ಹಸಿರು ದೀಪ ಆರಿ ಕೆಂಪು ಹೊತ್ತಿದರು ಸಿಗ್ನಲ್ ಜಂಪ್ ಮಾಡಿದ ಕೆಎಸ್ಆರಟಿಸಿ ಬಸ್

0
33
loading...

ಹೌದು ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ನಡೆದ ಘಟನೆ ಇದು. ಹಸಿರು ದೀಪ ಆರಿ ಕೆಂಪು ದೀಪ ಹೊತ್ತಿದರು ಕೆಎಸ್ಆರಟಿಸಿಯ ಬಸ್,ಒಂದು ಮಹಿಂದ್ರ್ ಪಿಕ್ ಅಪ್ ಹಾಗೂ ಬೈಕ್ ಸವಾರನೊಬ್ಬ ಟ್ರಾಫಿಕ ಪೊಲೀಸರು ಮುಂದೆ ನಿಂತರು ತಲೆ ಕೆಡಿಸಿಕೊಳ್ಳದೆ ಸಿಗ್ನಲ್ ಜಂಪ್ ಮಾಡುವ ಪ್ರಯತ್ನದಲ್ಲಿ ಇದ್ದರು. ಆದರೆ ಬೇರೊಂದು ಸಿಗ್ನಲನಿಂದ ವಾಹನಗಳು ಬರುತ್ತಲೇ ನಡು ರಸ್ತೆಯಲ್ಲೆ ನಿಲ್ಲಬೇಕಾಯಿತು.ಟ್ರಾಫಿಕ ಪೊಲೀಸಪ್ಪ ಬಂದು ಆ ಬಸ್ ಚಾಲಕನಿಗೆ ಹಿಂದೆ ಹೋಗಲು ಸೂಚಿಸಿದರು ಆತನಿಗೆ ಟ್ರಾಫಿಕ ನಿಯಮದ ಭಯ ಇದ್ದಂತೆ ಕಾಣಲಿಲ್ಲ. ಎಷ್ಟಾದರೂ ಸರ್ಕಾರಿ ಬಸ್ ಅಲ್ಲವೇ ಅನ್ನೋ ಓವರ್ confidence ಇರಬೇಕು. ಇಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿದ್ದು ಅಪಘಾತ ಆಗುವ ಸಂಭವ ಅಲ್ಲಗಳೆಯುವಂತಿಲ್ಲ.
ಯಾವುದೋ ದೊಡ್ಡ ಅಪಘಾತ ನಡೆಯುವ ಮುನ್ನ ಪೊಲೀಸರು ಇಂತವರ ಮೇಲೆ ಕ್ರಮಕ್ಕೆ ಮುಂದಾಗಲಿ

loading...