ಶೇ.100 ರಷ್ಟು ಫಲಿತಾಂಶ ಗುರಿ ಸಾಧನೆಗೆ ಶಿಕ್ಷಕರು ಶ್ರಮವಹಿಸಬೇಕು: ತಳಬಾಳ

0
6
loading...

ಕನ್ನಡಮ್ಮ ಸುದ್ದಿ-ಅಬ್ಬಿಗೇರಿ: ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪಾಲಕರ ಸಹಕಾರ ಅಗತ್ಯವಾಗಿದ್ದು, ಈ ದಿಶೆಯಲ್ಲಿ ಶಾಲೆಯು ಶೇಕಡಾ 100 ರಷ್ಟು ಫಲಿತಾಂಶ ಸಾಧನೆಯ ಗುರಿ ಹೊಂದಿದ್ದು ಶಿಕ್ಷಕರು ಶ್ರಮವಹಿಸಬೇಕು, ಪಾಲಕರು ಸಹಕರಿಸಬೇಕು, ಮಕ್ಕಳು ನಿರಂತರ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ಇದು ಸಾಧ್ಯ ಎಂದು ಎಸ್.ಎ.ವಿ.ವಿ ಸಮಿತಿಯ ಸದಸ್ಯರಾದ ನಿವೃತ್ತ ಶಿಕ್ಷಕರಾದ ಎಂ.ಪಿ ತಳಬಾಳ ಹೇಳಿದರು. ಶ್ರೀ ಅನ್ನದಾನ ವಿಜಯ ಪ್ರೌಢಶಾಲೆ, ಅಬ್ಬಿಗೇರಿ ಶೇಕಡಾ 100 ರಷ್ಟು ಫಲಿತಾಂಶವೇ ಶಾಲೆಯ ಗುರಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪಾಲಕರ ಪ್ರಥಮ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಮಾತನಾಡಿದ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳ ಸ್ಥಾನವನ್ನು ಶ್ರೀ ಮಲ್ಲಿಕಾರ್ಜುನಪ್ಪ ಮೆಣಸಗಿಯವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎನ್. ಹೂಲಗೇರಿಯವರು ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರೊಂದಿಗೆ ಪಾಲಕರು ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದರು. ಶ್ರೀಮತಿ ಎಚ್ ಎಂ ರತ್ನಮ್ಮ ಪಾಲಕರೊಂದಿಗೆ ಸಂವಾದವನ್ನು ನಡೆಸಿ ಮಕ್ಕಳ ಕಲಿಕಾ ಪ್ರಗತಿಯ ಕುರಿತು ಚರ್ಚಿಸಿದರು. ಪಾಲಕರ ಪ್ರತಿನಿಧಿಯಾಗಿ ಶ್ರೀ ಶರಣಪ್ಪ ಮುಗಳಿ ಮತ್ತು ಶ್ರೀಮತಿ ಕಮಲಾಕ್ಷಿ ಕಾಳಗಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಎಂ.ಬಿ ಸಜ್ಜನರ ಶ್ರೀ ಎಂ ಎಂ ಗುಗ್ಗರಿ . ಸಹ ಶಿಕ್ಷಕಿಯರಾದ ಶ್ರೀಮತಿ ಎಸ್ ವಿ ಸೊಬರದ ಶ್ರೀಮತಿ ಬಿ.ಬಿ.ಶೆಟ್ಟರ, ಶ್ರೀಮತಿ ಎಸ್ ಜಿ ಗಿರಿತಿಮ್ಮಣ್ಣವರ .ಹಾಗೂ ಶ್ರೀ ನಾಗರಾಜ ರಡ್ಡೇರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಗಾಳಿಪಟ ಹಾರಿಸುವ ಸ್ಪರ್ಧೆ :ಅಬ್ಬಿಗೇರಿಯ ಶ್ರೀ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ಕಾರ ಹುಣ್ಣಿಮೆ ನಿಮಿತ್ಯ ವಿದ್ಯಾರ್ಥಿಗಳಿಗೆ ಗಾಳಿ ಪಟ ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನವನ್ನು ಕುಮಾರ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎನ್. ಹೂಲಗೇರಿ, ಸಹ ಶಿಕ್ಷಕರಾದ ಶ್ರೀ ಎಂ.ಬಿ ಸಜ್ಜನರ ಶ್ರೀ ಎಂ ಎಂ ಗುಗ್ಗರಿ . ಸಹ ಶಿಕ್ಷಕಿಯರಾದ ಶ್ರೀಮತಿ ಎಚ್ ಎಂ ರತ್ನಮ್ಮ,ಶ್ರೀಮತಿ ಆಯ್. ಜ್ಞಾನೇಶ್ವರಿ. ಶ್ರೀಮತಿ ಎಸ್ ವಿ ಸೊಬರದ ಶ್ರೀಮತಿ ಬಿ.ಬಿ.ಶೆಟ್ಟರ, ಶ್ರೀಮತಿ ಎಸ್ ಜಿ ಗಿರಿತಿಮ್ಮಣ್ಣವರ .ಹಾಗೂ ಶ್ರೀ ನಾಗರಾಜ ರಡ್ಡೇರ ಉಪಸ್ಥಿತರಿದ್ದರು.

loading...