ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್, ಹೊರ ತೆಗೆದ ವೈದ್ಯರು

0
15
loading...

ಕಾನ್ಪುರ್: ಇದು ಕೇಳಲು ನಿಮಗೆ ಅಚ್ಚರಿಯಾದರು ನಿಜಾ,ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು ಅದೆನೆಂದರೆ ವ್ಯಕ್ತಿಯೊರ್ವನ ಹೊಟ್ಟೆಯಿಂದ ವೈದ್ಯರು ಸ್ಟೀಲ್ ಗ್ಲಾಸ್ ಹೊರ ತೆಗದಿದ್ದಾರೆ.
ಇದು ಕೇಳಲು ನಂಬಲೂ ವಿಚಿತ್ರ ಎನ್ನಿಸಿದರೂ, ನೀವು ಇದನ್ನು ಒಪ್ಪಲೇ ಬೇಕು. ಉತ್ತರ ಪ್ರದೇಶದ ಕಾನ್ಪುರ್​ ವೈದ್ಯರು ಈ ಗ್ಲಾಸ್​ ಅನ್ನು ವ್ಯಕ್ತಿ ದೇಹದಿಂದ ಹೊರೆತೆಗೆದಿರೋದು.

ಇದು ದೇಹದೊಳಗೆ ಸೇರಿದ್ದು ಹೇಗೆ?
ರಾಮ್​ದಿನ್​ ಎಂಬ ೬೨ ವಯಸ್ಸಿನ ವ್ಯಕ್ತಿಯ ದೇಹದಿಂದ ಈ ಗ್ಲಾಸ್​ ಹೊರತೆಗೆಯಲಾಗಿದೆ. ಇಲ್ಲಿನ ರಮಾ ಹಾಸ್ಪಿಟಲ್ ಅಂಡ್​ ರಿಸರ್ಚ್​​ ಸೆಂಟರ್​ ವೈದ್ಯರು ಅಪರೇಷನ್​ ಮೂಲಕ ಗ್ಲಾಸ್ ಹೊರೆತೆಗೆದಿದ್ದಾರೆ.

ಕನ್ನೌಜ್​ ಮೆಡಿಕಲ್​ ಕಾಲೇಜವೊಂದರಲ್ಲಿ ರಾಮ್​ದಿನ್​ ಗಾರ್ಡ್​​ ಕೆಲಸ ಮಾಡುತ್ತಿದ್ದು, 10 ದಿನಗಳ ಕೆಳಗೆ ಯಾರೂ ದುಷ್ಕರ್ಮಿಗಳ ಈತ ಮೇಲೆ ದಾಳಿ ಮಾಡಿದ್ದರಂತೆ. ಇದರಿಂದ ರಾಮ್​ದಿನ್ ಪ್ರಜ್ಞೆ ತಪ್ಪಿದ್ದು, ಇದೇ ವೇಳೆ ಈತನ ಗುಪ್ತಾಂಗಗಳ ಮೂಲಕ ಗ್ಲಾಸ್​ ಅನ್ನು ದೇಹಕ್ಕೆ ಹೊಕ್ಕಿಸಲಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ನಂತರ ರಾಮ್​ದಿನ್​ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು, ಜೂನ್​ 26ರಂದು ಅಲ್ಟ್ರಾಸೌಂಡ್​ ಮಾಡಿಸಿದಾಗ ಗ್ಲಾಸ್​ ಇರೋದು ಪತ್ತೆಯಾಗಿದೆ. ಇದಾದ ಬಳಿಕ ರಮಾ ಹಾಸ್ಪಿಟಲ್ ಅಂಡ್​ ರಿಸರ್ಚ್​​ ಸೆಂಟರ್​ಗೆ ರಾಮ್​ದಿನ್​ ಅಡ್ಮಿಟ್​ ಆಗಿದ್ದು, ಯಶಸ್ವಿ ಅಪರೇಷನ್​ ಮೂಲಕ ಗ್ಲಾಸ್​ ಅನ್ನು ದೇಹದಿಂದ ತೆಗೆಯಲಾಗಿದೆ.
ದೇಹದಿಂದ ಗ್ಲಾಸ್ ತೆಗೆಯಲು ​ಸತತ ಎರಡು ಗಂಟೆಗಳ ಕಾಲ ಅಪರೇಷನ್​ ಕೈಗೊಳ್ಳಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

loading...