ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು: ಪ್ರಭುಲಿಂಗ ಶ್ರೀ

0
8
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು: ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು, ಮಕ್ಕಳು ಸಮಾಜದ ನಡೆಗಳ ಬಗ್ಗೆ ಜ್ಞಾನವನ್ನು ಗಳಿಸಿಕೊಳ್ಳಬೇಕು, ಹಿರಿಯರಿಗೆ ಗೌರವ ನೀಡಿ ವಿನಯವಂತರಾಗಬೇಕೆಂದು ತುಮ್ಮಿನಕಟ್ಟಿಯ ಮಠದ ಫ್ರಭುಲಿಂಗ ಮಹಾ ಸ್ವಾಮಿಜಿಗಳು ಹೇಳಿದರು.

ಇಲ್ಲಿಯ ಸಿದ್ದೇಶ್ವರ ನಗರದ ಮಾರ್ಕಡೇಶ್ವರ ದೇವಸ್ಥಾನದಲ್ಲಿ ಹಾವೇರಿ ಜಿಲ್ಲಾ ಪದ್ಮಶಾಲಿ ನೌಕರರ ಸಂಘ, ಪದ್ಮಶಾಲಿ ನೇಕಾರ ಸಮಾಜ ಸೇವಾಸಂಘ, ಮಾರ್ಕಂಡೇಶ್ವರ ಯುವಕ ಭಕ್ತ ಮಂಡಳಿ ಹಾಗೂ ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಜಿಲ್ಲಾ ಆಸ್ಪತ್ರೆ ಹಾವೇರಿ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು 2017-18ನೇ ಸಾಲಿನ ಎಸ್,ಎಸ್,ಎಲ್,ಸಿ ಮತ್ತು ಪಿ,ಯು,ಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಅವರು. ಮಕ್ಕಳು ಜವಾಬ್ದಾರಿಯುತವಾಗಿ ಅಬ್ಯಾಸ ಮಾಡಿದರೆ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬಹುದು, ಪ್ರತಿಯೊಬ್ಬರು ಮಕ್ಕಳು ಪ್ರತಿನಿತ್ಯ ಯೋಗ, ಪೂಜಾ ಹಾಗೂ ಗುರುಹಿರಿಯರಿಗೆ ಗೌರವನ್ನು ನೀಡುವುದನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಸಜ್ಜನರಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ|| ಬಸವರಾಜ ಕೇಲಗಾರ, ಸಮಾಜಕ್ಕೆ ಮತ್ತು ಯುವ ಪ್ರತಿಭೆಗಳಿಗೆ ಆಗಬಹುದಾದ ಅನೂಕೊಲತೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಗದಗ ಜಿಲ್ಲೆಯವರಾದ ಸಮಾಜದ ರಾಜ್ಯ ಉಪಾದ್ಯಕ್ಷ ಬಿ,ಟಿ ಚುಂಚಾರವರು ಮಾತನಾಡಿ, ಸಮಾಜದ ಬಂದುಗಳು ಯಾವ ರೀತಿ ಇರಬೇಕೆಂದು ಮಕ್ಕಳು ಯಾವ ಮಾರ್ಗದಲ್ಲಿ ನಡೆಯಬೇಕೆಂದು ಹಾಗು ರಾಜ್ಯ ಸಂಘದ ಕೆಲವು ಅನೂಕೊಲತೆಗಳನ್ನು ರಾಜ್ಯ ಸಂಘವು ನೀಡುತ್ತಾ ಬಂದಿರುತ್ತದೆ ಎಂದರು. ನ್ಯಾಯವಾದಿ ನಾಗರಾಜ ಕುಡುಪಲಿ ಮಾತನಾಡಿ, ಮಕ್ಕಳಿಗೆ ತಾವು ನಡೆದುಬಂದಂತಹ ಕಷ್ಟದ ದಿನಗಳನ್ನು ನೆನೆಯುತ್ತಾ ಮಕ್ಕಳಿಗೆ ತಿಳಿಹೇಳಿದರು ಮಕ್ಕಳು ಜವಾಬ್ದಾರಿಯುತವಾಗಿ ಅಬ್ಯಾಸ ಮಾಡಿದರೆ ಉನ್ನತ ಹುದ್ದೆಗಳಲ್ಲಿ ಮುಂದುವರೆಯಬಹುದೆಂದು ಹೇಳಿದರು.

ರಕ್ತದಾನ ಶಿಬಿರವನ್ನು ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ ಉದ್ಘಾಟಿಸಿದರು. ಪದ್ಮಶಾಲಿ ಸಮಾಜದ ಜಿಲ್ಲಾ ನೇಕಾರ ಒಕ್ಕೊಟದ ಕಾರ್ಯಧರ್ಶಿಗಳಾದ ಶಿವಾನಂದ ಬಗಾದಿ, ಮಂಜುನಾಥ ಹುಬ್ಬಳಿಯವರುವರಿಗೆ ಸನ್ಮಾನಿಸಲಾಯಿತು, 26 ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ಮಾಡಲಾಯಿತು, ಸುಮಾರು 30-40 ಮಂದಿ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದರು. ಹನುಮಂತಪ್ಪ ಮುಕ್ತೇನಹಳ್ಳಿ. ನಾಗರಾಜ ಅಗಡಿ, ನಾಗರಾಜ ಕುಡುಪಲಿ, ರಾಮಣ್ಣ ಗುತ್ತಲ, ಶಿವಣ್ಣ ಬಡೆಂಕಲ, ಲಕ್ಷ್ಮಣ ಕಡ್ಲಿಭಾಳ, ಬಸವರಾಜ ಐರಣಿ, ಮಾರುತಿ ಗರಡಿಮನಿ, ಪರಶುರಾಮ ಅಗಡಿ, ಯಲ್ಲಪ್ಪ ಗುತ್ತಲ, ಮಂಗಳಾ ಗುತ್ತಲ, ಸಂಜನಾ ಗುತ್ತಲ, ಸಚಿನ ತೆಂಬದಮನಿ, ಮಧುಸೂದನ ಗುತ್ತಲ, ಅಜಯ ಹುಲ್ಲತ್ತಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ನಾಗರಾಜು ಗುರಂ, ಸತ್ಯನಾರಾಯಣ ಅಗಡಿ ಸೇರಿದಂತೆ ಮತ್ತಿತರು ಇದ್ದರು.

loading...