ಸಾರ್ವಕಾಲಿಕ ಏರಿಕೆ ದಾಖಲಿಸಿದ ಷೇರುಪೇಟ

0
13
loading...

ನವದೆಹಲಿ: ಷೇರು ಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿದ್ದು, ಷೇರು ಸೂಚ್ಯಂಕ ಸಾರ್ವಕಾಲಿಕ ಏರಿಕೆ ದಾಖಲಿಸಿದೆ.
ಮುಂಜಾನೆ ಷೇರುಪೇಟೆ ಆರಂಭವಾದಾಗ 259 ಅಂಕಗಳಷ್ಟು ಏರಿಕೆ ಕಾಣುವ ಮೂಲಕ ಸಂವೇದಿ ಸೂಚ್ಯಂಕ 36,525 ಅಂಕಗಳಿಗೆ ಏರಿಕೆ ಕಂಡಿತು. ಈ ಮೂಲಕ ದಾಖಲೆ ಬರೆಯಿತು.
ಏರಿಕೆಗೆ ಕಾರಣಗಳೇನು…?
ಮೊದಲ ತ್ರೈಮಾಸಿಕದಲ್ಲಿ ಷೇರುಪೇಟೆ 12.8 ರಷ್ಟು ಪ್ರಗತಿ ಸಾಧಿಸಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಷೇರುಪೇಟೆ ಏರಿಕೆ ದಾಖಲಿಸಲು ಕಾರಣ ಎನ್ನಲಾಗಿದೆ.
ಇನ್ನು ಷೇರುಪೇಟೆಯ ಧೈತ್ಯ ಕಂಪನಿ ಟಿಸಿಎಸ್ ಈ ತ್ರೈಮಾಸಿಕದಲ್ಲಿ ಸುಮಾರು 24 ರಷ್ಟು ಪ್ರಗತಿ ಸಾಧಿಸಿರುವುದು ಕೂಡಾ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ.
ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ವರದಿಯಲ್ಲಿ ಫ್ರಾನ್ಸ್ ಹಿಂದಿಕ್ಕಿ ಭಾರತ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಸುದ್ದಿ ಹೂಡಿಕೆದಾರರನ್ನು ಉತ್ತೇಜಿಸಿದೆ.
ಇನ್ನು ಜಾಗತಿಕ ಆರ್ಥಿಕ ಚೇತರಿಕೆಯಿಂದಾಗಿ ಷೇರುಪೇಟೆಯಲ್ಲಿ ಗೂಳಿ ಅಬ್ಬರ ಜಾಸ್ತಿಯಾಗಿದೆ.

loading...