ಸಚಿವರ ಗೈರು ಹಾಜರಿ ಕಂಡು ಸ್ಪೀಕರ್ ಗರಂ

0
19
loading...

ಬೆಂಗಳೂರು-ವಿಧಾನಸಭೆಯಲ್ಲಿ ಸಚಿವರ ಹಾಜರಾತಿ ಕೊರತೆಯನ್ನು ಕಂಡು ಗರಂ ಆದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು 15 ನಿಮಿಷದಲ್ಲಿ ಹಾಜರಿರಬೇಕಾದ ಸಚಿವರನ್ನು ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಆಡಳಿತ ಪಕ್ಷದ ಬಿ.ಸಿ.ಪಾಟೀಲ್ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಸರ್ಕಾರದಿಂದ ನಮಗೆ ನೀಡಿರುವ ಪಟ್ಟಿ ಪ್ರಕಾರ ಸದನದಲ್ಲಿ 13 ಮಂದಿ ಸಚಿವರು ಕಡ್ಡಾಯವಾಗಿ ಹಾಜರಿರಬೇಕಿತ್ತು. ಆದರೆ, ಆರು ಮಂದಿ ಸಚಿವರು ಮಾತ್ರ ಇದ್ದೀರಿ. ಉಳಿದ ಏಳು ಮಂದಿ ಸಚಿವರು ಬಂದಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಉಲ್ಲೇಖಿಸಿದ ಅವರು, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪಕಾಶಂಪುರ್, ಡಿ.ಕೆ.ಶಿವಕುಮಾರ್, ಎಂ.ಸಿ.ಮನಗೂಳಿ, ರಮೇಶ್‍ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ವೆಂಕಟರಾವ್ ನಾಡಗೌಡ, ಯು.ಟಿ.ಖಾದರ್, ಜಮೀರ್ ಅಹಮ್ಮದ್‍ಖಾನ್, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಸೇರಿದಂತೆ 13 ಮಂದಿ ಹಾಜರಿರಬೇಕಿತ್ತು. ಇನ್ನು 15 ನಿಮಿಷದಲ್ಲಿ ಸದನಕ್ಕೆ ಬಾರದ ಸಚಿವರನ್ನು ಕರೆಸಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಅವರಿಗೆ ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.

loading...