ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

0
6
loading...

ಕನ್ನಡಮ್ಮ ಸುದ್ದಿ-ಗದಗ: ಗಜೇಂದ್ರಗಡ ತಹಸೀಲ್ದಾರ್‌ ಕಚೇರಿಯಲ್ಲಿ ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರಿಂದ ಸಾರ್ವಜನಿಕ ಕುಂದುಕೊರತೆಗಳ ಸಭೆ ಜರುಗಿತು.
ಕುಂಟೋಜಿ ಗ್ರಾಮದಲ್ಲಿ ರೇಷ್ಮೆ ಇಲಾಖೆಯಿಂದ ನಿರ್ಮಿಸಿದ ಶೆಡ್‌ ಮಳೆ ಗಾಳಿಯಿಂದ ಹಾನಿಗೊಳಗಾಗಿದ್ದು ಅದರ ದುರಸ್ತಿ ಕುರಿತ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೆ ದುರಸ್ತಿ ಮಾಡಲು ಸೂಚಿಸಿದರು.
ಜಿಂಕೆಗಳ ಹಾಗೂ ಮಳೆಯಿಂದಾಗಿ ಬೆಳೆ ಹಾನಿಗೆ ಪರಿಹಾರ ಒದಗಿಸುವ ಕುರಿತ ಅಹವಾಲು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಲು ಸೂಚಿಸಿದ ಅವರು, ಸಿಪಿಐಎಂ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ, ಬಡವರಿಗಾಗಿ ಗ್ಯಾಸ್‌ ಸಿಲೆಂಡರ ಪೂರೈಸುವ, ಜೀಗೂರ ಗ್ರಾಮಕ್ಕೆ ಗ್ರಾ. ಪಂ. ಸೌಲಭ್ಯ ಒದಗಿಸಲು ಸೂಚನೆ ನೀಡಿದರು. ಗಜೇಂದ್ರಗಡ ಪುರಸಭೆಯ ವ್ಯಾಪ್ತಿಗೊಳಪಡುವ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಹೊಸದಾಗಿ ಕಾರ್ಯಾರಂಭಗೊಂಡಂತಹ ಗಜೇಂದ್ರಗಡ ತಾಲೂಕಿನಲ್ಲಿ ಆಧಾರ ಕೇಂದ್ರ ಸ್ಥಾಪಿಸಲು ಹಾಗೂ ಮಳೆಯಿಂದ ಕುಸಿದ ಮನೆಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚನೆ ನೀಡಿದರು. ಜಿ.ಪಂ. ಪ್ರಭಾರಿ ಸಿ.ಇ.ಓ. ಎಸ್‌.ಸಿ.ಮಹೇಶ, ಗದಗ ಉಪವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌.ಎನ್‌. ರುದ್ರೇಶ, ಕೃಷಿ ಇಲಾಖೆ ಜಂಟಿ £ರ್ದೇಶಕ. ಕೆ.ಸಿ.ಬಾಲರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ರುದ್ರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ£ರ್ದೇಶಕ ಅಶೋಕ ಕಲಘಟಗಿ, ಗಜೇಂದ್ರಗಡ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶ್ರೀಮತಿ ಹನುಮಂತಮ್ಮ, ತಹಶೀಲ್ದಾರ ಎಸ್‌.ಎಸ್‌.ವಾಲಿ ಸೇರಿದಂತೆ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...