ಸಾರಾಯಿ ಅಂಗಡಿಗಳ ಬಂದ್‌ಗೆ ಒತ್ತಾಯ

0
27

ವಿಜಯಪುರ : ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಎಗ್ಗಿಲ್ಲದೇ ಸಾರಾಯಿ ಅಂಗಡಿಗಳು ತಲೆ ಎತ್ತಿವೆ, ಕೂಡಲೇ ಈ ಎಲ್ಲ ಸಾರಾಯಿ ಅಂಗಡಿಗಳನ್ನು ಬಂದ್‌ ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಂಜಗಿ ಗ್ರಾಮದ ಮಹಿಳೆಯರು, ನಿವಾಸಿಗಳು ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ರಾಜು ಹಿರೇಮಠ ಮಾತನಾಡಿ, ಹಂಜಗಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಅಕ್ರಮ ಸರಾಯಿ ಅಂಗಡಿಗಳು ಬೆಳೆಯುತ್ತಿವೆ. ಕೂಡಲೇ ಈ ಎಲ್ಲ ಸಾರಾಯಿ ಅಂಗಡಿಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕು. ಹಂಜಗಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಅಂಗಡಿಯಿಂದ ಗ್ರಾಮದ ಪ್ರತಿಯೊಬ್ಬರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಸಾರಾಯಿ ಕುಡಿದು ತಮ್ಮತನವನ್ನು ಕಳೆದುಕೊಂಡು ದಿನ ನಿತ್ಯ ಗಲಾಟೆ, ಜಗಳ ಮುಂತಾದವುಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅಬಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮದಲ್ಲಿರುವ ಸಾರಾಯಿ ಅಂಗಡಿಗಳನ್ನು ಬಂದ್‌ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಚವ್ಹಾಣ, ನಾಗರಾಜ ದೊಡಮನಿ, ಪಿಂಟು ಗೊಬ್ಬರ, ರಿಯಾಜ ಪಾಂಡು, ಮುಸ್ತಾಕ ಪಾಂಡು, ಅಜೀಜ ಸೈಯ್ಯದ, ರಾಜಣ್ಣ ಸೈಯ್ಯದ, ಸಚಿನ ರಾಠೋಡ, ಸುನೀಲ ಜಾಧವ, ಮಾದು ನಾವಿ ಮುಂತಾದವರು ಉಪಸ್ಥಿತರಿದ್ದರು.

loading...