36,747 ಅಂಕ ಗಳಿಸಿ ದಾಖಲೆ ಬರೆದ ಸೆನ್ಸೆಕ್ಸ್

0
12
loading...

ಮುಂಬೈ: ಮುಂಬೈ ಷೇರುಪೇಟೆ ಮತ್ತೊಂದು ಶತಕ ಸ್ಥಾಪಿಸಿದೆ. ಮಾರುಕಟ್ಟೆ ಬೆಲ್ ಬಾರಿಸುತ್ತಿದ್ದಂಯತೆ 200 ಅಂಕಗಳ ಏರಿಕೆ ಕಾಣುವ ಮೂಲಕ ಸೆನ್ಸೆಕ್ಸ್ 36,747.07 ಅಂಶಗಳಿಗೆ ಏರಿಕೆ ಕಂಡು ದಾಖಲೆ ಬರೆಯಿತು.
ಪ್ರಮುಖ ಬಿಎಸ್ಸಿ ಟಾಪ್ 30 ಷೇರುಗಳ ಬೆಲೆಯಲ್ಲಿ 227.91 ಅಂಕಗಳಷ್ಟು ಏರಿಕೆ ಕಂಡವು. ಆಯಿಲ್, ಗ್ಯಾಸ್, ಬ್ಯಾಂಕಿಂಗ್, ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರುಗಳಲ್ಲಿ ಭಾರಿ ಏರಿಕೆ ಕಂಡು ಬಂತು.
ಏಷ್ಯನ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆ ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ನ ಚೇರ್ಮನ್ ಜೆರೋಮ್ ಪೊವೆಲ್ ಅವರು ಇನ್ವೆಸ್ಟರ್ಸ್ ಹಿತಾಸಕ್ತಿ ಕಾಯುವ ಮಾತನಾಡಿದ್ದು, ಷೇರು ಪೇಟೆ ನಾಗಾಲೋಟಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಡೊಮೆಸ್ಟಿಲ್ ಇನ್ಸಸ್ಟಿಟ್ಯೂಟ್ ಇನ್ವೆಸ್ಟರ್ ಸುಮಾರು 840 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ವಿದೇಶಿ ಹೂಡಿಕೆದಾರರು 673 ಕೋಟಿ ಷೇರುಗಳ ಮಾರಾಟ ಮಾಡಿದ್ದಾರೆ ಎಂದು ಷೇರುಮಾರುಕಟ್ಟೆ ಡಾಟಾಗಳು ಹೇಳುತ್ತಿವೆ.
ಅದಾನಿ ಪೋರ್ಟ್ಸ್, ಹೆಚ್ಡಿಎಫ್ಸಿ ಬ್ಯಾಂಕ್, ಸನ್ ಫಾರ್ಮಾ, ಒಎನ್ಜಿಸಿ, ಕೋಲ್ ಇಂಡಿಯಾ, ಏಷ್ಯನ್ ಪೇಂಟ್, ಬಜಾಜ್ ಆಟೋ, ಸೇರಿದಂತೆ ಇತರ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡಿವೆ.

loading...