ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ

0
21
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದ ಅವಳಿ ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಡಿಸಿಪಿ ನೇಮಗೌಡ ನೇತೃತ್ವದ ತಂಡ ಚನ್ನಮ್ಮ ವೃತ್ತ, ಗ್ಲಾಸ್‌ ಹೌಸ್‌ ಹಾಗೂ ಐಟಿ ಪಾರ್ಕ್‌ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಪರವಾನಗಿ ಹೊಂದಿಲ್ಲದ, ಸೀಟ್‌ ಬೆಲ್ಟ್‌ ಧರಿಸದ, ಸೂಕ್ತ ದಾಖಲೆ ಇಲ್ಲದ ಹಾಗೂ ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ದಂಡ ಹಾಕಿ ಹಣ ವಸೂಲಿ ಮಾಡಿದ್ದಾರೆ.
ವಿವಿಧ ನಿಯಮ ಉಲ್ಲಂಘನೆ ಆರೋಪದ ಮೇಲೆ 314 ಮಂದಿ ವಿರುದ್ಧ ಪ್ರಕರಣ ದಾಖಲಿಸಿ 35 ಸಾವಿರ ದಂಡ ವಸೂಲಿ ಮಾಡಿದ್ದಾರೆ. ನಗರದಲ್ಲಿ ಸಂಚಾರ ನಿಯಮ ಜಾರಿ ಬಗ್ಗೆ ಕಠಿಣ ಕ್ರಮವನ್ನು ಪೊಲೀಸ್‌ ಇಲಾಖೆ ತೆಗೆದುಕೊಂಡಿದೆ. ನಗರ ಸಾರಿಗೆ ಬಸ್‌​​ಗಳಲ್ಲಿ ಕಾರ್ಯಾಚರಣೆ ನಡೆಸಿ ಮಹಿಳೆಯರು, ವೃದ್ಧರು, ವಿಲಕಚೇತನ ಸೀಟ್‌ ಮೇಲೆ ಕುಳಿತವರು ಹಾಗೂ ಡೋರ್‌​​ನಲ್ಲಿ ನೇತಾಡಿಕೊಂಡು ಸಂಚರಿಸುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದರು. ಪೊಲೀಸ್‌ ಇಲಾಖೆಯ ಈ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ.

loading...