ಸೊಳ್ಳೆ ಉತ್ಪತ್ತಿಯಾಗದಂತೆ ಸ್ವಚ್ಛತೆ ಕಾಪಾಡಿ: ನಿಂಗನಗೌಡ್ರ

0
6
loading...

ಕನ್ನಡಮ್ಮ ಸುದ್ದಿ-ಸವಣೂರ: ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೂಡಿ ನಡೆದಾಗ ಮಾತ್ರ ಇಂತಹ ಹತ್ತು ಹಲವಾರು ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್‌ ನಿಂಗನಗೌಡ್ರ ಹೇಳಿದರು.
ತಾಲೂಕಿನ ಜಲ್ಲಾಪೂರ ಗ್ರಾಮದಲ್ಲಿ ಸವಣೂರ ತಾಲೂಕು ಆರೋಗ್ಯ ಕೇಂದ್ರ, ಹತ್ತಿಮತ್ತೂರ ಉಪಕೇಂದ್ರ, ಜಿಲ್ಲಾ ಪಂಚಾಯತಿ ಹಾವೇರಿ, ಜಿಲ್ಲಾ ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರಾಷ್ಟ್ರೀಯ ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ ಮಾಡುವುದರ ಉದ್ದೇಶ ಮಲೇರಿಯಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು. ಸಾರ್ವಜನಿಕರು ಅವರಿಗೆ ಸ್ಪಂಧಿಸಿ ರೋಗ ಬಾರದಂತೆ ಮುಂಜಾಗೃತಿ ವಹಿಸಬೇಕು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಸತೀಶ ಮಾತನಾಡಿ, ಸೋಳ್ಳೆಗಳ ನಾಶ ಮಾಡುವದರಿಂದ ಡೆಂಗೂ ಜ್ವರ ತಡೆಗಟ್ಟಬಹುದು ಹಾಗೂ ಸೋಳ್ಳೆಗಳ ಉತ್ಪತ್ತಿಯಾಗುವ ಸ್ಥಳಗಳನ್ನು ನಾಶ ಪಡಿಸಿದಾಗ ಮಾತ್ರ ಸಾದ್ಯ. ಮಲೇರಿಯಾ ರೋಗವು ಪ್ಲಾಸ್ಮೋಡಿಯಂ ಎಂಬ ಪರೋಪ ಜೀವಿಯಿಂದ ಅನಾಫೆಲಿಸ ಎಂಬ ಹೆಣ್ಣು ಸೋಳ್ಳೆ ಕಚ್ಚುವದರ ಮೂಲಕ ಒಬ್ಬರಿಂದ ಇನ್ನೂಬರಿಗೆ ಹರಡುತ್ತದೆ. ಪ್ರಮುಖವಾಗಿ ಮೂರು ಹಂತದಲ್ಲಿ ಕಾರ್ಯನಿರ್ವಹಿಸುತ್ತದೆ. ಚಳಿಯ ಹಂತ, ಜ್ವರದ ಹಂತ, ಬೆವರಿನ ಹಂತ ಈ ರೀತಿ ಕಂಡು ಬಂದರೆ ತಕ್ಷಣ ತಾವು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಬೆಟಿ ನೀಡಿ ರಕ್ತ ತಪಾಸನೆ ಮಾಡಿ ಮಲೇರಿಯಾ ರೋಗದ ಬಗ್ಗೆ ಕಚಿತಪಡಿಸಿಕೋಳ್ಳಬೇಕು. ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಸಾರ್ವಜನಿಕರು ಯಾವುದೆ ಹಣ ಸಂದಾಯ ಮಾಡುವಂತಿಲ್ಲಾ.
ಆದಷ್ಟು ಮಟ್ಟಿಗೆ ಹಳ್ಳಿಗಳಲ್ಲಿ ಸಂಜೆಯ ಸಮಯದಲ್ಲಿ ಸೋಳ್ಳೆ ಪರದೆ, ಬೇವಿನ ಸೋಪ್ಪಿನ ಹೋಗೆ, ಕಿಟಕಿಗಳಿಗೆ ಜಾಲರಿ, ಬೇವಿನ ಎಣ್ಣಿಯ ದೀಪ ಹಂಚ್ಚುವದರಿಂದ ಹಾಗೂ ಕೆರೆಗಳಲ್ಲಿ ಮೀನುಗಳನ್ನು ಬೀಡುವ ಮೂಲಕ ಸ್ವಲ್ಪ ಮಟ್ಟಿಗಾದರು ನಾವು ಸೋಳ್ಳೆಯ ನಿಯಂತ್ರಣ ಮಾಡಬಹುದು ಎಂದರು.
ಶಾಲಾ ಮಕ್ಕಳಿಂದ ವಿಶ್ವ ಮಲೇರಿಯಾ ಮಾಸಾಚರಣೆಯ ಅಂಗವಾಗಿ ಗ್ರಾಮದ ಸುತ್ತೆಲ್ಲಾ ಪ್ರಭಾತ ಫೇರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಿ.ಎಸ್‌ ಪೂಜಾರ, ಸಿ.ಜಿ ಲಮಾಣಿ, ಜಿ.ಬಿ.ಬಣಗಾರ, ಗ್ರಾಮಸ್ಥರು, ಶಾಲಾ ಮಕ್ಕಳು, ಅರೋಗ್ಯ ಕೇಂದ್ರದ ಅಧಿಕಾರಿಗಳು ಇದ್ದರು.

loading...