ಸಿಎಂ ಕುಮಾರಸ್ವಾಮಿ ಚೊಚ್ಚಲ ಬಜೆಟ್‌: ಶಾಸಕರ ಪ್ರತಿಕ್ರಿಯೆ

0
8
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಇದೊಂದು ಮಾದರಿ ಮತ್ತು ಜನಹಿತ ಪ್ರಗತಿಪರ ಬಜೆಟ್‌ ಆಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರ್ಕಾರ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದು, ಸಿದ್ದರಾಮಯ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸಲಾಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಬಜೆಟ್‌ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರೂ. 2ಲಕ್ಷದಂತೆ ಸುಮಾರು 34 ಸಾವಿರ ಕೋಟಿ ರೈತರ ಸಾಲ ಮನ್ನಾಮಾಡಿದ್ದಾರೆ. ಈ ಹಿಂದಿನ ಸರ್ಕಾರಗಳು ಈ ಪ್ರಮಾಣದ ಸಾಲ ಮನ್ನಾ ಮಾಡಿದ್ದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಜನಪ್ರಿಯ ಆಯವ್ಯಯ ಮಂಡಿಸಿದ್ದು, ಇದನ್ನು ತಾವು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಇದೊಂದು ರೈತ ಹಾಗೂ ಬಡವರ ಕಲ್ಯಾಣದ ಬಜೆಟ್‌ ಆಗಿದ್ದು, ಜನರ ನಿರೀಕ್ಷೆಯಂತೆ ರಾಜ್ಯದ ಹಾಗೂ ಜಿಲ್ಲೆಯ ಅಭಿವೃದ್ಧಿ ಪೂರಕವಾಗಿದೆ ಎಂದರು.
ಕೊಪ್ಪಳ ಜಿಲ್ಲೆಗೆ ಆಟಿಕೆ ಸಾಮಾನು ತಯಾರಿಕೆ, ಇಸ್ರೇಲ್‌ ಮಾದರಿ ಕೃಷಿ ಅಭಿವೃದ್ಧಿ ಹಾಗೂ 450 ಹಾಸಿಗೆ ಆಸ್ಪತ್ರೆ ಘೋಷಣೆ ಮಾಡಲಾಗಿದೆ. ಬಿಜೆಪಿ ಹಾಗೂ ಇತರರು ಈ ಬಜೆಟ್‌ ಬಗ್ಗೆ ಅಪಸ್ವರದಿಂದ ಟಿಕೆ ಮಾಡುತ್ತಿರುವದನ್ನು ವಿರೋಧಿಸಿದ ಅವರು ಕೇಂದ್ರ ಸರ್ಕಾರ ಇದುವರೆಗೂ ರೈತರ ಸಾಲ ಮನ್ನಾ ಮಾಡಲು ಮುಂದೆ ಬಂದಿಲ್ಲ. 15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುವದಾಗಿ ಹೇಳಿದ್ದರು ಎಲ್ಲಿ ಹೋಯಿತು. ಅವರಿಗೆ ರಾಜ್ಯದ ಜನರ ಅಭಿವೃದ್ಧಿ ಬೇಕಾಗಿಲ.್ಲ ಅದಕ್ಕಾಗಿ ಹತಾಶೆ ಮನೋಭಾವದಿಂದ ಬಿಜೆಪಿಯವರು ಈ ಬಜೆಟ್‌ ಬಗ್ಗೆ ಟೀಕಿಸಿದ್ದಾರೆಂದರು.
