ಸಕಾಲದಲ್ಲಿ ರೈತರಿಗೆ ಬೆಳೆ ಸಾಲ ಸಿಗದೆ ತೊಂದರೆ ಅನುಭವಿಸುವಂತಾಯಿತು: ವಿ.ಎಸ್‌.ಪಾಟೀಲ್‌

0
15
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ರಾಜ್ಯ ಸರ್ಕಾರ ರೈತರ ಒಂದು ಖಾತೆಗೆ 2 ಲಕ್ಷದ ವರೆಗೆ ಬೆಳೆ ಸಾಲ ಮನ್ನಾ ಮಾಡಿರುವ ಯೋಜನೆಯು ನಮ್ಮ ಜಿಲ್ಲೆಯ 83ಸಾವಿರ ರೈತರ ಪೈಕಿ 700 ರೈತರಿಗೆ ಮಾತ್ರ ಅನ್ವಯಿಸುವಂತಾಯಿತು. ಮತ್ತು ಹಿಂದಿನ ಸರ್ಕಾರ ಒಂದು ಖಾತೆಗೆ ತಲಾ 50 ಸಾವಿರ ಬೆಳೆ ಸಾಲ ಮನ್ನಾ ಮಾಡಿದರಲ್ಲಿ ಇನ್ನೂ 303 ಕೋಟಿ ರೂ ಇಲ್ಲಿಯವರೆಗೂ ಜಮಾ ಮಾಡದಿರುವುದರಿಂದ ಸಕಾಲದಲ್ಲಿ ರೈತರಿಗೆ ಬೆಳೆ ಸಾಲ ಸಿಗದೆ ರೈತರು ಪ್ರಸಕ್ತ ವರ್ಷ ತೊಂದರೆ ಅನುಭವಿಸುವಂತಾಯಿತು ಎಂದು ಮಾಜಿ ಶಾಸಕ ವಿ.ಎಸ್‌.ಪಾಟೀಲ್‌ ಹೇಳಿದರು.
ಅವರು ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸೋಮವಾರದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮನ್ನಾ ಮಾಡಿರುವ ಬೆಳೆ ಸಾಲದ ಮೊತ್ತವು ಜಮಾ ಆಗದಿದ್ದರೂ ಕೆ.ಡಿ.ಸಿ.ಸಿ. ಬ್ಯಾಂಕ್‌ನವರು ಸ್ವಂತ ಫಂಡಿನಿಂದ ರೈತರಿಗೆ ಸಾಲಕೊಡಬಹುದಿತ್ತು. ಯಾಕೆಂದರೆ ರೈತರಿಗೆ ಏನ ಬೆಳೆ ಸಾಲವನ್ನು ಕೆ.ಡಿ.ಸಿ.ಸಿ. ಬ್ಯಾಂಕ್‌ನವರು ಕೊಟ್ಟಿರುತ್ತಾರೂ ಆ ಅವಧಿಯಿಂದ ರಾಜ್ಯ ಸರ್ಕಾರದಿಂದ ಬಡ್ಡಿ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಯಡಿಯೂರಪ್ಪನವರು 25 ಸಾವಿರ ಬೆಳೆ ಸಾಲ ಮನ್ನಾ ಮಾಡಿದಾಗ ಮರು ಸಾಲ ಕೊಡುವ ಸಂದರ್ಭದಲ್ಲಿ ಕೆ.ಡಿ.ಸಿ.ಸಿ. ಮತ್ತು ಸಹಕಾರ ಸಂಘದವರು ಖಾತೆಗೆ 2 ಸಾವಿರ ರೂ ಬಡ್ಡಿ ರೂಪದಲ್ಲಿ ಕಡಿತ ಮಾಡಿದ್ದರು. ಇದು ರೈತರಿಗೆ ಮಾಡಿರುವ ಅನ್ಯಾಯ ಈ ಹಣವನ್ನು ಇವರೇ ತಿಂದಿದ್ದಾರೆ. ಇದರ ಬಗ್ಗೆ ಮಾಹಿತಿ ತಂದು ತೋರಿಸಲಿ ಎಂದು ಆರೋಪಿಸಿದರು.
