ಶೈಕ್ಷಣಿಕ ಅಭಿವೃದ್ಧಿಗೆ ಪಾಲಕರು ಕೂಡ ಜವಾಬ್ದಾರರು: ದೇವೆಂದ್ರ

0
13
loading...

ಸಿಂದಗಿ: ಪ್ರತಿಯೊಂದು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸವಾಲೋಡ್ಡುವ ರೀತಿಯಲ್ಲಿ ವಸತಿ ನಿಲಯಗಳ ಸೌಲಭ್ಯಗಳನ್ನು ಒದಗಿಸಿ ಕೊಡುವದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಷ್ಟೆ ಜವಾಬ್ದಾರರಲ್ಲ ಪಾಲಕರು ಕೂಡಾ ಅಷ್ಟೆ ಜವಾಬ್ದಾರರು ಎಂದು ಪ್ರಾಚಾರ್ಯ ದೇವೆಂದ್ರ ದೊಡಮನಿ ಹೇಳಿದರು.
ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಪ್ರಪ್ರಥಮ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮಸ್ಥಾನ ಪಡೆದುಕೊಂಡಿದೆ ಅಲ್ಲದೆ ಜಿಲ್ಲೆಯಲ್ಲಿಯೇ ಕ್ರಿÃಡಾ ವಿಭಾಗದಲ್ಲಿ ಪ್ರಥಮಸ್ಥಾನದಲ್ಲಿ ಕಾರಣ ವಸತಿ ಶಾಲೆಗೆ ಬೇಟಿ ನೀಡುವ ಪಾಲಕರು ಬರೀ ಊಟದ ಬಗ್ಗೆ ವಿಚಾರಿಸದೇ ಶೈಕ್ಷಣಿಕ ಅಭ್ಯಾಸ ಮತ್ತು ಶಾಲಾ ವಾತಾವರಣ, ಆಟ ಪಾಠಗಳ ಅವಲೋಕನ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರಿÃಶೈಲ ಕೊರಳ್ಳಿ, ಸಂಜೀವಕುಮಾರ ಹಿರೋಳ, ಜಿ.ಎಸ್.ಬಿರಾದಾರ, ಶರಣು ಹೂಗಾರ, ರಾಜಶೇಖರ ಕುಂಬಾರ, ಎ.ಎಸ್.ಸಿಂಧೆ, ಶೋಭಾ ಬಜಂತ್ರಿ, ಲಕ್ಷಿö್ಮ ತಳವಾರ, ಪಿರಜಾದೆ, ಪಿ.ಎಂ.ಪಾಟೀಲ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ನಚಿಕೇತ ನಾಗರಾಳ, ರಾಜು ವಡ್ಡರ, ಧರ್ಮು ರಾಠೋಡ ಸೇರಿದಂತೆ ದೇವರ ನಾವದಗಿ, ಸೋಮಜ್ಯಾಳ, ಗಬಸಾವಳಗಿ, ವಿಭೂತಿಹಳ್ಳಿ, ಆಲಮೇಲ, ನಾಲತವಾಡ, ಬಿದರಕುಂದಿ ಅನೇಕ ಗ್ರಾಮಗಳಿಂದ ಪಾಲಕರು ಆಗಮಿಸಿ ಸಲಹೆ ಸೂಚನೆ ನೀಡಿದರು.

loading...