ಹಣ ಬಿಡುಗಡೆಯಾಗಿ ೧೦ವರ್ಷವಾದರು ನಿರ್ಮಾಣವಾಗದ ಅಂಬೇಡ್ಕರ್ ಭವನ

0
33
loading...

ಎಸ್‌ಸಿ,ಎಸ್‌ಟಿ ಉಪವಿಭಾಗ ಮಟ್ಟದ ಹಿತರಕ್ಷಣಾ ಸಮಿತಿಯಲ್ಲಿ ಜಿಪಂ ಸದಸ್ಯರ ಆರೋಪ
ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರದಿಂದ ೫೦ಲಕ್ಷ ಹಣ ಬಿಡುಗಡೆಯಾಗಿ ಹತ್ತು ವರ್ಷಗತಿಸಿದರು ಇನ್ನೂ ಕೂಡ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯ ಜೇತೆಂದ್ರ ಮಾದರವರು ಆರೋಪಿಸಿದಾರೆ.
ಮಂಗಳವಾರ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಅನುಸೂಚಿ ಜಾತಿ ಅನುಸೂಚಿ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ ಕಾಯ್ದೆ ೧೯೮೯ ಹಾಗೂ ನಿಯಮ ೧೯೯೫ರ ತಿದ್ದುಪಡಿ ನಿಯಮಗಳು ೨೦೧೩ರಂತೆ ನಿಯಮ ೧೭ಎ ಪ್ರಕಾರ ಬೆಳಗಾವಿ ಕಂದಾಯ ಉಪವಿಭಾಗ ಮಟ್ಟದ ಜಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದವರು ಖಾನಾಪೂರದಲ್ಲಿ ಅಂಬೇಡ್ಕರ್ ಭವನಕ್ಕೆ ಹಣ ಬಂದಿದ್ದರೂ ಇಲ್ಲಿಯ ಕೇಲವು ಹಿತ್ತಾಸಕ್ತಿಗಳ ಹಾಗೂ ತಾಲೂಕು ಪಂಚಾಯತಿಯವರ ನಿರ್ಲಕ್ಷö್ಯದಿಂದ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಗಂಭೀರವಾದ ಆರೋಪವನ್ನು ಮಾಡಿದರು.

loading...