ಸಾರ್ವಜನಿಕ ಶೌಚಾಲಯ ಶುಚಿಗೊಳಿಸಿದ ಮಹಿಳೆಯರು

0
4
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 24: ಸದಲಗಾ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಮಹಿಳೆಯರು ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡಿ ಮಳೆಗಾಲದಲ್ಲಿ ಶೌಚಾಲಯಗಳು ಗಬ್ಬು ವಾಸನೆ ಹರಡುವುದು ಮತ್ತು ರೋಗ ರುಜಿನುಗಳು ಹರಡುವುದರಿಂದ ಕಾಯಿಲೆಗೆ ತುತ್ತಾಗುವ ಸಂಭವ ಇರುತ್ತದೆ. ಅದಕ್ಕಾಗಿ ಮಹಿಳೆಯರು ಒಗ್ಗಟ್ಟಿನಿಂದ ಒಂದುಗೂಡಿ ಸಾರ್ವಜನಿಕ ಶೌಚಾಲಯ ತಮ್ಮ ಮನೆಯ ಸ್ವಂತ ಶೌಚಾಲಯ ಅಂತಾ ತಿಳಿದು ಸ್ವಚ್ಛ ಮಾಡಿದರು.
ಸ್ವಚ್ಚತೆಯಲ್ಲಿ ಪಾಲ್ಗೊಂಡ ಮಹಿಳೆಯರು ಮಾತನಾಡಿ, ಈ ಶೌಚಾಲಯ ಯಾಕೆ ಸ್ವಚ್ಛ ಮಾಡುತ್ತಿದ್ದೇವೆ ಅಂದರೆ ನಾವು ಕೂಡ ಬೇರೆ ನಮ್ಮ ಸಂಬಂಧಿಕರ ಊರಿಗೆ ಹೋದರೆ ಅಲ್ಲಿಯ ಗಬ್ಬು ವಾಸನೆ ನೋಡಿ ಮೂಗು ಮುಚ್ಚಿಕೊಂಡು ಆ ಊರಿಗೆ ನಾವು ಎಂತಾ ಹೊಲಸು ಊರು ಅಂತಾ ಹೆಸರು ಇಟ್ಟು ಬರುವ ಪರಿಸ್ಥಿತಿ ಇರುತ್ತದೆ.
ಆದ್ದರಿಂದ ನಾವೆಲ್ಲ ಮಹಿಳೆಯರು ನಮ್ಮ ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡಿ ಒಂದು ಮಾದರಿ ನಗರ ಅಂತಾ ಮಾಡುತ್ತಿದ್ದೇವೆ. ನಮ್ಮ ಉರಲ್ಲಿ ಯಾರೆ ಬೇರೆ ಊರಿಂದ ಸಂಬಂಧಿಕರು ಬರಲಿ ನಮ್ಮ ಶೌಚಾಲಯಗನ್ನು ನೋಡಿ ಹೊಗಳಬೇಕು ಹೊರತಾಗಿ ಮೂಗು ಮುಚ್ಚಿಕೊಂಡು ಹೋಗಬಾರದು ಅನ್ನುವುದೇ ನಮ್ಮ ಆಶಯ ಎಂದರು.
ಮಾಯಾ ನಂದೆ, ಸುನಿತಾ ನವಲೆ, ಶೋಭಾ ನವಲೆ, ಅನಿತಾ ಮಾಳಗೆ, ರೇಶ್ಮಾ ನವಲೆ, ರೂಪಾ ಮಾಳಗೆ, ಸರಳಾ ನವಲೆ, ಪ್ರವಿಣಾ ಕಾಂಬಳೆ, ವಂದನಾ ಕಾಂಬಳೆ, ಪೂಜಾ ಮಾಳಗೆ, ರೂಪಾ ನವಲೆ, ವೈಜಯಂತಿ ಮಾಳಗೆ, ಜ್ಯೋತಿ ನವಲೆ, ಸುನಿತಾ ಕಾಂಬಳೆ ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು.

loading...