ಸಾಮಾಜಿಕ ಪಿಡುಗು ಹೋಗಲಾಡಿಸಲು ಜನಸಂಖ್ಯೆ ನಿಯಂತ್ರಣ ಅವಶ್ಯ

0
6
loading...

ಕನ್ನಡಮ್ಮ ಸುದ್ದಿ-ಬ್ಯಾಡಗಿ: ದೇಶದಲ್ಲಿ ನೀರುದ್ಯೋಗ, ಭ್ರಷ್ಟಾಚಾರ, ಭಯೋತ್ಪಾದನೆ, ಅನಕ್ಷರತೆ ಸೇರಿದಂತೆ ಇನ್ನೂ ಅನೇಕ ಸಾಮಾಜಿಕ ಪಿಡಗುಗಳನ್ನು ಹೊಗಲಾಡಿಸಬೇಕಾದರೆ ಜನಸಂಖ್ಯೆ ನಿಯಂತ್ರಿಸುವ ಅನಿವಾರ್ಯತೆ ಇದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸದರು.
ಪಟ್ಟಣದ ಎಸ್‌.ಜೆ.ಜೆ.ಎಮ್‌ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಲಯ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬ್ಯಾಡಗಿ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಜನಸಂಖ್ಯೆ ತಿವ್ರ ಹೆಚ್ಚಳದ ಕಾರಣ ಸ್ವಾತಂತ್ರ್ಯದ 50 ದಶಕಗಳ ನಂತರ, ಭಾರತದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಬಡತನರೇಖೆಯ ಕೆಳಗಿದ್ದಾರೆ. ದೇಶದ ಪ್ರಗತಿ ಮತ್ತು ಅಭಿವೃದ್ದಿಯ ಪೂರ್ಣ ಲಾಭ ಪಡೆಯಲು ಸಾದ್ಯವಿಲ್ಲ. ಜನಸಂಖ್ಯೆಯನ್ನು ನಿಯಂತ್ರಿಸಿದಾಗ ಮಾತ್ರ ಹಸಿವು, ಬಡತನ, ನಿರುದ್ಯೋಗ ಇತರ ಸಾಮಾಜಿಕ ಮತ್ತು ಆರ್ಥಿಕ ದುಷ್ಕೃತ್ಯಗಳ ವಿಮೋಚನೆ ಹೊಡೆದು ಹಾಕಬಹುದು ಎಂದರು. ತಾಲೂಕಾ ಆರೋಗ್ಯ ಅಧಿಕಾರಿ ಬಿ.ಆರ್‌.ಲಮಾಣಿ ಮಾತನಾಡಿ, ಜನಸಂಖ್ಯೆ ನಿಯಂತ್ರಿಸಲು ಸರಕಾರ ಅನೇಕ ಯೋಜನೆಗಳನ್ನು ಈಗಾಗಲೆ ತೆಗೆದುಕೊಂಡಿದ್ದು, ಕುಟುಂಬ ಯೋಜನೆ, ಐಯುಸಿಡಿ, ಶಾಶ್ವತ ಮತ್ತು ತಾತ್ಕಾಲಿಕ ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೊಳಿಸಿದೆ. ಜನರು ಇತ್ತಿಚಿನ ದಿನಗಳಲ್ಲಿ ಸರಕಾರದ ಯೋಜನಿಗೆ ಉತ್ತಮ ಸ್ಪಂದನೆ ನಿಡುತ್ತಿದ್ದಾರೆ. ಈ ಮೂಲನ ಜನಸಂಖ್ಯೆಯನ್ನು ನಿಯಂತ್ರಿಸಲು ಸಾರ್ವಜನಿಕರು ಕೂಡಾ ಮುಂದಾಗಬೆಕೇಂದರು.
ಈ ಸಂದರ್ಭದಲ್ಲಿ ರಾಮಣ್ಣ ಉಕ್ಕುಂದ, ವಿರೇಂದ್ರ ಶೆಟ್ಟರ, ಚಂದ್ರಣ್ಣ ಮುಚ್ಚಟ್ಟಿ, ಚಂದ್ರಪ್ಪ ಬಾರ್ಕಿ, ತಾಲೂಕ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಪುಟ್ಟರಾಜ, ಹಿರಿಯಕ್ಕವನರ, ಸದಾನಂದಯ್ಯ ಹಿರೇಮಠ ಇದ್ದರು.

loading...