ಸಹಕಾರದಿಂದ ಸಮಾಜದ ಏಳ್ಗೆ ಸಾಧ್ಯ: ಸಿದ್ಧೇಶ್ವರ ಸ್ವಾಮೀಜಿ

0
10
loading...

ಕನ್ನಡಮ್ಮ ಸುದ್ದಿ
ಅಥಣಿ 22: ವ್ಯಕ್ತಿಯೋರ್ವನ ಸಾಧನೆ ಅದು ಮಿತಿಗೊಳಪಡುತ್ತದೆ. ಅದರೆ ಅದೇ ಹಲವು ಜನರು ಸೇರಿ ಸಹಕಾರದಡಿಯಲ್ಲಿ ಏನಾದರೂ ಮಾಡಿದರೆ ಅದು ಸಮಷ್ಠಿಗೊಳಪಡುತ್ತದೆ. ವ್ಯಕ್ತಿ ವ್ಯಕ್ತಿಗಳಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಸಹಕಾರ ಮನೋಭಾವದಿಂದ ಇದ್ದಲ್ಲಿ ವ್ಯಕ್ತಿ ಹಾಗೂ ಸಮಾಜದ ಏಳ್ಗೆಯಾಗುವುದು ಎಂದು ವಿಜಯಪೂರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಲಇಲ್ಲಿಯ ದಿ.ಅಥಣಿ ಕೋ-ಆಪ್,ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಅಂಗವಾಗಿ ಮೊಟಗಿಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮೇಲಿನಂತೆ ಮಾತನಾಡಿ ಒಂದು ಸಂಸ್ಥೆ ದೊಡ್ಡ ಸಂಸ್ಥೆಯಾಗಿ ಬೆಳೆದು ಬರಬೇಕಾದರೆ, ಒಂದು ಸಸಿ ಹೆಮ್ಮರವಾಗುವಲ್ಲಿ ರೆಂಬೆ ಕೊಂಬೆ ಮೊಗ್ಗು ಹೂವು ಕಾಯಿ ಹಣ್ಣು ಹೀಗೆ ಎಲ್ಲದರ ಸಹಾಕಾರದಡಿ ಬೆಳೆದು ಹೆಮ್ಮರವಾಗಿರುತ್ತದೆಯೋ ಹಾಗೆ ಸಹಕಾರ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆಯಬೇಕೆಂದರು.
ಚಿಕ್ಕೋಡಿ ಸಹಕಾರ ಸಂಘಗಳ ಉಪನಿಬಂಧಕ ಎಂ.ಬಿ.ಪೂಜಾರ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಗಳು ಪೈಪೋಟಿ ಒಡ್ಡುತ್ತಿವೆ. ಅಂತಹದರಲ್ಲಿ ಅಥಣಿ ಕೊ.-ಅಪ್ ಸೋಸ್ಯಟಿ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಸಹಕಾರಿ ಧುರೀಣ ಎಸ್ ಎಂ ನಾಯಿಕ ಮಾತನಾಡಿದರು.
ಲಸಾನಿಧ್ಯವನ್ನು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ವಹಿಸಿದ್ದರು. ರಜತ ಮಹೋತ್ಸವದ ಸವಿನೆನಪಿಗಾಗಿ ಶೇ.20 ಲಾಭಾಂಶ ವಿತರಣೆ ಪ್ರಮಾಣಪತ್ರ ವಿತರಿಸಲಾಯಿತು. ಸಂಘದ ಆದರ್ಶ ಸಾಧಕರಿಗೆ ಮತ್ತು ಸಂಸ್ಥೆಯ ಆಡಳಿತ ಮಂಡಳಿಗೆ ಮತ್ತು ಗುಂಡೆವಾಡಿ, ಕೊಕಟನೂರ ಶಾಖೆಗಳ ಸದಸ್ಯರನ್ನು ಸತ್ಕರಿಸಲಾಯಿತು. ಮೋಟಗಿಮಠದ ಸ್ವಾಮೀಜಿಯವರ ಕನ್ನಡ ಗಂಗೋತ್ರಿ ಎಂಬ ಧ್ವನಿತಟ್ಟೆ ಲೋಕಾರ್ಪಣೆಗೊಂಡಿತು.
ಲಪ್ರಾಸ್ತಾವಿಕವಾಗಿ ಸೋಸೈಟಿಯ ಅಧ್ಯಕ್ಷರಾದ ಮುರುಗೆಪ್ಪಣ್ಣ ತೊದಲಬಾಗಿ ಮಾತನಾಡಿ ಸಂಘ ಬೆಳೆಯಲು ಎಲ್ಲರ ಪರಿಶ್ರಮ, ಪ್ರಾಮಾಣಿಕ ಸೇವೆ , ಜನರ ನಂಬಿಕೆ ವಿಶ್ವಾಸ ಕಾರಣ ಎಂದರು. ಉಪಾಧ್ಯಕ್ಷ ಎಸ್ ಐ ಶಿವಣಗಿ, ನಿರ್ದೇಶಜರಾದ ಯು ಆರ್ ಗೆಲಾನಿ, ಎಸ್, ಡಿ ಸಿಂದಗಿ, ಎ.ಡಿ ತೊದಲಗಾಗಿ, ಬಿಎಲ್ ಅಳಿಕಟ್ಟಿ, ಎಸ್. ಎಂ ಮೇತ್ರಿ. ಎಲ್ ಎಂ ಶಿವಣಗಿ ಕಾರ್ಯದರ್ಶಿ ರವಿ ಪೋತದಾರ ಪಾಲ್ಗೊಂಡಿದ್ದರು.
ಲಸಮಾರಂಭದಲ್ಲಿ ಶೇಗುಣಿಯ ಶಂಕರಲಿಂಗ ಸ್ವಾಮೀಜಿ, ತುಬಚಿಯ ಸಾವಗೇಶ್ವರ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಆತ್ಮಾರಾಮ ಸ್ವಾಮೀಜಿ, ಗಣ್ಯರಾದ ಅರವಿಂದ ದೇಶಪಾಂಡೆ, ಬಿ.ಎಲ್ ಪಾಟೀಲ, ಶಂಭುಲಿಂಗ ಮಮದಾಪೂರ, ಶ್ರೀಶೈಲ ಸಂಕ, ಪ್ರಕಾಶ ಮಹಾಜನ, ಎಸ್. ಎ ಮುದಕಣ್ಣವರ ಮೊದಲಾದವರು ಉಪಸ್ಥಿತರಿದ್ದರು. ವಿಜಯ ಹುದ್ದಾರ ಹಾಗೂ ಗೋಕಾಕದ ಸಂಗೀತ ಬಳಗದವರಿಂದ ಗಾಯನ ಕಾರ್ಯಕ್ರಮ ಜರುಗಿತು.
..

loading...