ಸೋರುತ್ತಿರುವ ಕಾಗವಾಡ ಉಪಖಜಾನೆ ಕಟ್ಟಡ

0
25
ಸೋರುತ್ತಿರುವ ಕಾಗವಾಡ ಉಪಖಜಾನೆ ಕಟ್ಟಡ
loading...

ಸೋರುತ್ತಿರುವ ಕಾಗವಾಡ ಉಪಖಜಾನೆ ಕಟ್ಟಡ
ಕನ್ನಡಮ್ಮ ಸುದ್ದಿ
ಕಾಗವಾಡ 18: ತಾಲೂಕಾ ಉಪ ಖಜಾನೆ ಕಾರ್ಯಾಲಯ ಅನೇಕ ವರ್ಷಗಳಿಂದ ಎಪಿಎಂಸಿ ಹಳೆಯ ಕಟ್ಟಡದಲ್ಲಿದ್ದು, ಮಳೆಗಾಲದಲ್ಲಿ ಮಳೆ ನೀರು ಸೋರಿ ಆಗುತ್ತಿರುವ ತೊಂದರೆ ಕಾರ್ಯಾಲಯದ ಸಿಬ್ಬಂದಿಗಳು ಇಟ್ಟಿಕೊಂಡು, ಸೇವೆ ಮಾಡುವ ಅನುಭವ ಅನೇಕ ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಆದರೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲಾ.
ಕಾಗವಾಡ ತಾಲೂಕಾ ಉಪ ಖಜಾನೆ ಕಾರ್ಯಾಲಯದಿಂದ 11 ಸಾವಿರ ಪಿಂಚಣಿದಾರರು, ಎಲ್ಲ ಸರಕಾರಿ ಇಲಾಖೆ ಸಿಬ್ಬಂದಿಗಳ ಸಂಬಳ ಸೇರಿ ಅನೇಕ ಸರಕಾರಿ ಕಾರ್ಯಗಳು ಇಲ್ಲಿಗೆ ನಿರಂತರವಾಗಿ ಜರಗುತ್ತಿವೆ. ಆದರೆ ಕಳೆದ ಅನೇಕ ವರ್ಷಗಳಿಂದ ಎಪಿಎಂಸಿ ಇಲಾಖೆಯ ಹಳೆ ಕಟ್ಟಡದಲ್ಲಿ ಕಚೇರಿ ಪ್ರಾರಂಭಿಸಿದ್ದಾರೆ.
ಕಚೇರಿಯ ಒಳ ಭಾಗದ ಕಟ್ಟಡದ ಸಿಮೆಂಟ್ ಕಳಚಿ ಹೋಗಿದ್ದು, ಮಳೆ ನೀರು ನೇರವಾಗಿ ಕಚೇರಿಯಲ್ಲಿಯ ಕಂಪ್ಯೂಟರ್ ಸಿಸ್ಟ್‍ಂಗಳ ಮೇಲೆ, ಸರಕಾರಿ ದಸ್ತಗಳ ಮೇಲೆ ಸುರಿಯುತ್ತಿದ್ದರಿಂದ, ಇಲ್ಲಿಯ ಸಿಬ್ಬಂದಿಗಳು ಅನೇಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಕಾರ್ಯಾಲಯದ ಸಿಬ್ಬಂದಿ ಸಂಗೀತಾ ಚೌಗುಲೆ ಹೇಳಿದರು.
ಕಾಗವಾಡ ಉಪ ಖಜಾನೆ ಕಾರ್ಯಾಲಯದ ಸಮಸ್ಯೆ 15 ದಿನಗಳಲ್ಲಿ ಬಗ್ಗೆ ಹರಿಸದೇ ಹೋದರೆ, ಉಗ್ರವಾಗಿ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ, ಕಾಗವಾಡ ತಾಲೂಕಾ ಕರ್ವೆ ಆಧ್ಯಕ್ಷ ಸಿದ್ದು ಒಡೆಯರ್ ನೀಡಿದ್ದಾರೆ.

loading...