ಸಮಾಜದ ಚಿಂತಕರಲ್ಲಿ ಅಪ್ಪಣ್ಣನವರು ಒಬ್ಬರು: ಹಣಮಂತ ನಿರಾಣಿ

0
24
loading...

ಬೀಳಗಿ: ಸಮಾಜದ ಚಿಂತಕರು ಬಸವಣ್ಣನವರ ಕಾಲದಲ್ಲಿ ಸಮಾನತೆ ಹರಿಕಾರರಾದ ಶರಣರಾದ ಹಡಪದ ಅಪ್ಪಣ್ಣವರು ಎಂದು ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಅವರು ತಾಲೂಕಾ ಆಡಳಿತ ಹಾಗೂ ತಾಲೂಕ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪಟ್ಟಣದ ಶಿವಾಜಿ ವೃತ್ತದಲ್ಲಿ ಶರಣ ಹಡಪದ ಅಪ್ಪಣ್ಣ ಭಾವ ಚಿತ್ರಕ್ಕೆ ಪೂಜೆ ನೇರವೆರಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. 12ನೇ ಶತಮಾನದಲ್ಲಿ ಜ್ಯಾತ್ಯಾತೀತ ನಿಲುವಿನ ಅನುಭವ ಮಂಟಪದಲ್ಲಿ ಬಸವಣ್ಣನವರು ನಿಜಸುಖಿ ಹಡಪದ ಅಪ್ಪಣ್ಣನವರನ್ನು ತಮ್ಮ ಅಪ್ತ ಕಾರ್ಯದರ್ಶಿಯನ್ನಾಗಿ ನೋಡಿಕೊಂಡು ತನ್ಮೂಲಕ ಜಾತಿಬೇದ ,ಲಿಂಗಬೇದ, ಮೌಡ್ಯಗಳನ್ನು ತೊಡೆದು ಹಾಕಲು ಎಡಬಿಡದೆ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಉಪಾಧ್ಯಕ್ಷೆ ರೂಪಾ ಹಿರೇಮಠ, ಪಪಂ ಅಧ್ಯಕ್ಷೆ ಕಸ್ತೂರಿ ಮಾದರ, ಜಿಪಂ ಸದಸ್ಯ ಹಣಮಂತ ಕಾಖಂಡಕಿ, ಕಸ್ತೂರಿ ಲಿಂಗಣ್ಣವರ, ಉಪ ತಹಸೀಲ್ಧಾರ ಎಂ.ಎಂ.ಜಮಖಂಡಿ, ಗುರುರಾಜ ಲೂತಿ ವಿಠ್ಠಲ ಹಿರೆನಿಂಗಪ್ಪನವರ, ರಮೇಶ ಹಡಪದ, ನೀಲಪ್ಪ ಬೂದಿಹಾಳ, ರವಿ ಕೋಲಾರ, ರವಿ ಹಡಪz,À ಮಲ್ಲು ಹಡಪz, ಸಾಗರ ನಾವಿ, ಮಹಾದೇವಪ್ಪ ಹಡಪದ ಮತ್ತಿತರು ಇದ್ದರು. ಪಟ್ಟಣದ ಶೆವಾಜಿ ವೃತ್ತದಿಂದ ಅಂಬೇಡಕರ ವೃತ್ತ ಬಸವ ವೃತ್ತ ಡಾ. ಅಂಬೇಡಕರ ವೃತ್ತದ ಮುಖಾಂತರ ನೂರಾರು ಮಹಿಳೇಯರು ಕುಂಭದೊಂದಿಗೆ ವಿವಿಧ ವಾಧ್ಯಗಳೊಂದಿಗೆ ಮೆರವಣಿಗೆ ಮಿನಿ ವಿಧಾನಸೌಧ ಆವರಣ ತಲುಪಿತು.

loading...