ಹದಗೆಟ್ಟ ರಸ್ತೆ: ವಾಹನ ಸವಾರರಿಗೆ ತೊಂದರೆ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಲ್ಲಿನ ದಿವಗಿಯ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ ಹೊಂಡಗಳಿಂದ ಕೂಡಿ ಸಂಪೂರ್ಣ ಹದಗೆಟ್ಟಿರುವುದುರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ದ್ವೀಚಕ್ರ ವಾಹನ ಸವಾರರಿಗೆ ಬೈಕ್‌ ಓಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗ ಮಳೆಗಾಲ. ಎಲ್ಲಿನೋಡಿದರೂ ಅಲ್ಲೆಲ್ಲ ಹೊಂಡಮಯ ರಸ್ತೆಗಳೇ ರಾರಾಜಿಸುತ್ತವೆ. ಹೀಗಿರುವಾಗ ದಿವಗಿಯ ಸೇತುವೆಯಲ್ಲಿ ಹೊಂಡವೇ ರಸ್ತೆಯಾಗಿ ಮಾರ್ಪಟ್ಟಿದ್ದು, ಪಾದಚಾರಿಗಳಿಗೆ ಬೈಕ್‌ ಸವಾರರಿಗೆ ಈ ರಸ್ತೆ ದಾಟುವುದೇ ಭಯಾನಕ ಅನುಭವವಾಗಿದೆ. ದಿವಗಿ ಊರಿನ ಎಡ ಬಲ ಶಿರಸಿ ಹಾಗೂ ಕಾರವಾರ ರಸ್ತೆಗಳು ಪ್ರತ್ಯೆಕವಾಗಿದ್ದು, ಇವೆರಡು ರಸ್ತೆಗಳು ದಿವಗಿ ಬ್ರಿಜ್‌ಗೆ ಜೋಡಣೆಯಾಗುತ್ತದೆ. ಕುಮಟಾದಿಂದ ಶಿರಸಿ ಹಾಗೂ ಕಾರವಾರಕ್ಕೆ ಹೊರಡುವ ವಾಹನಗಳು ಕಾರವಾರದಿಂದ ಕುಮಟಾ ಕಡೆ ಹೊರಡುವ ವಾಹನ ಏಕಕಾಲಕ್ಕೆ ಇದೇ ಮಾರ್ಗವಾಗಿ ಹೊರಡುವುದರಿಂದ ವಾಹನ ದಟ್ಟಣೆ ಹೆಚ್ಚಿದೆ.
ಹಿಗಿರುವಾಗ ಸರಿ ಸುಮಾರು 150 ಮೀ ನಷ್ಟು ಉದ್ದವಿರುವ ದಿವಗಿಯ ಸೇತುವೆಯ ತುಂಬ ದೊಡ್ಡ ದೊಡ್ಡ ಕಂದಕಗಳೇ ಬಾಯಿ ತೆರೆದು ನಿಂತಿದೆ. ಸಾಲದಕ್ಕೆ ಈ ಹೊಂಡದಲ್ಲಿ ಮಳೆಯ ನೀರು ಶೇಕರಣೆಯಾಗಿ ಹೊಂಡಮಯ ರಸ್ತೆಯಲ್ಲಿ ಬೈಕ್‌ ಸವಾರರು ವಾಹನ ಓಡಿಸಲು ಹರಸಾಹಸ ಪಡಬೇಕಿದೆ.
