ನಿರ್ವಹಣೆ ಮಾಡುವುದು ಇತ್ತೀಚಿಗೆ ಕಷ್ಟಕರವಾಗುತ್ತಿದ್ದು, ಹಡಪದ ಸಮಾಜದ ಜನರು ತಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿಸುವುದರ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯ ಶಿವಶಿಂಪಿ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಶಿವ ಶರಣ ಹಡಪದ ಅಪ್ಪಣ್ಣನವರ 884ನೇ ಜಯಂಥೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧ್ಯ. ಹೀಗಾಗಿ ಹಡಪದ ಸಮಾಜದ ಜನರು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಾಂಗ ಕೊಡಿಸಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶ್ರಮಿಸಬೇಕು. ಸಮಾಜದ ಸಮುದಾಯ ಭವನ ನಿರ್ಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನ ಅನುಭಾವ ಮಂಟಪದಲ್ಲಿ ಸ್ಥಾನ ಪಡೆದಿದ್ದ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ತಮ್ಮ ಕಾಯಕ ನಿಷ್ಢೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದರು. ಈಗಲೂ ಹಡಪದ ಸಮುದಾಯದವರು ಸಂಕಷ್ಟದ ನಡುವೆಯೂ ಮಾನವೀಯ ಮೌಲ್ಯಗಳಿಂದ ಸಮಾಜದೊಂದಿಗೆ ಮುಕ್ತವಾಗಿ ಬೆರೆಯುವ ಮೂಲಕ ತಮ್ಮ ವೃತ್ತಿ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅಂತಹವರ ಸ್ಮರಣೆ ಹಾಗೂ ಸಮಾಜದ ಸಂಘಟನೆ ಅವಶ್ಯ. ಸಮಾಜ ತನ್ನದೇ ವ್ಯಕ್ತಿತ್ವದೊಂದಿಗೆ ಸಮೃದ್ಧಿಯಾಗಿ ಬೆಳೆಯಲಿ ಎಂದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ರಮೀಜಾ ಝಾರೆ, ನಿಖಿಲ ಕೊಣ್ಣೂರ, ಬುದ್ದಪ್ಪ ಕುಂದಗೋಳ, ಸಂಗಪ್ಪ ಕುಂದಗೋಳ, ತಾಲ್ಲೂಕು ಹಡಪದ ಸಮಾಜದ ಅಧ್ಯಕ್ಷ ಶರಣಪ್ಪ ಹಡಪದ, ಮಲ್ಲು ನಾವಿ ವೇದಿಕೆ ಮೇಲಿದ್ದರು.
ಸಮಾರಮಭದಲ್ಲಿ ಅಶೋಕ ಹುನ್ನೂರ, ಹನಮಂತ ನಾವಿ, ಮಲ್ಲು ನಾವಿ, ಪ್ರಭು ಯರಗಟ್ಟಿ, ಶಿವಾನಂದ ನಾವಿ, ನಾಗಪ್ಪ ನಾವಿ, ಶಂಕರ ಹಿಪ್ಪರಗಿ, ರಾಜು ನಾವಿ, ಪ್ರಕಾಶ ನಾವಿ, ಗಿರೀಶ ಹಡಪದ, ಬಸು ಹಿಪ್ಪರಗಿ, ಅಶೋಕ ಚಿಮ್ಮಡ, ಗಣೇಶ ನಾವಿ, ಚಂದ್ರಶೇಖರ ಮಾಚಕನೂರ, ಬಾಳು ನಾವಿ ಸೇರಿದಂತೆ ಅನೇಕರು ಇದ್ದರು. ಮಲ್ಲು ನಾವಿ ಸ್ವಾಗತಿಸಿದರು. ಗಿರಮಲ್ಲಪ್ಪ ನಾವಿ ವಂದಿಸಿದರು.

loading...