ಹಿರಿಯರ ಆದರ್ಶ ಮೈಗೂಡಿಸಿಕೊಳ್ಳಿ: ಕಲ್ಮೇಶ

0
29
loading...

ಕನ್ನಡಮ್ಮ ಸುದ್ದಿ ನರೇಗಲ್ಲ: ಕಾಯಕಯೋಗಿ ಬಸವಣ್ಣನವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಶರಣರಾಗಿ ಬಾಳಿದ ನಿಜಸುಖಿ ಹಡಪದ ಅಪ್ಪಣ್ಣನವರ ಬದುಕು ಸಮಾಜಕ್ಕೆ ದಿಕ್ಸೂಚಿಯಾಗಿದೆ ಎಂದು ಪ.ಪಂ ಅಧ್ಯಕ್ಷ ಕಲ್ಮೇಶ ತೊಂಡಿಹಾಳ ಹೇಳಿದರು.
ಸ್ಥಳೀಯ ಪ.ಪಂ ಕಾರ್ಯಾಲಯದಲ್ಲಿ ನಡೆದ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ 884ನೇ ಜಯಂತೋತ್ಸವದಲ್ಲಿ ಮಾತನಾಡಿದರು. ವಚನಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನುಭಾವರ ಸ್ಮರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ಹಿರಿಯ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕು. ಶರಣರು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿದ್ದ ಜಾತಿ ಪದ್ಧತಿ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಡಿದ್ದಾರೆ. ಜಾತ್ಯಾತೀತ ತತ್ವ ಪ್ರತಿಪಾದಕರಾದ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಅಪ್ಪಣ್ಣನವರು ಅಂದಿನ ಕಾಲದಲ್ಲಿ ಸ್ವಾಮಿ ನಿಷ್ಠೆಯನ್ನು ಪ್ರದರ್ಶನ ಮಾಡುವ ಮೂಲಕ ಉತ್ತಮ ವ್ಯಕ್ತಿತ್ವ ಹೊಂದಿದ್ದರು. ಕಲ್ಯಾಣದಲ್ಲಿ ಕ್ರಾಂತಿಯಾದ ನಂತರ ಬಸವಣ್ಣ ಕೂಡಲಸಂಗಮಕ್ಕೆ ತೆರಳಿದರು, ಆ ಸಂದರ್ಭದಲ್ಲಿ ಅಪ್ಪಣ್ಣನವರು ಅವರ ಜತೆ ತೆರಳಿದರು, ಇಂಥ ಬೆಳವಣಿಗೆ ಅವರಲ್ಲಿದ್ದ ನಿಷ್ಠೆ, ಪ್ರಾಮಾಣಿಕತೆಯನ್ನು ಅನಾವರಣಗೊಳಿಸುತ್ತದೆ ಎಂದರು.
ಪ.ಪಂ ಉಪಾಧ್ಯಕ್ಷೆ ಶಿವಮ್ಮ ಬಾದನಟ್ಟಿ, ಸದಸ್ಯ ಸುನೀಲ ಬಸವರಡ್ಡೇರ, ಶರಣಬಸಪ್ಪ ಜುಟ್ಲ, ಖಾದರಬಾಷಾ ಹೂಲಗೇರಿ, ಯಲ್ಲಪ್ಪ ಮಣ್ಣವಡ್ಡರ, ಶಶಿಧರ ಸಂಕನಗೌಡ್ರ, ಪ.ಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಹುಲ್ಲಮ್ಮನವರ, ಮುತ್ತಣ್ಣ ಹಡಪದ, ಚಂದ್ರು ಹಡಪದ, ಬಸವರಾಜ ಹಡಪದ, ದೇವಪ್ಪ ಹಡಪದ, ಶೇಖರಪ್ಪ ಖ್ಯಾಡದ, ಎಂ.ಬಿ. ಮಾರನಬಸರಿ, ವೀರುಪಾಕ್ಷಯ್ಯ ಕೋರಧಾನ್ಯಮಠ, ಸಕ್ರಪ್ಪ ಹಡಪದ, ಸೇರಿದಂತೆ ಹಡಪದ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಪ.ಪಂ ಸಿಬ್ಬಂದಿ ಎಸ್‌.ಎ. ಜಕ್ಕಲಿ ನಿರ್ವಹಿಸಿದರು. ಅಂಗನವಾಡಿ ಕೇಂದ್ರದಲ್ಲಿ: ಸ್ಥಳೀಯ ಹಿರೇಮಠ ಓಣಿಯ 122ನೇ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಹಡಪದ ಅಪ್ಪಣ್ಣವನರ 884ನೇ ಜಯಂತಿಯನ್ನು ಆಚರಿಸಲಾಯಿತು. ವಲಯ ಮೇಲ್ವಿಚಾರಕಿ ಸಿ.ಆರ್‌. ಶಾನಭೋಗರ, ಕಾರ್ಯಕರ್ತೆಯರಾದ ರೇಣುಕಾ ಗ್ರಾಮಪೂರೋಹಿತ, ರೇಣುಕಾ ಕಳಕಣ್ಣವರ, ಗಂಗಮ್ಮ ಶಿವಪ್ಪಯ್ಯನಮಠ, ಅನ್ನಪೂರ್ಣ ಬೇನಹಾಳ, ಚಂದ್ರಕಲಾ ಸಂಕನಗೌಡ್ರ, ಶಾರಧಾ ಹಿರೇಮಠ, ಮಂಜುಳಾ ಮುಗಳಿ, ಸರೋಜಾ ಸಿದ್ದನಗೌಡ್ರ, ಪ್ರೇಮಾ ಸಜ್ಜನ ಸೇರಿದಂತೆ ಇತರರು ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ: ಸ್ಥಳೀಯಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಹಡಪದ ಅಪ್ಪಣ್ಣನವರ 884ನೇ ಜಯಂತಿಯನ್ನು ಆಚರಿಸಲಾಯಿತು. ಮುಖ್ಯಶಿಕ್ಷಕ ಡಿ.ಎಚ್‌. ಪರಂಗಿ ಶರನ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಎನ್‌.ಎಲ್‌. ಚವಾಣ, ಎಸ್‌.ಎಂ. ಕರಡಿ, ಜೆ.ಎ. ಪಾಟೀಲ, ಎಸ್‌.ಎಚ್‌. ಹಾದಿಮನಿ ಉಪಸ್ಥಿತರಿದ್ದರು.

loading...