40 ಕೋಟಿ ಉಳಿತಾಯ ಬಜೇಟ್‌ ಮಂಡಿಸಿದ ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ

0
12
loading...

ಕನ್ನಡಮ್ಮ ಸುದ್ದಿ-ಕಾರವಾರ: ತಾಪಂ ವ್ಯಾಪ್ತಿಯ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ 2018-19ನೇ ಸಾಲಿಗೆ 40.05 ಕೋಟಿ ರೂ. ನ ಉಳಿತಾಯ ಬಜೆಟ್‌ ಅನ್ನು ತಾಲೂಕು ಪಂಚಾಯಿತ್‌ ಅಧ್ಯಕ್ಷೆ ಪ್ರಮೀಳಾ ನಾಯ್ಕ ಸಭೆಯಲ್ಲಿ ಶುಕ್ರವಾರ ಮಂಡಿಸಿದರು.
ತಾಲೂಕು ಪಂಚಾಯಿತಿ ಸಭೆಯಲ್ಲಿ ಬಜೇಟ್‌ ಪ್ರತಿಯನ್ನು ಓದಿದ ಅವರು, ಶಿಕ್ಷಣ ಇಲಾಖೆಗೆ 24.85 ಕೋಟಿ ರೂ., ಸರ್ವಶಿಕ್ಷಣ ಅಭಿಯಾನಕ್ಕೆ 1.67 ಕೋಟಿ ರೂ., ಆರೋಗ್ಯ ಇಲಾಖೆ 58.41 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆ 1.37 ಕೋಟಿ ರೂ., ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 40 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 8.07 ಕೋಟಿ ರೂ., ಕೃಷಿ ಇಲಾಖೆ 40.12 ಲಕ್ಷ ರೂ., ತೋಟಗಾರಿಕೆ ಇಲಾಖೆ 0.39 ಲಕ್ಷ ರೂ., ಪಶುಸಂಗೋಪನೆ 57 ಲಕ್ಷ ರೂ., ತಾಲೂಕು ಪಂಚಾಯಿತಿ ನೀರು ನೈರ್ಮಲ್ಯ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ 2.18 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ . ಎಂದು ತಿಳಿಸಿದರು. ಹೆಚ್ಚುತ್ತಿರುವ ಅಪಘಾತ: ಇತ್ತೀಚಿನ ದಿನದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಸಾವು ನೋವುಗಳ ಪ್ರಮಾಣ ದಿನೆ ದಿನೇ ಏರುತ್ತಿದೆ. ಇದಕ್ಕೆ ಯುವಕರು ಕುಡಿದು ಹಾಗೂ ಅತೀ ವೇಗದ ವಾಹನ ಚಲಾಯಿಸುವುದು ಕಾರಣ ಮಾತ್ರವಲ್ಲದೆ ಆರ್‌.ಟಿ.ಓ., ಪೊಲೀಸ್‌ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಚರ್ಚೆಯಾಯಿತು. ವಿಷಯ ಪ್ರಸ್ತಾಪಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಅತೀ ವೇಗದ ವಾಹನ ಚಲಾಯಿಸುವವರ ವಿರುದ್ಧ ಪೊಲೀಸ್‌, ಅಬಕಾರಿ ಹಾಗೂ ಆರ್‌.ಟಿ.ಓ. ಆಧಿಕಾರಿಗಳು ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. ಸಭೆಗೆ ಆರ್‌.ಟಿ.ಓ. ಅಧಿಕಾರಿ ಸಭೆಗೆ ಹಾಜರಾಗದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷೆ ಪ್ರಮೀಳಾ ನಾಯ್ಕ, ಸದಸ್ಯರಾದ ಸುರೇಂದ್ರ ಗಾಂವಕರ, ಪ್ರಶಾಂತ ಗೋವೇಕರ ಮಾತನಾಡಿ ಪ್ರತಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಯುವಕರು ಗಾಂಜಾ ಸೇವನೆಯಲ್ಲಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಆಗಮಿಸುವ ಮುನ್ನ ಸೂಚನೆ ನೀಡಿಯೇ ಬಂದಂತೆ ಸ್ಥಳದಲ್ಲಿ ಏನು ಸಿಕ್ಕಿಲ್ಲ ಎನ್ನುತ್ತಾರೆ. ