ಸೇವೆಯಿಂದ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ: ಪ್ರಕಾಶ ಶೆಟ್ಟಿ

0
7
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಮಾನವನಾಗಿ ಜನ್ಮವೆತ್ತಿರುವುದೆ ನಮ್ಮ ಪುಣ್ಯ. ಈ ಪುಣ್ಯದ ಭಾಗವಾಗಿ ನಾವು ನಮ್ಮ ಬದುಕಿನಲ್ಲಿ ಸೇವಾಗುಣವನ್ನು ಮೈಗೂಡಿಸಿಕೊಳ್ಳಬೇಕು. ಸ್ವಾರ್ಥವಿಲ್ಲದ ಸೇವೆಯಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸೇವೆಯನ್ನು ಗುರಿಯಾಗಿಸಿಕೊಂಡು ಆರಂಭವಾದ ರೋಟರಿ ಕ್ಲಬ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾಕೈಂಕರ್ಯಗಳಿಂದಲೆ ಜನವಿಖ್ಯಾತಿ ಪಡೆದಿದೆ. ದಾಂಡೇಲಿಯ ರೋಟರಿ ಕ್ಲಬಿನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಮಹೋನ್ನತ ಭಾಗ್ಯ ನನ್ನ ಪಾಲಿಗೊದಗಿದ ಸುಯೋಗ ಎಂದು ರೋಟರಿ ಕ್ಲಬಿನ ನೂತನ ಅಧ್ಯಕ್ಷ ಹಾಗೂ ಉದ್ಯಮಿ ಎಸ್‌.ಪ್ರಕಾಶ ಶೆಟ್ಟಿ ಹೇಳಿದರು.
ಅವರು ಶನಿವಾರ ಸಂಜೆ ನಗರದ ರಂಗನಾಥ ಸಭಾಂಣದಲ್ಲಿ ಹಮ್ಮಿಕೊಂಡಿದ್ದ ದಾಂಡೇಲಿ ರೋಟರಿ ಕ್ಲಬ್‌ನ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡುತ್ತಿದ್ದರು. ನನ್ನ ಅವಧಿಯಲ್ಲಿ ರೋಟರಿ ಕ್ಲಬ್‌ನ ಎಲ್ಲ ಸದಸ್ಯರ ಸಲಹೆ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇಶದ ಹಲವು ಸಂದಿಗ್ಧ ಸಂದರ್ಭದಲ್ಲಿ ರೋಟರಿ ಸಹಾಯ ಹಸ್ತ ಚಾಚಿರುವುದು ಸ್ಮರಣೀಯ. ಆರೋಗ್ಯಕರ ಸಮಾಜ ನಿರ್ಮಾಣದ ಕನಸಿನೊಂದಿಗೆ ನಗರದ ಅಭಿವೃದ್ಧಿಗೆ ರೋಟರಿ ಕ್ಲಬ್‌ ಮೂಲಕ ವಿನೂತನ ಯೋಜನೆಗಳನ್ನು ಅನುಷ್ಟಾನಪಡಿಸಿ ಮಾದರಿ ಕ್ಲಬನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಡುವುದಾಗಿ ಇದೇ ಸಂದರ್ಭದಲ್ಲಿ ಎಸ್‌.ಪ್ರಕಾಶ ಶೆಟ್ಟಿ ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬಿಗೆ ಉದ್ಯಮಿಗಳಾದ ಸಂತೋಷ್‌ ಶೆಟ್ಟಿ, ಸುಧಾಕರ ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ, ಮಹಮ್ಮದ್‌ ಉಸ್ಮಾನ್‌, ಶೇಖರ್‌ ಪೂಜಾರಿ, ಕೆಪಿಟಿಸಿಎಲ್‌ ಕಾರ್ಯನಿರ್ವಾಹಕ ಅಭಿಯಂತರ ದೀಪಕ ನಾಯ್ಕ, ಪ್ರವಾಸೋಧ್ಯಮಿ ಮಿಥುನ್‌ ನಾಯಕ ಮೊದಲಾದವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ರೋಟರಿಯ ನಿರ್ಗಮಿತ ಅಧ್ಯಕ್ಷ ರವಿಕುಮಾರ ನಾಯಕ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ಪುರುಶೋತ್ತಮ ಮಲ್ಯ ವರದಿ ವಾಚಿಸಿದರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ಅನಿಲ್‌ ಪಾಟ್ನೇಕರ ರೋಟರಿ ಪ್ರಾರ್ಥನೆ ಮಾಡಿದರು. ಡಾ. ಹರಿಲಾಲ ಮೆಹರ್ವಾಡೆ, ರಾಹುಲ್‌ ಬಾವಾಜಿ, ಅರುಣ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಖಜಾಂಚಿ ಅಶುತೋಶ ರಾಯ್‌ ಉಪಸ್ಥಿತರಿದ್ದರು. ನೂತನ ಸದಸ್ಯರನ್ನು ಜೋಸೆಪ್‌ ಗೊನ್ಸಾಲ್ವಿಸ್‌, ರಾಜೇಶ ರಿವಾರಿ, ಸ್ಟೆನ್ಲಿ ಮೆಬೆನ್‌, ಯೋಗೇಶ ಸಿಂಗ್‌ ಪರಿಚಯಿಸಿದರು. ಡಾ. ಹರಿಲಾಲ ಮೆರ್ವಾಡೆ, ಅರುಣ ನಾಯಕ ನಿರ್ವಹಿಸಿದರು. ಕಾರ್ಯದರ್ಶಿ ಸೋಮಕುಮಾರ ಎಸ್‌. ವಂದಿಸಿದರು.

loading...