ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸುರಿಮಳೆ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ

0
1
loading...

ಮುರಾರಿ ಭಜಂತ್ರಿ
ಕೂಕನೂರು: ಮೂವತ್ತು ಹಾಸಿಗೆಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕಿನ ವಿವಿಧ ಭಾಗಗಳಿಂದ ದಿನನಿತ್ಯ ರೋಗಿಗಳು ಆಗಮಿಸುತ್ತಾರೆ. ಆಸ್ಪತ್ರೆಗೆ ರೋಗಿಗಳ ಜvಗೂ ಬಂದಿರುತ್ತಾರೆ. ಇರುವ ಕೆಲವು ಶೌಚಾಲಯಗಳು ಗಬ್ಬು ನಾರುತ್ತಿವೆ. ಶೌಚಾಲಯದ ರೂಮುಗಳ ಬಾಗಿಲುಗಳು ಕಿತ್ತು ಹೋಗಿವೆ. ನೀರಿನ ವ್ಯವಸ್ಥೆ ಯಂತೂ ಇಲ್ಲವೇ ಇಲ್ಲ. ಶೌಚಾಲಯದ ಬೇಸಿನ್, ಮೂತ್ರದೊಡ್ಡಿಯ ಬೇಸಿನ್‍ಗಳು ಪಾಚಿಗಟ್ಟಿ ಹಳದಿ ಬಣ್ಣಕ್ಕೆ ತಿರುಗಿ ಕಾಮಾಲೆ ರೋಗಬಂದಂತಾಗಿವೆ. ಶೌಚಾಲಯಕ್ಕೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ರೋಗದ ಗೂಡಾಗಿ ಮಾರ್ಪಾಡುತ್ತಿದೆ.
ಆಸ್ಪತ್ರೆ ಸುತ್ತಮುತ್ತಲಿನ ಸ್ಥಳ ಕೊಳಚೆ ನೀರಿನಿಂದ ತುಂಬಿದೆ. ಹಂದಿಗಳ ವಾಸ ಸ್ಥಳವಾಗಿದೆ. ಇದರಿಂದ ಸೊಳ್ಳೆಗಳ ಸಂಖ್ಯೆಗಳು ಹೆಚ್ಚಾಗಿವೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಉಪಟಳ ಹೆಚ್ಚಾಗಿದೆ. ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಬರುವವರು ಶೌಚಾಲಯ ದುರ್ನಾತದಿಂದ, ಶುಚಿತ್ವ ಕೊರತೆಯಿಂದ ಹುಟ್ಟಿಕೊಳ್ಳುವ ಕ್ರಿಮಿಕಿಟಗಳಿಂದ ಹೊಸ ರೋಗವನ್ನು ಅಂಟಿಸಿಕೊಂಡು ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವ್ಯವಸ್ಥೆಗಳ ಆಗರವಾದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಇಲ್ಲದೆ ಪರದಾಡುವಂತಾಗಿದೆ.
ಇಲ್ಲಿನ ಸಿಬ್ಬಂದಿ ಜನನ, ಮರಣ, 371-ಜೆ ಮುಂತಾದ ಪ್ರಮಾಣ ಪತ್ರಗಳ ದೃಢೀಕರಣಕ್ಕಾಗಿ ತೆರಳಿದ ಜನರೊಡನೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜನ ದೂರುತ್ತಿದ್ದಾರೆ.
ಆರೋಗ್ಯ ಕೇಂದ್ರದ 2 ತುರ್ತು ವಾಹನದಲ್ಲಿ 1 ವಾಹನ ತುರ್ತುವಾಹನ ರೀಪೆರಿಯಾಗದೆ ಆಸ್ಪತ್ರೆಯ ಆವರಣದಲ್ಲೆ ಉಳಿದಿದೆ. ಮಳೆ, ಬಿಸಿಲಿಗೆ ತುಕ್ಕುಹಿಡಿಯುತ್ತಿದೆ. ಮಳೆ ಬಂದರೇ ಆಸ್ಪತ್ರೆ ಆವರಣದಲ್ಲಿ ನೀರು ನಿಲ್ಲುತ್ತದೆ. ಪಪಂ ಮಂಡಲಿ ಸಿಸಿ ರಸ್ತೆ ನಿರ್ಮಿಸಲು ಹಿಂದೇಟು ಹಾಕುತ್ತಿದೆ. ಮಳೆಯ ನೀರಿನಲ್ಲಿಯೇ ರೋಗಿಗಳು, ಸಾರ್ವಜನಿಕರು, ವೈದ್ಯರು ಸಂಚರಿಸುವ ಸಂದರ್ಭ ಮಳೆಗಾಲದಲ್ಲಿ ಬಿಡುಗಡೆಯಿಲ್ಲದಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಇಲ್ಲಿಗೆ ಬರುವ ಜನರಿಗೆ ಕುಡಿಯಲು ಸಮರ್ಪಕ ನೀರು ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಆಸ್ಪತ್ರೆಯಲ್ಲಿ ಇನ್ವೆಟರ್ ಇದ್ದು ಇಲ್ಲದಂತಾಗಿದೆ. ಕರೆಂಟ್ ಹೋದಕೂಡಲೆ ಸಿಕ್ಕಿದ್ದೆ ಚಾನ್ಸ್ ಎನ್ನುವಂತೆ ಸರಕಾರಿ ಆಸ್ಪತ್ರೆಯಿಂದ ವೈದ್ಯರಗಳು ಮನೆಕಡೆಗೆ ಮುಖ ಮಾಡುತ್ತಾರೆ ಎನ್ನುತ್ತಾರೆ ರೋಗಿಗಳೊಬ್ಬರು. ನರ್ಸ ಸಿಬ್ಬಂದಿ ಮೊಬೈಲ್ ಟಾರ್ಚ್ ಹಿಡಿದು ರೋಗಿಗಳಿಗೆ ಚುಚ್ಚು ಮದ್ದು ನೀಡುತ್ತಾರೆ. ಆಸ್ಪತ್ರೆಗೆ ಬೆಳಕು ಇಲ್ಲದಿರುವುದು ರೋಗಿಗಳನ್ನು ಮತ್ತಷ್ಟು ಕತ್ತಲೆಗೆ ದೂಡೂತ್ತಿದೆ.
ಹೆಸರಿಗೆ 30 ಹಾಸಿಗೆ ಆಸ್ಪತ್ರೆಯಾದರೂ ಇರುವುದ ಕೆವಲ 20 ಹಾಸಿಗೆಗಳು ಮಾತ್ರ. ತಾಯಿ ಚಿಕಿತ್ಸೆ, ಮುಂತಾದ ವಿಶೇಷ ಚಿಕಿತ್ಸೆಗಳು ಜರುಗಿದಾಗ ಚಿಕಿತ್ಸೆಗೆ ಒಳಗೊಂಡವರು ನೆಲವ್ನನೇ ಅವಲಂಬಿಸಬೇಕಾಗುತ್ತದೆ.
ಆಸ್ಪತ್ರೆಗೆ 5 ಜನ ವೈದ್ಯರ ಪೈಕಿ 4 ವೈದ್ಯರಿದ್ದಾರೆ. ಒಬ್ಬರು ಮಕ್ಕಳ ತಜ್ಞರ ಅವಶ್ಯವಿದೆ. ದಂತ ವೈದ್ಯಾಧಿಕಾರಿಗಳಿದ್ದರೂ ಸಲಕರಣೆ ಇಲ್ಲ. 10 ಜನ ಸ್ಟಾಫ್ ನರ್ಸ್‍ನಲ್ಲಿ 8 ಜನ, ಲ್ಯಾಬ್ ಟೆಕ್ನಿಸಿಯನ್ 4 ಜನಕ್ಕೆ 4, ಔಷಧ ವಿತರಕರು 2 ರಲ್ಲಿ ಒಬ್ಬರು, ಎಕ್ಷ್ ರೇ 2 ರಲ್ಲಿ 1, ಡಿ ಗ್ರೂಪ್‍ನಲ್ಲಿ 10 ಜನರಲ್ಲಿ 8 ಜನ ಮಾತ್ರ ಇದ್ದಾರೆ. ಆಸ್ಪತ್ರೆ ಕಂಪ್ಯೂಟರ್ ಆಪರೇಟರಾಗಿ ಒಬ್ಬರೂ ಇಲ್ಲದಂತಾಗಿದೆ.
ಹಾಗೆ 4 ಜನ ಸಮುದಾಯ ಆರೋಗ್ಯಾಧಿಕಾರಿಗಳಿದ್ದು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು 4 ರಲ್ಲಿ 3, ಪುರುಷ ಆರೋಗ್ಯ ಸಹಾಯಕ 4 ರಲ್ಲಿ 3 ಜನ ಮಾತ್ರ ಇದ್ದಾರೆ.
ಒಟ್ಟಾರೆ 33 ಜನ ಸದ್ಯ ಆಸ್ಪತ್ರೆಯಲ್ಲಿದ್ದರೂ ಕೂಡಾ ಆಸ್ಪತ್ರೆ ಅಸ್ವಚ್ಚತೆಯ ಗೂಡಾಗುತ್ತಿರುವುದು ದುರಂತ.
ಆಸ್ಪತ್ರೆ ಸ್ವಚ್ಛತೆ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ರೋಗಿಗಳು ಆರೋಗ್ಯ ಅರಸಿ ಬಂದರೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಬಸವರಾಜ ಅಡವಿ, ಕನಕಪ್ಪ ಬ್ಯಾಡರ್ ಪಪಂ ಸದಸ್ಯರು ಕುಕನೂರು

ಈ ಆಸ್ಪತ್ರೆಯಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಕರೆಂಟ್ ಇಲ, ನೀರಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಿ.
ರವಿಕುಮಾರ ಚಲುವಾದಿ ಸ್ಥಳೀಯರು.
ವೈದ್ಯರ ಕೊರತೆಯಿದೆ. ಇನ್ನೂ ಹೆಚ್ಚಿನ ಸಿಬ್ಬಂದಿ ಇಲಾಖೆ ಒದಗಿಸಬೇಕಿದೆ. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಸಿಬ್ಬಂದಿಗೆ ತಿಳಿಸುತ್ತೇನೆ.
ಸಿ.ಎಮ್ ಹಿರೇಮಠ, ವೈದ್ಯಾಧೀಕಾರಿ ಸಮುದಾಯ ಆರೋಗ್ಯ ಕೇಂದ್ರ, ಕುಕನೂರು.

loading...