ಈ ಹಿಂದೆ 50 ಸಾವಿರ ಬೆಳೆ ಸಾಲ ಮನ್ನಾ ಮಾಡಿದ್ದಾರೆ. ಇದರಲ್ಲಿ ಚಿಕ್ಕ ಹಿಡುವಳಿದಾರರಿಗೆ ಇಲ್ಲಿಯವರೆಗೂ ಸಾಲ ಕೊಟ್ಟಲ್ಲ. 50 ಸಾವಿರದ ಮೇಲೆ ಇರುವಂತಹ ಸಾಲವನ್ನು ಮಾತ್ರ ಕೊಟ್ಟಿದ್ದಾರೆ. ಈಗ 2 ಲಕ್ಷದವರೆಗೆ ಸಾಲ ಮನ್ನಾ ಮಾಡಿದ್ದಾರೆ ಇದು ಸರ್ಕಾರಕ್ಕೆ ಅಂದುಕೊಳ್ಳುವಷ್ಟು ಹೊರೆಯೇನಲ್ಲ. 34ಸಾವಿರ ಕೋಟಿ ಎಂದು ಹೇಳುತ್ತಾರೆ ಆದರೆ ಅಷ್ಟು ಆಗುವುದಿಲ್ಲ. 60ರಿಂದ 70ಸಾವಿರದೊಳಗೆ ಚಿಕ್ಕ ಹಿಡುವಳಿದಾರರ ಸಾಲ ಮುಗಿಯುತ್ತದೆೆÀ. ಹಾಗಾಗಿ ಬಜೆಟ್‌ನಲ್ಲಿ ಈಗಾಗಲೇ ಘೋಷಣೆ ಮಾಡಿದ 2ಲಕ್ಷ ಬೆಳೆಸಾಲ ಮನ್ನಾವನ್ನು ಸುಸ್ತಿದಾರರಿಗೆ ಬಿಟ್ಟು ಎಲ್ಲಾ ಖಾತೆಗಳಿಗೆ ಜಮಾ ಮಾಡಬೇಕು. ಮತ್ತು ಸಾಲ ಮನ್ನಾ ಮಾಡುವುದರ ಜೊತೆಗೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಟ್ಟರೆ ನಮ್ಮ ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ. ರೈತರು ಎಕರೆಗೆ 10ಕ್ವಿಂಟಾಲ್‌ ಬೆಳೆಯುವಲ್ಲಿ 20ಕ್ವಿಂಟಾಲ್‌ ಬೆಳೆಯುತ್ತಾರೆ. ಫಸಲ್‌ ಬೀಮಾ ಯೋಜನೆ ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಜಮಾ ಆಗುತ್ತದೆ. ಬೆಳೆ ವಿಮೆ ಜಮಾ ಆದ ಬಗ್ಗೆ ರೈತರಿಗೆ ಕೆ.ಡಿ.ಸಿ.ಸಿ. ಬ್ಯಾಂಕ್‌ ಮತ್ತು ಸಹಕಾರಿ ಸಂಘದವರು ತಿಳಿಸುವುದಿಲ್ಲ. ಅದು ರೈತರಿಗೆ ತಿಳಿಯಬೇಕೆಂದರೆ ರಾಜ್ಯ ಸರ್ಕಾರವು ಪಂಚಾಯಿತಿ ಮಟ್ಟದಲ್ಲಿ ಎಷ್ಟೆಷ್ಟು ಆಣೆವರಿ ಆಗಿದೆ ಎಂಬುದರ ಕುರಿತು ತಿಳಿಸಬೇಕು. ಸಿದ್ದರಾಮಯ್ಯನವರು ಮಾಡಿರುವ ರೈತರ ಸಾಲ ಮನ್ನಾ ಇನ್ನುವರೆಗೂ ಜಮಾ ಆಗಿಲ್ಲ. ಈಗ ಮಾಡಿರುವ ಸಾಲ ಮನ್ನಾ ಮುಂದಿನ ನಾಲ್ಕು ವರ್ಷದವರೆಗೂ ಜಮಾ ಆಗಬಹುದೇನೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯ ನುಡಿಯುತ್ತಾ ಘೋಷಣೆ ಮಾಡಿದ ಯೋಜನೆಗಳು ಕನಿಷ್ಠ ಒಂದು ವರ್ಷದೊಳಗಾದರೂ ಅನುಷ್ಠನಾಕ್ಕೆ ಬರಬೇಕು ಎಂದರು.

loading...