ಸಾಲ ಬಾಧೆ: ರೈತ ಸಾವು

0
8
loading...

ಕೊಪ್ಪಳ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಂಗಳವಾರ ಜರುಗಿದೆ. ಬುದಗುಂಪಾ ಗ್ರಾಮದ ಅಯ್ಯಣ್ಣ ಸಾಲಗುಂದ (35) ನೇಣಿಗೆ ಶರಣಾದ ರೈತ ಬ್ಯಾಂಕ್‌ಗಳಲ್ಲಿ ಸುಮಾರು 2 ಲಕ್ಷ ಸಾಲ ಮಾಡಿಕೊಂಡಿದ್ದ ಅದಲ್ಲದೇ ಕೈಗಡ ಸಾಲ ಮಾಡಿಕೊಂಡಿದ್ದಾನೆ. ಆದರೆ ಕಳೆದ ಬಾರಿ ಬೆಳೆ ಕೈಗೆ ಬಾರದ್ದರಿಂದ ಮನನೊಂದು ಯಾರು ಇಲ್ಲದ ಸಮಯ ನೋಡಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಾರಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

loading...