ಸ್ವದೇಶಿ ಉತ್ಪನ್ನ ಬಳಸಿ ದೇಶ ಭದ್ರತೆಗೆ ಕೈಜೋಡಿಸಿ: ಭೈರವಾಡಗಿ

0
12
loading...

ಬಸವನಬಾಗೇವಾಡಿ: ಸ್ವದೇಶಿ ಉತ್ಪನ್ನಗಳ(ವಸ್ತು) ಬಳಕೆಯಿಂದ ದೇಶದ ಭದ್ರೆತೆಗೆ ಪೂರಕವಾದ ವಾತಾವರಣ ನಿರ್ಮಿಸಲು ಯುವಕರು ಮುಂದಾಗಬೇಕೆಂದು ಜಿಲ್ಲಾ ಪತಂಜಲಿ ಯೋಗ ಪ್ರಭಾರಿ ಸುನೀಲ ಭೈರವಾಡಗಿ ಹೇಳಿದರು.
ಸ್ಥಳೀಯ ವಿರಕ್ತಮಠದಲ್ಲಿ ಭಾನುವಾರ ನಡೆದ ಪತಂಜಲಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಯೋಗ ಶಿಕ್ಷಕರಾಗಿ ಆಯ್ಕೆ ಮಾಡುವ ಸಭೆಯಲ್ಲಿ ಮಾತನಾಡಿದ ಅವರು ಪತಂಜಲಿ ಉತ್ಪನ್ನಗಳು ಸ್ವದೇಶಿ ವಸ್ತುಗಳಾಗಿದ್ದು ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗಳನ್ನು ಖರೀದಿಸುವುದರಿಂದ ದೇಶದ ಭದ್ರತೆ ಕಾಪಾಡಿದಂತ್ತಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಮಹಿಳಾ ಯೋಗ ಪ್ರಭಾರಿ ಮಾತನಾಡಿ ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮಲ್ಲಿರುವ ಅನೇಕ ಕಾಯಿಲೆಗಳು ದೂರವಾಗುತ್ತವೆ, ವೈದ್ಯರಿಂದ ವಾಶಿಯಾಗದ ಕಾಯಿಲೆಗಳು ಪ್ರತಿನಿತ್ಯ ಮಾಡುವ ಯೋಗದಿಂದ ದೂರವಾಗುತ್ತವೆ, ಸ್ವದೇಶಿ ವಸ್ತುಗಳು ಪ್ರತಿಯೊಂದು ಗ್ರಾಮಗಳಿಗೆ ತಲುಪುವಂತ್ತಾಗಬೇಕೆಂದು ಹೇಳಿದರು.
ಸಭೆಯಲ್ಲಿ ತಾಲೂಕಾ ಪತಂಜಲಿ ಯೋಗ ಪ್ರಭಾರಿ ಕಾಶೀನಾಥ ಅವಟಿ ಮಾತನಾಡಿದರು, ಜಿಲ್ಲಾ ಮಹಿಳಾ ಪ್ರಭಾರಿ ಸುನಂದಾ ಹೊನ್ನವಾಡ, ರಾಜುಗೌಡ ಚಿಕ್ಕೊಂಡ, ತಾಳಿಕೋಟಿಯ ಯೋಗ ಶಿಕ್ಷಕ ಶಾಂತು ನಾವದಗಿ, ಸಿಂದಗಿಯ ಶಿವಾನಂದ ತಾವರಖೇಡ, ಅಶೋಕ ಮುಳವಾಡ, ಶಿವಾನಂದ ನಾಗರಾಳ, ಶಿವಾನಂದ ತೋಳನೂರ, ಹನಮೇಶ ಕಲಾಲ, ಚಂದ್ರು ಸಿಂದಗಿ, ಸಾವಿತ್ರಿ ಕಲ್ಯಾಣಶೆಟ್ಟಿ, ಮಹಾದೇವಿ ಬಿರಾದಾರ, ಭಾರತಿ ಕುಲಕರ್ಣಿ ಕವಿತಾ ಪವಾರ, ಮಹಾದೇವಿ ಒಣರೊಟ್ಟಿ, ಬಿಸಿಎಂ ಹಾಸ್ಟೀಲ್‌ ವಾರ್ಡನ್‌ ಶ್ರೀಮತಿ ಸಾವಳಗಿ ಸೇರಿದಂತೆ ಇತರರು ಇದ್ದರು. ಗಿರಿಜಾ ಪಾಟೀಲ ಸ್ವಾಗತಿಸಿ ನಿರೂಪಿಸಿದರು, ಪ್ರಭಾಕರ ಖೇಡದ ವಂದಿಸಿದರು.

loading...