ಶಾಸಕ ಹಾಲಪ್ಪ ಆಚಾರ್‌
ಕಾಂಗ್ರೆಸ್‌- ಜೆಡಿಎಸ್‌ ದೋಸ್ತಿ ಸರಕಾರದಲ್ಲಿ ಕುಮಾರಸ್ವಾಮಿ ಮಂಡಿಸಿದ ದೋಸ್ತಿ ಬಜೆಟ್‌ನಲ್ಲಿ ಯಾವುದೇ ಉಪಯೋಗವಿಲ್ಲದ ನೀರಾಶೆದಾಯಕ ಬಜೆಟ್‌ ಆಗಿದೆ. ರೈತರ ಸಾಲ ಮನ್ನಾ ಎಂಬ ಕಣ್ಣೋರಿಸುವ ತಂತ್ರದ ಮೂಲಕ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ಸಿಂಟಾಲೂರ ಏತ ನೀರಾವರಿ ಹಾಗೂ ಕೃಷ್ಣಾ ಬಿ.ಸ್ಕೀಂ ನೀರಾವರಿ ಯೋಜನೆಗೆ ವಿಶೇಷ ಅನುದಾನ ನೀಡಿದೇ ಇರುವುದು ರೈತರನ್ನು ಕಡೆಗಣಿಸಿದಂತಾಗಿದೆ. ಆದರೆ ಈ ಬಜೆಟ್‌ ರೈತರ, ಬಡವರ, ಹಾಗೂ ಅಭಿವೃದ್ಧಿ ವಿರೋಧಿ ಬಜೆಟ್‌ ಆಗಿದೆ.
ಶಾಸಕ ಪರಣ್ಣ ಮುನವಳ್ಳಿ
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ಯಾವುದೇ ವಿಶೇಷತೆಗಳಿಂದ ಕೂಡಿಲ್ಲ. ಇದೊಂದು ಸಾಮಾನ್ಯ ಬಜೆಟ್‌ ಇದ್ದಂತೆ ಇದೆ. ಆದರೆ ತಮ್ಮ ಭಾಗಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಉತ್ತರ ಕನಾಟಕ ಭಾಗ ಮತ್ತು ಹೈದ್ರಾಬಾದ್‌ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ. ತೆರಿಗೆ ಹೆಚ್ಚಿಸಿ ಸಾಲ ಮನ್ನಾ ಅಂತಾ ಹೇಳಿದ್ದಾರೆ. ಆದರೆ ಯಾವ ರೀತಿ ಮನ್ನಾ ಮಾಡುತ್ತಾರೆ ಎಂಬುದು ಸ್ಪಷ್ಟತೆ ಇಲ್ಲವಾಗಿದೆ. ಇದೊಂದು ರೈತರನ್ನು ಕಣ್ಣೋರೆಸುವ ಬಜೆಟ್‌ ಆಗಿದೆ.
ಕೊಪ್ಪಳ ಜಿಲ್ಲೆಯು ರೈತರ ಕೃಷಿದಾಯಕ ಪ್ರದೇಶವಾಗಿದೆ. ತುಂಗಭದ್ರಾ ಜಲಾಶಯದ ಹೂಳು ಕುರಿತು ಚಿಂತನೆ ಮಾಡಿ ರೈತ ಉದ್ಯೋಗಕ್ಕೆ ಉತ್ತೆಜನ ನೀಡುವುದು ಬಿಟ್ಟು ಸಾಲ ಮನ್ನಾ ಎಂಬುದು ರೈತರ ಮೂಗಿಗೆ ತುಪ್ಪಸವರಿದಂತಾಗಿದೆ. ಸಾಲ ಮನ್ನಾ ಮಾಡುವುದಕ್ಕಿಂತ, ಪ್ರಣಾಳಿಕೆಯಲ್ಲಿ ಸಂಪೂರ್ಣ ಸಾಲಮನ್ನಾ ಮಾಡಿ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುತ್ತೇವೆ ಎಂದು ಹೇಳಿ ಈಗ ಕೇವಲ 2ಲಕ್ಷ ಮಾತ್ರ ಸಾಲ ಮನ್ನಾ ಮಾಡುತ್ತಿರುವುದು ಸರಿಯಾದ ಕ್ರಮವಲ.
ವೀಠ್ಠಪ್ಪ ಗೋರಂಟ್ಲಿ, ಹೋರಾಟಗಾರ ತುಂಗಭದ್ರಾ ಆಂದೋಲನ ಸಮಿತಿ ಅಧ್ಯಕ್ಷ ನಜೀರ್‌ಸಾಬ ಮೂಲಿಮನಿ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ.

loading...