ಶೀಘ್ರ ಕಾಮಗಾರಿ ಪೂರ್ನಗೊಳಿಸಲು ಶಾಸಕ ಅಬ್ಬಯ್ಯ ಸೂಚನೆ

0
8
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ನಗರದಲ್ಲಿ ಕೈಗೊಳ್ಳಬೇಕಾದ ತುರ್ತು ಕಾರ್ಯಗಳು ಹಾಗೂ ಕೈಗೊಂಡಿರುವ ಕಾಮಗಾರಿಗಳ ಸ್ಥಿತಿಗತಿ ಕುರಿತು ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳೊಂದಿಗೆ ಕ್ಷೇತ್ರ ವ್ಯಾಪ್ತಿ ಸಂಚರಿಸಿ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿದರು.
ವಾರ್ಡ್‌ ನಂ. 62ರ ಅಯೋಧ್ಯಾನಗರ ಅಂಬೇಡ್ಕರ ಕಾಲನಿಯಲ್ಲಿ ಕೈಗೊಂಡಿರುವ 1 ಕೋ.ರೂ. ವೆಚ್ಚದ ಕಾಂಕ್ರೀಟ್‌ ರಸ್ತೆ ಹಾಗೂ ಸಿಸಿ ಗಟಾರ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕರು, ಪ್ರಸ್ತುತ ಮಳೆಗಾಲವಾದ್ದರಿಂದ ವಿಳಂಬ ಮಾಡದೇ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 1.5 ಕೋ.ರೂ. ಅನುದಾನದಲ್ಲಿ ನಿರ್ಮಿಸುತ್ತಿರುವ ಡಾ. ಬಿ.ಆರ್‌. ಅಂಬೇಡ್ಕರ ಸಮುದಾಯ ಭವನದ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನಷ್ಟು ಅನುದಾನದ ಅವಶ್ಯಕತೆ ಇದ್ದಲ್ಲಿ ಒದಗಿಸುವುದಾಗಿಯೂ ಭರವಸೆ ನೀಡಿದರು. ವಾರ್ಡ್‌ ನಂ. 63ರ ಶ್ರೀರಾಮ ಕಾಲನಿಯಲ್ಲಿ ಕೈಗೊಂಡಿರುವ ಕಾಂಕ್ರೀಟ್‌ ರಸ್ತೆಯನ್ನು ಪರಿಶೀಲಿಸಿದ ಶಾಸಕರು, ಹು-ಧಾ 1 ಕೇಂದ್ರ ಆರಂಭ, ಕಾಂಕ್ರೀಟ್‌ ರಸ್ತೆ, ಗಟಾರ ನಿರ್ಮಾಣ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಿದ್ದು, ಇನ್ನುಳಿದ ರಸ್ತೆಗಳನ್ನು ಶೀಘ್ರ ಅಭಿವೃದ್ದಿಪಡಿಸಲಾಗುವುದು. ಅಲ್ಲದೇ, ಬಹುಬೇಡಿಕೆಯ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಕ್ರಮಕೈಗೊಳ್ಳಲಾಗುವುದು ಎಂದ ಶಾಸಕರು, ಈ ಬಗ್ಗೆ ಕೂಡಲೇ ಸ್ಥಳ ಗುರುತಿಸಿ ಕ್ರಿಯಾಯೋಜನೆ ತಯಾರಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಲಂ ವಾಸಿಗಳ ಅರೋಗ್ಯ ಸುಧಾರಣೆಗಾಗಿ ಎಸ್‌.ಎಂ. ಕೃಷ್ಣ ನಗರ ಹಾಗೂ ಸೋನಿಯಾಗಾಂಧಿ ನಗರದಲ್ಲಿ ನಿರ್ಮಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಹಂತದ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಯಾಗದ ಬಗ್ಗೆ ಸಾಕಷ್ಟು ದೂರ ಬಂದ ಹಿನ್ನಲೇ ಅಧಿಕಾರೀಗಳಿಗೆ ಶೀಘ್ರವಾಗಿ ಕಸ ವಿಲೇವಾರಿ ಮಾಡಿ, ಹೂಳು ತೆಗೆಯುವಂತೆ ಹಾಗು ರಸ್ತೆ ಮಧ್ಯೆ ಬಾಯ್ತೆರೆದು ನಿಂತಿರುವ ಮ್ಯಾನ್ಹೋಲ್ಗಳನ್ನು ಮುಚ್ಚುವಂತೆ ಪಾದಚಾರಿಗಳು ಸಂಚರಿಸುವ ರಸ್ತೆಗಳಲ್ಲಿ ಬಿದ್ದಂತ ತೆಗ್ಗು ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.
ಪಾಲಿಕೆ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಪ್ರಭು ಪ್ರಭಾಕರ್‌ ಗಣೇಶ, ದೊಡ್ಡಮನಿ, ರಾಮಚಂದ್ರ ಹೊಸಮನಿ, ಪರಶುರಾಮ ಕಾಳೆ, ಮೋಹನ್‌ ಗೌಡ ಪ್ರಸನ್ನ ಮಿರಜಕರ್‌ ಬಾಬಾಜಾನ್‌ ಕಾರಡಗಿ, ಪಾಲಿಕೆ ಅಧಿಕಾರಿಗಳಾದ ಆನಂದ ಕಾಂಬ್ಳೆ, ಬಸವರಾಜ ಲಮಾಣಿ, ಪಿಡಬ್ಲ್ಯುಡಿ ಇಲಾಖೆಯ ವಿಜಯಕುಮಾರ್‌ ಕಟ್ಟಿಮನಿ, ಮುಂತಾದವರಿದ್ದರು.

loading...