ಒಂದೆಡೆ ವಾಹನಗಳ ಎಲ್ಲೆ ಮೀರಿದ ಓಡಾಟ, ಇನ್ನೋಂದೆಡೆ ಮೈತುಂಬಾ ಒದ್ದೆ ಮಾಡುವ ಮಳೆ ಮಗದೊಂದೆಡೆ ರಸ್ತೆಯಲ್ಲಿ ಸಾಗುವ ವಾಹನಗಳು ಕಂದಕದಲ್ಲಿದ್ದ ನೀರು ಬೈಕ್‌ ಸವಾರನಿಗೆ ಅಭಿಶೇಕ ಮಾಡುತ್ತವೆ. ಬೈಕ ಓಡಿಸುವಲ್ಲಿ ಸ್ವಲ್ಪ ಮೈಮರೆತರೆ ಸ್ಕಿಡ್‌ ಆಗಿ ಕೈಕಾಲು ಮುರಿದು ಅಪಘಾತ ಸಂಭವನಿಯತೆ ಹೆಚ್ಚಾಗಿದೆ.
ಈ ನಡುವೆ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗುವ ರಸ್ತೆಗಳಿಗೆ ಇಂತಿಷ್ಟೆ ಪ್ರಮಾಣದಲ್ಲಿ ಜಲ್ಲಿ ಡಾಂಭರಿಕರಣ ಮಾಡಬೇಕಾದ ನಿಯಮಾವಳಿಗಳಿದ್ದರೂ ಈ ನಿಯಮ ಉಲ್ಲಂಘಿಸಿ ಗುತ್ತಿಗೆದಾರರು ಕಡಿಮೆ ಪ್ರಮಾಣದಲ್ಲಿ ಜಲ್ಲಿ ಡಾಂಬರ್‌ ಹಾಕಿ ರಸ್ತೆ ನಿರ್ಮಿಸುವುದರಿಂದ ಒಂದೇ ವರ್ಷದಲ್ಲಿ ರಸ್ತೆಯಲ್ಲಿ ಹೊಂಡ ಬೀಳಲು ಕಾರಣವೆನ್ನಲಾಗಿದೆ. ಗುತ್ತಿಗೆದಾರರಿಗೆ ರಸ್ತೆ ನಿರ್ವಹಣೆಯ ಜವಾಬ್ದಾರಿ ನೀಡಿದ ಇಂಜಿನಿಯರಗಳ ಕೃಪಾಕಟಾಕ್ಷದಿಂದ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣವಾಗಿ ಒಂದೇ ವರ್ಷದಲ್ಲಿ ಪ್ಯಾಚ್‌ ವರ್ಕ ನಡೆಯುತ್ತದೆ. ನಂತರ 6 ತಿಂಗಳಲ್ಲಿ ಮರುಡಾಂಬರಿಕರಣವಾದರೂ ಗುಣಮಟ್ಟದ ಕೆಲಸ ವಾಗದಿರುವುದೇ ಹೊಂಡ ಬಿಳಲು ಕಾರಣ ವೆನ್ನಲಾಗಿದೆ. ಜನರ ಜೀವಕ್ಕೆ ಆಪತ್ತು ತರುವ ಇಂತಹ ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಗೆ ಕಪ್ಪು ಲಿಷ್ಟನಲ್ಲಿ ಹಾಕುವದಕ್ಕಿಂತಲೂ ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದರೂ ಕಣ್ಣು ಮುಚ್ಚಿ ಎಂಬಿ ಬರೆಯುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರೆ ರಸ್ತೆ ಇಂತ ಘೋರ ಹೊಂಡದಿಂದ ಮುಕ್ತಿ ಪಡೆಯುತ್ತದೆ ಎನ್ನುವ ಮಾತು ನಿತ್ಯ ಈ ಭಾಗದಲ್ಲಿ ಸಂಚರಿಸುವ ಪ್ರಜ್ಞಾವಂತ ನಾಗರಿಕರದಾಗಿದೆ. ಜನರ ಪ್ರಾಣದ ಜೊತೆ ಚೆಲ್ಲಾಟವಾಡದೆ ತಕ್ಷಣ ಸಮಸ್ಯೆ ನಿವಾರಿಸಿ ರಸ್ತೆಯನ್ನು ಹೊಂಡದಿಂದ ಮುಕ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆನುವುದು ಈ ಭಾಗದ ಜನರ ಆಶಯವಾಗಿದೆ.

loading...