ಸಿಬ್ಬಂದಿ ಸಮಸ್ಯೆ: ಸಿಎಂಗೆ ಮನವಿ

0
8
loading...

ಕನ್ನಡಮ್ಮ ಸುದ್ದಿ-ಅಮೀನಗಡ: ಸ್ಥಳೀಯ ಪಪಂನಲ್ಲಿ ಅನುಮೋದನೆ ಇಲ್ಲದ ಸಿಬ್ಬಂದಿ ವೇತನ ಬಿಡುಗಡೆ ಹಾಗೂ ಖಾಯಂಗೊಳಿಸುವ ಕುರಿತು ಪಪಂ ಅಧ್ಯಕ್ಷೆ ಸುಜಾತಾ ತತ್ರಾಣಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಿಬ್ಬಂದಿ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪಪಂ ಅಧ್ಯಕ್ಷೆ ಸುಜಾತಾ ತತ್ರಾಣಿ ಕಳೆದೊಂದು ವರ್ಷದಿಂದ ವೇತನವಿಲ್ಲದೆ ಪರದಾಡುತ್ತಿರುವ ಪೌರಕಾರ್ಮಿಕರು ನೆರವಿಗೆ ಧಾವಿಸುವುದಲ್ಲದೆ ಅವರೆಲ್ಲರನ್ನೂ ಖಾಯಂಗೊಳಿಸಬೇಕೆಂದು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.
2015, ಜು.25ರಂದು ಅಮೀನಗಡ ಗ್ರಾಪಂನಿಂದ ಪಪಂ ಆಗಿ ಮೇಲ್ದರ್ಜೆಗೊಂಡಿದೆ. ಗ್ರಾಪಂ ಅವಯಲ್ಲಿ 15 ಪೌರ ಕಾರ್ಮಿಕರು, 5 ವಾಟರ್‌ಮನ್‌, 4 ಕರವಸೂಲುಗಾರರು, 1 ಕಂಪ್ಯೂಟರ್‌ ಆಪರೇಟರ್‌ ಎಂದು ಕಾರ್ಯ ನಿರ್ವಹಿಸುತ್ತಿದ್ದರು. ಅವರಲ್ಲಿ 7 ಪೌರಕಾರ್ಮಿಕರು, 3 ವಾಟರ್‌ಮನ್‌, 1 ಕರವಸೂಲುಗಾರ ಮಾತ್ರ ಜಿಪಂನಿಂದ ಅನುಮೋದನೆಯಾಗಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ಪೌರಾಡಳಿತ ನಿರ್ದೇಶನಾಲಯದಲ್ಲಿ ಹುದ್ದೆ ವಿಲೀನಗೊಂಡಿದೆ. ಅನುಮೋದನೆ ಇಲ್ಲದ ಗ್ರಾಪಂ ಸಿಬ್ಬಂದಿಯನ್ನು ವಿಶೇಷ ನಿಯಮ ರಚಿಸಿ ಪುರಸಭೆ ವ್ಯಾಪ್ತಿಗೊಳಪಡಿಸುವ ಕುರಿತು 2016, ಫೆ.29ರಂದು ಸರಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ ಸಭೆಯಲ್ಲಿ ಅನುಮೋದನೆ ಇಲ್ಲದ ನೌಕರರನ್ನು ವಿಶೇಷ ನಿಯಮ ರಚಿಸಿ ಪುರಸಭೆ ವ್ಯಾಪ್ತಿಗೆ ಒಳಪಡಿಸುವ ನಡಾವಳಿ ರೂಪಿಸಿದ್ದಾರೆ. ಆದರೆ ಇದುವರೆಗೂ ನಡಾವಳಿ ಅನುಷ್ಟಾನಗೊಳ್ಳದೆ ಅನುಮೋದನೆಗೊಳಪಡದ ಸಿಬ್ಬಂದಿ ವೇತನವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

loading...