ಸಸಿ ನೆಟ್ಟು ಪರಿಸರ ಉಳಿಸುವುದು ಎಲ್ಲರ ಕರ್ತವ್ಯ:ಜಾರಕಿಹೊಳಿ

0
27
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಪರಿಸರ ರಕ್ಷಣೆ ಉಳಿಸಿ ಬೆಳೆಸುವ ಮೂಲಕ ರಾಷ್ಟ್ರ ಸಮೃದ್ಧವಾಗುತ್ತದೆ ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯು ಸಸಿ ನೆಟ್ಟು ಪರಿಸರವನ್ನು ಉಳಿಸುವುದು ಕರ್ತವ್ಯವಾಗಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ಸಮೀಪದ ಧುಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕ ಹಾಗೂ ಗ್ರಾಮ ಪಂಚಾಯತ ಧುಪದಾಳ,ಕರ್ನಾಟಕ ಅರಣ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ “ಹಸಿರು ಧುಪದಾಳಗಾಗಿ ಒಂದು ದಿನ” ಹಾಗೂ ಐದು ನೂರು ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವನಮೋತ್ಸವದಂತಹ ಕಾರ್ಯಕ್ರಮಗಳು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗದೇ ದೇಶ ಹಾಗೂ ರಾಜಾದ್ಯಂತ ನಿರಂತರವಾಗಿ ನಡೆಯಬೇಕು. ಯುವಕರು ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕು. ಯುವ ಸಮುದಾಯದಿಂದ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣಮಂತ ಗಾಡಿವಡ್ಡರ ವಹಿಸಿದ್ದರು. ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ ಎಸ್‌.ಐ ಬೆನವಾಡಿ, ಸುಧೀರ ಜೋಡಟ್ಟಿ, ಲಗಮಣ್ಣಾ ನಾಗಣ್ಣವರ, ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ, ಕಿರಣ ಸಣ್ಣಕ್ಕಿ, ವಲಯ ಅರಣ್ಯಾಧಿಕಾರಿ ಕೆ.ಎನ್‌.ವಣ್ಣೂರ, ಎಂ.ಎಸ್‌.ನಾಗಣ್ಣವರ, ಡಿ.ಎಂ.ದಳವಾಯಿ, ಪ್ರಕಾಶ ಡಾಂಗೆ, ಮದಾರಸಾಬ ಜಗದಾಳ, ರೇಹಮಾನ ಮೊಕಾಶಿ, ರವಿ ನಾವಿ, ವಸಂತ ತೆಳಗೇರಿ ಸೇರಿದಂತೆ ಇತರರು ಇದ್ದರು.

loading...