ಸಿಎಂ ರೈತರಿಗೆ ಅನ್ಯಾಯ ಮಾಡಿದ್ದಾರೆ: ಸಿದ್ರಾಮಪ್ಪ

0
12
loading...

ಕನ್ನಡಮ್ಮ ಸುದ್ದಿ-ಕೊಲ್ಹಾರ: ಸಾಲ ಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತರಿಗೆ ಅನ್ಯಾಯ ಮಾಡಿದ್ದಾರೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕೆ. ಕುಲಕರ್ಣಿ ಹಾಗೂ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಆರೋಪಿಸಿದರು. ನೂತನ ತಾಲೂಕ ಕೇಂದ್ರವಾದ ಕೊಲ್ಹಾರದಲ್ಲಿ ಹಮ್ಮಿಕೊಂಡಿದ್ದ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ನಾನು ಮುಖ್ಯಮಂತ್ರಿ ಆದರೆ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಘೋಷಿಸಿದ್ದರು. ಈಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರಿಗೆ ಅನ್ಯಾಯ ಮಾಡಿದ್ದಾರೆಂದು ದೂರಿದರು ಕೊಟ್ಟ ಮಾತು ಉಳಿಸಿಕೊಳ್ಳಲು ರೈತರಿಂದ ಸೈ ಎನಿಸಿಕೊಳ್ಳಲು ಮನಸ್ಸಿಲ್ಲದೆ 2 ಲಕ್ಷ ರೂಗಳ ವರೆಗೆ ಸಾಲ ಮನ್ನಾ ಮಾಡಿ ಅದಕ್ಕೆ ಹಲವಾರು ಮಾನದಂಡ ವಿಧಿಸಿದ್ದು ಮತ್ತಷ್ಟು ರೈತರಿಗೆ ಚಿಂತೆಗೀಡು ಮಾಡಿದೆ ಸಾಲ ಮನ್ನಾ ವಿಷಯದಲ್ಲಿ ಮಾನದಂಡ ವಿಧಿಸುವ ಅಗತ್ಯವೇನಿದೆ ನಿಜವಾಗಿ ರೈತರ ಮೇಲೆ ಕುಮಾರಸ್ವಾಮಿ ಅವರಿಗೆ ಕಾಳಜಿ ಇದ್ದರೆ ಯಾವದೇ ಮಾನದಂಡ ವಿಧಿಸದೆ ಸಾಲ ಮನ್ನಾ ಮಾಡಬೇಕು ರೈತರ ಸಾಲ ಮನ್ನಾ ವಿಷಯದಲ್ಲಿಸಾಲ ಪಡೆದ ರೈತರ ಮನೆಗಳು ಕಾಂಕ್ರೇಟ ಮನೆ ಇರಬಾರದು ದ್ವಿಚಕ್ರ ವಾಹನ ಇರಬಾರದೆಂಬ ಇತ್ಯಾದಿ ಮಾನದಂಡ ವಿಧಿಸಿರುವುದು ಸರಿ ಅಲ್ಲ ಎಂದರು. ಒಟ್ಟಾರೆ ರೈತರು ಚನ್ನಾಗಿ ಬದುಕಬಾರದು ಒಳ್ಳೆಯ ಮನೆ ಇರಬಾರದು ರೈತರು ಜೀವನ ಪಯಂರ್ತ ಗುಡಿಸಲು ಮನೆಯಲ್ಲಿಯೇ ಬದುಕಬೇಕೆಂಬ ದುರ್ಬುದ್ಧಿ ಇದಾಗಿದೆಯಂದು ದೂರಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕ್ರೆಪ್ಪ ದೇಸಾಯಿ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಈರಣ್ಣ ಕೋಮಾರ, ಶಂಕ್ರೆಪ್ಪ ಬಗಲಿ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಬಾಬು ಕೊಜಗೀರ, ಹಣಮಂತ ತೋಟದ, ಈರಣ್ಣ ದೇವರಗುಡಿ, ಚಂದ್ರಾಮ ತೆಗ್ಗಿ, ಹೊನಕೇರಪ್ಪ ತೆಲಗಿ ಮಹಿಳಾ ಘಟಕದ ಬಸವನ ಬಾಗೇವಾಡಿ ತಾಲೂಕ ಅಧ್ಯಕ್ಷೆ ಶಾರದಾ ಲಮಾಣಿ ಯಲ್ಲವ್ವ ಏಳಂಗಡಿ, ಕೋಲಾರ ಘಟಕದ ಪದಾಧಿಕಾರಿ ಬಸಪ್ಪ ಬನಾಗೊಂಡ, ಪ್ರಸನ್‌ ಕುಮಾರ, ಪತ್ತಾರ ರಮೇಶ ಬಾಲಗೊಂಡ, ಹಣಮಂತ ಕಾಳಪ್ಪಗೋಳ, ಯಲ್ಲಪ್ಪ ಗೂಳಗೊಂಡ, ಸಂಗಪ್ಪ ಗೂಳಗೊಂಡ, ಈರಪ್ಪ ಬಾಲಗೊಂಡ, ಯಮನಪ್ಪ ಬಾಟಿ, ದರ್ಮಣ್ಣ ಏಳಂಗಡಿ, ಹಣಮಂತ ಮಟ್ಯಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಲ್ಲಪ್ಪ ಬಾಲಗೊಂಡ ಕಾರ್ಯಕ್ರಮ ವಂದಿಸಿದರು.

loading...