ಹಂದಿಗಳ ವಾಸಸ್ಥಾನವಾದ ಈಜುಕೊಳ: ಸ್ವಚ್ಛತೆಗೆ ಆಗ್ರಹ

0
9
loading...

ಕನ್ನಡಮ್ಮ ಸುದ್ದಿ-ಸವಣೂರ: ಪಟ್ಟಣದ ಹೃದಯ ಭಾಗವೆಂದು ಹೆಸರು ಪಡೆದಿರುವ ನವಾಬರ ಅರಮನೆಯ ಪಕ್ಕದಲ್ಲಿ ನಿರ್ಮಾಣಗೊಂಡ ವಿ.ಕೃ.ಗೋಕಾಕ ಭವನದ ಮುಂದೆ ಇರುವ ಈಜುಕೊಳ ಈಗಿನ ಹಂದಿ ಹಾಗೂ ಕೊಳಚೆ ನೀರಿನ ತಾಣವಾಗಿ ಪರಿವರ್ತನೆಗೊಂಡು, ಸಾರ್ವಜನಿಕರಿಗೆ ತ್ಯಾಜ್ಯ ವಸ್ತುಗಳನ್ನು ಬಿಸಾಡುವ ಚರಂಡಿಯಾಗಿದೆ. ಆದ್ದರಿಂದ, ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಚಿಮಾರಿ ಹಾಕಿಸುವಂತೆ ಇಂದು ಕೆಸರುಮಯವಾದ ನೀರಿನಲ್ಲಿ ಸಮಾಜ ಪರಿವರ್ತನ ಸಮಿತಿ ಅಧ್ಯಕ್ಷ ಮಹದೇವ ಮಹಿಂದ್ರಕರ ಈಜು ಕೊಳದಲ್ಲಿ ಶೀರ್ಷಾಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಸೊಳ್ಳೆ ಮುಕ್ತ ಪಟ್ಟಣ ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಸಾಕಷ್ಟು ನೈರ್ಮಲ್ಯೀಕರಣ ಸ್ವಚ್ಚೆತೆಗೆ ಆದ್ಯತೆ ನೀಡಿ ಕೆಲಸ ಪ್ರಾರಂಭಿಸಲಾಗಿದೆÉ ಎಂದು ಹೇಳುವ ಅಧಿಕಾರಿಗಳು ತಮ್ಮ ಕಚೇರಿಯ ಮುಂದೆ ನವಾಬರ ಐತಿಹಾಸಿಕ ಈಜು ಕೊಳದಲ್ಲಿ ಸಾಕಷ್ಟು ತ್ಯಾಜ್ಯ ವಸ್ತುಗಳನ್ನು ಬಿಸಾಡುವುದರಿಂದ ಪಟ್ಟಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ನಮೂನೆಯ ಸೊಳ್ಳೆಗಳು ಹಾಗೂ ಭಯಾನಕ ರೀತಿಯಲ್ಲಿ ರೋಗವನ್ನು ಸೃಷ್ಠಿಸುವ ಈ ಈಜುಕೊಳ್ಳದಲ್ಲಿ ನಡೆಯುತ್ತಿದೆ. ಆದರೆ ಇದರ ಬಗ್ಗೆ ಯಾವ ಅಧಿಕಾರಿಯಾಗಲಿ ಕಿಂಚಿತ್ತು ಕಾಳಜಿ ವಹಿಸದೆ ಮೌನಕ್ಕೆ ಶರಣಾಗಿರುವುದನ್ನು ಖಂಡಿಸಿ ಕೊಳಚೆ ನೀರಿನಲ್ಲಿಯೆ ಯೋಗಾಸನ ಪ್ರಾರಂಭಿಸಿ ಅಧಿಕಾರಿಗಳನ್ನು ಎಚ್ಚರಗೋಳ್ಳಿಸುವ ಪ್ರಯತ್ನಕ್ಕೆ ಮುಂದಾಗಿರುವದಾಗಿ ತಿಳಿಸಿದರು.
ಈಜುಕೊಳ ಕೆಲಸಕ್ಕೆ ಬಾರದೆ ಇದ್ದರೆ ಇದನ್ನು ಸಂಪೂರ್ಣವಾಗಿ ಮುಚ್ಚಿ ಕಣ್ಣಿನ ಆಸ್ಪತ್ರೆಯ ಕಟ್ಟಡಕ್ಕೆ ಜಾಗವನ್ನು ಒದಗಿಸಿ ಅನುಕೂಲ ಕಲ್ಪಿಸಿ. ಅದರ ಸುತ್ತಲೂ ಕಂಪೌಂಡ ನಿರ್ಮಾಣ ಮಾಡಿ ಜನರಿಗೆ ಆನಂದಿಸಲು ಕಾರಂಜಿ ನಿರ್ಮಾಣ ಮಾಡಿ ಅಥವಾ ಪಕ್ಕದಲ್ಲಿಯೆ ಶಾಲೆ ಇರುವುದರಿಂದ ಮುಚ್ಚಿ ಆಟದ ಮೈದಾನ ನಿರ್ಮಾಣ ಮಾಡಲು ಮುಂದಾಬೇಕು. ಈ ಈಜುಕೊಳದಲ್ಲಿ ನಿಂತ ನೀರು ಭಯಾನಕ ರೋಗವನ್ನು ಪಟ್ಟಣದ ತುಂಬೆಲ್ಲಾ ಹರಡುವಂತಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಯ ಪಾತ್ರೆಗಳನ್ನು ಶುಚಿತ್ವದಿಂದ ಇಡಲು ಪ್ರಯತ್ನಿಸಿ. ಅಧಿಕಾರಿಗಳು ಇಂತಹ ಕೊಳಚೆ ನೀರನ್ನು ತೆರವುಗೊಳ್ಳಿಸಲು ಆರೋಗ್ಯ ಇಲಾಖೆಯವರು ಮೇಲ್ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡದೇ ಇರುವುದರಿಂದ ಪಟ್ಟಣದ ತುಂಬೆಲ್ಲಾ ರೋಗಗಳು ಹರಡುವಂತಾಗಿದೆ ಎಂದು ಸಮಾಜ ಪರಿವರ್ತನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು.

ಸ್ವಚ್ಛತೆಗೆ ಮುಂದಾಗದೆ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ದಿಕ್ಕಾರ ಹಾಕುವ ಮೂಲಕ ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮದು ಗಿತ್ತೆ, ರಪೀಕ ಮಕಾನಂದಾರ, ಮಂಜುನಾಥ ಗಿತ್ತೆ, ಬಸವರಾಜ ಕುಂದಗೋಳ, ಎಸ್.ಸಿ. ಮಾಗೋಡ, ಮೈಲಾರಪ್ಪ ತಳವಾರ, ರಾಜೇಂದ್ರ ಮಹೇಂದ್ರಕರ, ಅಶೋಕ ರೆಡ್ಡಿ ಹಾಗೂ ಸಾರ್ವಜನಿಕರು ಇದ್ದರು.

loading...