೭೧ ವರ್ಷಗಳ ಬಳಿಕ ಕಾಂಕ್ರೀಟ್ ರಸ್ತೆ ಕಂಡ ಗ್ರಾಮ…!

0
7
loading...

ಕೊಂಡಗಾವೋನ್(ಛತ್ತೀಸ್​​ಗಡ): ನಕ್ಸಲ್ ಪೀಡಿತ ಪ್ರದೇಶವೊಂದು ಸತತ ೭೧ ವರ್ಷಗಳ ಹೋರಾಟದ ಫಲವಾಗಿ ಕೊನೆಗೂ ಅಲ್ಲಿನ ಗ್ರಾಮಸ್ಥರು ಕಾಂಕ್ರೀಟ್ ರಸ್ತೆಯ ಸೌಲಭ್ಯ ಪಡೆದಿದ್ದಾರೆ.
ಆರಂಭದಲ್ಲಿ ಕೇವಲ ಮರದ ತುಂಡುಗಳನ್ನು ರಸ್ತೆಗೆ ಹಾಕಲಾಗಿತ್ತು. ಇದೀಗ ಸಂಪರ‍್ಣ ರಸ್ತೆ ಕಾಂಕ್ರಿಟಮಯವಾಗಿದ್ದು, ಜನರ ಹೋರಾಟಕ್ಕೆ ಫಲ ಸಿಕ್ಕಿದೆ.
೭೦ ಮೀಟರ್ ಉದ್ದದ ಕಾಂಕ್ರೀಟ್ ಸೇತುವೆಯನ್ನು ಒಂದು ತಿಂಗಳ ಅವಧಿಯಲ್ಲಿ ನರ‍್ಮಿಸಿ ಜನಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇಲ್ಲಿನ ಪೊಲೀಸರು ಹಾಗೂ ಜಿಲ್ಲಾಧಿಕಾರಿ ಪ್ರಯತ್ನಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದು ತಾತ್ಕಾಲಿಕ ಸೇತುವೆ ಆರಂಭದ ದಿನಗಳಲ್ಲಿ ಇತ್ತು. ಆ ಸೇತುವೆ ಮುರಿದು ಬಿದ್ದ ಬಳಿಕ ತರ‍್ತುಪರಿಸ್ಥಿತಿಯಲ್ಲಿ ಯಾರನ್ನಾದರೂ ಆಸ್ಪತ್ರೆಗೆ ಸೇರಿಸಲು ತುಂಬಾ ಕಷ್ಟವಾಗುತ್ತಿತ್ತು. ಸದ್ಯ ಎಲ್ಲವೂ ಬಗೆಹರಿದಿದೆ ಎಂದು ಸ್ಥಳೀಯ ವ್ಯಕ್ತಿ ಮಹೇಂದ್ರ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

loading...