ಸೇತುವೆ ಬಳಿ ಕ್ರೂಸರ್ ಪಲ್ಟಿ, ಪ್ರಾಣಾಪಾಯದಿಂದ ಪಾರು

0
11
loading...

ಕನ್ನಡಮ್ಮ- ಸುದ್ದಿ: ನರೇಗಲ್ಲ ಕಲಬುರ್ಗಿಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಮಾರಂಭಕ್ಕೆ ಬರುತ್ತಿದ್ದ ಕ್ರೂಸರ್ ಪಟ್ಟಣದ ಗದಗ ರಸ್ತೆಯ ಪ್ರವಾಸಿ ಮಂದಿರ ಬಳಿಯ ಸೇತುವೆಬಳಿ ಪಲ್ಟಿಯಾಗಿ ವಾಹನದಲ್ಲಿದ್ದ 11ಜನರು ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಘಟನೆಯ ವಿವರ:ಗದಗನ ವೀರೇಶ್ವರ ಪುಣ್ಯಾಶ್ರಮದಲ್ಲಿ ಜರುಗುತ್ತಿರುವ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಕ್ಕೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮೂದಡಗಿ ಗ್ರಾಮದ ಸಂಗಮೇಶ್ವರ ಸಂಸ್ಥಾನಮಠದ ವತಿಯಿಂದ ಆಗಮಿಸುತ್ತಿದ್ದ ವೇಳೆ ಘಟನೆ ಜರುಗಿದೆ. ಕ್ರೂಸರ್ ವಾಹನದ ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ಗದಗ ರಸ್ತೆಯ ಪ್ರವಾಸಿ ಮಂದಿರದ ಬಳಿಯ ಸೇತುವೆ ಹತ್ತಿರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಿಕ್ಕ ಸೇತುವೆಯಾಗಿರುವುದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಚಾಲಕ ಸೇರಿದಂತೆ ಮೂವರಿಗೆ ಗಂಭಿರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು 108 ವಾಹನದ ಮೂಲಕ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನರೇಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

loading...