ಸಚಿವರಿಗೆ ಫ್ಲೈಓವರ್‌ ನಿರ್ಮಾಣದ ವರದಿ ಸಲ್ಲಿಕೆ

0
4
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಅವಳಿ ನಗರದಲ್ಲಿ ಫ್ಲೈಓವರ್‌ ನಿರ್ಮಾಣದ ಪರಿಷ್ಕೃತ ವಿಸ್ತೃತ ವರದಿಯ ಕುರಿತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮಾಹಿತಿ ನೀಡಿದ್ದು, ಸಮಗ್ರ ವರದಿ ವಿವರಿಸಲು ಆಗಸ್ಟ್‌ 4 ಅಥವಾ 5ರಂದು ಸಮಯ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಜಂಟಿಯಾಗಿ ಹೊಸದಿಲ್ಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದರು. ಈ ಮೊದಲು ಸಲ್ಲಿಸಿದ್ದ ವರದಿಯನ್ನು ಪರಿಷ್ಕರಿಸುವಂತೆ ನಿತಿನ್‌ ಗಡ್ಕರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ 700 ಕೋಟಿ ರೂ. ವೆಚ್ಚದ ಫ್ಲೈಓವರ್‌ ನಿರ್ಮಾಣ ಪರಿಷ್ಕೃತ ವರದಿ ಸಲ್ಲಿಸಿದ್ದಾರೆ. ಎಂದು ಮಹಾನಗರ ಬಿಜೆಪಿ ವಕ್ತಾರ ಉಮೇಶ ದುಶಿ ತಿಳಿಸಿದ್ದಾರೆ. ಪ್ರಸ್ತಾವನೆಗೆ ಕೇಂದ್ರ ಸರಕಾರದಿಂದ ಶೀಘ್ರ ಮಂಜೂರು ಪಡೆದು ಫ್ಲೈಓವರ ಕನಸನ್ನು ನನಸಾಗಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದು ದುಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...