ಸೋಲು-ಗೆಲವು ಮುಖ್ಯವಲ್ಲ ಆಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ

0
15
loading...

ಬೀಳಗಿ: ಪಾಠ ಬೋಧನೆ ಜೊತೆಗೆ ಮನಸ್ಸು ಉಲ್ಲಸಿತಗೊಳ್ಳಲು ಕ್ರಿÃಡೆಗಳು ಅವಶ್ಯಕ. ಸೋಲು-ಗೆಲವು ಮುಖ್ಯವಲ್ಲ ಆಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗುತ್ತದೆ ಎಂದು ಕ್ಷೆÃತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ಕುಂದರಗಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರಿÃಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಹಳ್ಳಿಯಿಂದ ಹೊರಹೊಮ್ಮಿದ ಕ್ರಿÃಡಾಪಟುಗಳು ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈಯುತ್ತಿರುವರು ಎಂದು ಹೇಳಿದರು. ಗ್ರಾಮೀಣ ಪ್ರದೇಶದಿಂದ ಹೋದ ಕ್ರಿÃಡಾಪಟುಗಳು ಸದೃಢs, ಶಕ್ತಿವಂತರಾಗಿದ್ದರಿಂದ ಮಿಂಚಲು ಕಾರಣವಾಗಿದೆ. ಕ್ರಿÃಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಸೂಕ್ತ ಮಾರ್ಗದರ್ಶನ ಮಾಡಿ ಒಳ್ಳೆಯ ಕ್ರಿÃಡಾಪಟುವನ್ನಾಗಿ ಹೊರಹೊಮ್ಮಿಸಬೇಕೆಂದು ದೈಹಿಕ ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಪ್ರಜಾಗುರಿ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಯಂ ಉದ್ಯೊÃಗ ತರಬೇತಿ ಸಂಸ್ಥೆ ಅಧ್ಯಕ್ಷ ಡಿ.ಎಂ. ಸಾಹುಕಾರ ವಿಶೇಷ ಆಹ್ವಾನಿತರಾಗಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಹೋದ ಬಡ ರೈತನ ಮಗಳು ಹಿಮಾ ದಾಸ ಪಿನ್‌ಲ್ಯಾಂಡನಲ್ಲಿ ನಡೆದ ವಿಶ್ವ ಜ್ಯೂನೀಯರ್ ಅಥ್ಲೆÃಟಿಕ್ಸ್ನಲ್ಲಿ ಸಾಧನೆಗೈದು ಚಿನ್ನದ ಪದಕ ಗೆದ್ದ ಮೊದಲು ಅಥ್ಲಿÃಟಿ ಎಂದು ಹೇಳಿದರು.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಠ, ಊಟ ಎಷ್ಟು ಮುಖ್ಯವೋ, ಆಟವು ಕೂಡಾ ಅಷ್ಟೆÃ ಮುಖ್ಯವಾಗಿದೆ. ಪರಿಶ್ರಮದಿಂದ ತರಬೇತಿ ಪಡೆದು ಕ್ರಿÃಡಾಕ್ಷೆÃತ್ರದಲ್ಲಿ ತಮ್ಮ ಛಾಪನ್ನು ಮೂಡಿಸಬೇಕೆಂದು ಕರೆ ನೀಡಿದರು. ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಜಿ. ಎಂ. ಮಾಟಲದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಶಾಂತಾ ಕಾಜಗಾರ ಕ್ರಿÃಡಾ ಧ್ವಜಾರೋಹಣ ನೆರವೇರಿಸಿದರು. ತಾಪಂ ಸದಸ್ಯ ಡಿ.ಎಸ್. ಪಾಟೀಲ ಕ್ರಿÃಡಾ ಜ್ಯೊÃತಿ ಬರಮಾಡಿಕೊಂಡು, ಬೆಳಗಿದರು. ದೈಹಿಕ ಶಿಕ್ಷಕ ಬಿ. ಬಿ. ಬೆನಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು ಎಸ್‌ಡಿಎಂಸಿ ಅಧ್ಯಕ್ಷ ಬಾಬು ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಆರ್.ಡಿ. ಲಮಾಣಿ, ಗ್ರಾಪಂ ಸದಸ್ಯ ಆರ್.ವಿ. ಪಾಟೀಲ, ಎಂ.ಸಿ. ಗಾಣಗೇರ, ಕ್ಷೆÃತ್ರಸಮನ್ವಯಾಧಿಕಾರಿ ಆರ್.ಸಿ. ವಡವಾಣಿ, ಸಿಆರ್‌ಪಿಗಳಾದ ಆರ್.ಬಿ. ಸಂಕಣ್ಣವರ, ಎಸ್.ಕೆ. ಮಡಿಕೇಶ್ವರ, ಐ.ಎ. ಬಾಳಗಿ, ಎಂ.ಕೆ. ಕಂಬಾರ, ಮುಖ್ಯಗುರುಗಳಾದ ಬಿ.ಎಸ್. ಭೂಷಣ್ಣವರ, ಎಸ್.ಎಂ. ಬಸನಗೌಡ್ರ, ಮಹಾದೇವಿ ಶಿವನಾಳ, ವಿ.ಎಲ್. ಕಂಬಾರ, ಎಂ.ಪಿ. ಸಿಡ್ಲನ್ನವರ, ಈರವ್ವ ಜಗದಾಳ, ಹನಮವ್ವ ಕೊಳ್ಳನ್ನವರ, ಶಾರವ್ವ ಹನಮರ ಸೇರಿದಂತೆ ಮತ್ತಿತರರು ಇದ್ದರು. ಬಿ.ಎಸ್. ಭೂಷಣ್ಣವರ ಸ್ವಾಗತಿಸಿದರು. ಎಸ್.ಪಿ. ಅಗಡಿ ನಿರೂಪಿಸಿದರು. ಬಿ.ಎಸ್. ಬೆಳಗಂಟಿ ವಂದಿಸಿದರು.

loading...