ಸುಂದರ ಜೀವನ ನಡೆಸಲು ಆರೋಗ್ಯ ಅವಶ್ಯ: ಶ್ರೀಗಳು

0
22
loading...

ಬಸವನಬಾಗೇವಾಡಿ: ಪ್ರತಿಯೊಬ್ಬರು ಸುಂದರ ಜೀವನ ನಡೆಸಲು ಉತ್ತಮ ಆರೋಗ್ಯ ಅವಶ್ಯಕವಾಗಿದೆ ಎಂದು ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಇಂಗಳೇಶ್ವರ ರಸ್ತೆಯಲ್ಲಿನ ರಾಧಾಕೃಷ್ಣ ನಗರದಲ್ಲಿ ಶಿವಬಸವ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೆಂಟರ್‌ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೊ ಕಾಯಿಲೆಗಳು ಇರುತ್ತವೆ ಅವುಗಳನ್ನು ಅಲಕ್ಷಿಸದೇ ವೈದ್ಯರ ಹತ್ತಿರ ಹೋಗಿ ವೈದ್ಯೋಪಚಾರ ಮಾಡಿಕೊಂಡಲ್ಲಿ ಗುಣಮುಖರಾಗಲು ಸಾಧ್ಯವೆಂದು ಹೇಳಿದರು.
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ನಿರ್ಲಕ್ಷವಹಿಸದೆ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕು, ಶ್ರೀಮಂತರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ತಮ್ಮ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುತ್ತಾರೆ, ಆದರೆ ಬಡವರು ಕಾಸಯಿಲ್ಲದೇ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು. ಶಿವಬಸವ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜ ಗುಬ್ಬಾ ಹಾಗೂ ಅವರ ಸಹೊದರರು ಸಮಾಜದ, ಬಡವರ ಬಗ್ಗೆ ಅಪಾರ ಕಾಳಜಿವುಳ್ಳತವರು ಇವರ ಸೇವೆ ಸುಂದರ ಸಮಾಜ ನಿರ್ಮಾಣಕ್ಕೆ ಸರ್ಮಪಿತವಾಗಲಿ ಎಂದು ಹಾರೈಸಿದರು.
ಬೆಂಗಳೂರಿನ ವಿಭೂತಿಪುರ ಮಠ ಹಾಗೂ ಮನಗೂಳಿ ಪಟ್ಟಿಕಂಥಿ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ ಸಮಾಜದಲ್ಲಿ ವೈದ್ಯರ ಸೇವೆ ಅತೀ ಅಮೂಲ್ಯವಾಗಿದ್ದು ರೋಗಿಗಳು ತಮ್ಮ ಕಾಯಿಲೆ ಬಗ್ಗೆ ಆಲಕ್ಷವಹಿಸದೇ ವೈದ್ಯರಿಂದ ವೈದ್ಯೋಪಚಾರ ಮಾಡಿಕೊಂಡು ಸುಂದರ ಜೀವನ ನಡೆಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ, ಬ್ಲಾಕ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಗದೀಶ ಕೊಟ್ರಶೆಟ್ಟ ಮಾತನಾಡಿದರು, ಇಂಗಳೇಶ್ವರ ಹಿರೇಮಠದ ಬೃಂಗೀಶ್ವರಲಿಂಗ ಶಿವಾಚಾರ್ಯರು, ವಿಎಚ್‌ಪಿ ತಾಲೂಕಾಧ್ಯಕ್ಷ ರವಿ ಪಡಶೆಟ್ಟಿ, ವೈದ್ಯರ ಸಂಘದ ಅಧ್ಯಕ್ಷ ಡಾ. ಮಹಾಂತೇಶ ಜಾಲಗೇರಿ, ಎಸ್‌.ಎಸ್‌.ಗುಬ್ಬಾ, ಬಿ.ಜಿ.ಪಾಟೀಲ, ಡಾ. ಜಕ್ಕಣ್ಣ ಗುಬ್ಬಾ, ಡಾ.ಬಸವರಾಜ ಗುಬ್ಬಾ, ಶಂಕರಗೌಡ ಬಿರಾದಾರ, ಕೆ.ಸಿ. ನಡಕಟ್ಟಿ ಸೇರಿದಂತೆ ಇತರರು ಇದ್ದರು. ಶ್ರೀಮತಿ ಬಸಮ್ಮ ಗುಬ್ಬಾ ಪ್ರಾರ್ಥಿಸಿದರು, ಶಿಕ್ಷಕ ಎಸ್‌.ಬಿ.ಹಾವಿನಾಳ ಸ್ವಾಗತಿಸಿದರು, ಅದಿನಾಥ ಉಪಾಧ್ಯೆ ನಿರೂಪಿಸಿದರು, ಶ್ರೀಮತಿ ಸಾವಿತ್ರಿ ಅಕ್ಕವರು ವಂದಿಸಿದರು.

loading...