ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಛೇರಿ ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರತಿಭಟನೆ

0
17
loading...

ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಛೇರಿ ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ಹೊರವಲಯದಲ್ಲಿರುವ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿ ಕಛೇರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಇನ್ನಿÃತರ ಬೇಡಿಕೆಗಾಗಿ ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಮಂಗಳವಾರ ಸುವರ್ಣಸೌಧದ ಮುಂಭಾಗ ಧರಣಿ ಕುಳಿತು ರಾಜ್ಯ ಸರಕಾರ ಕೂಡಲೆ ಬೆಳಗಾವಿಯನ್ನು ಎರಡನೆ ರಾಜ್ಯಧಾನಿ ಎಂದು ಘೋಷಿಸಬೇಕು,ಸುವರ್ಣಸೌಧಕ್ಕೆ ಎಲ್ಲ ಇಲಾಖೆ ಕಛೇರಿಗಳನ್ನು ಸ್ಥಳಾಂತರಿಸಬೆಕೆಂದು ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಬಿ.ಆರ್.ಸಂಗಪ್ಪಗೊಳ,ಅಶೋಕ ಪೂಜೇರಿ ಸೇರಿದಂತೆ ಇತರರು ಇದ್ದರು.

loading...