ಸಂಸದರಿಗೆ ಪ್ರಧಾನಿ ಮೋದಿ ಮನವಿ

0
9
loading...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಅವಿಶ್ವಾಸ ಮತ ಎದುರಿಸುವ ಅಗ್ನಿ ಪರೀಕ್ಷೆ. ಇದರಲ್ಲಿ ಜಯ ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ ಇದ್ದರೂ ಸಹ ಲೋಕಸಭೆಯಲ್ಲಿ ನಡೆಯುವ ಕಲಾಪದ ಬಗ್ಗೆ ಕುತೂಹಲ ಉಂಟಾಗಿದೆ. ಎಲ್ಲರ ಚಿತ್ತ ಭಾರತದ ಶಕ್ತಿ ಕೇಂದ್ರದತ್ತ ಎನ್ನುವಂತಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನವಾದ ಶುಕ್ರವಾರ (ಇಂದು) ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ತೀವ್ರ ವಾದ-ವಾಗ್ವಾದ, ಗದ್ದಲ-ಕೋಲಾಹಲದ ವಾತಾವರಣ ಸಾಧ್ಯತೆ ಹಿನ್ನೆಲೆಯಲ್ಲಿ ಸಂಸದರು ಸಹನೆ-ಸಂಯಮ ಕಾಪಾಡಬೇಕು. ಮುಕ್ತ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರಧಾನಿ ಬಿಜೆಪಿ ಸಂಸದರಿಗೆ ಟ್ವಿಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆತ್ಮೀಯ ಸಂಸದರೇ ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಲ್ಲರೂ ವಿನಯದಿಂದ ವರ್ತಿಸಬೇಕೆಂದು ಟ್ವೀಟ್ ಮಾಡಿದ್ದಾರೆ.

loading...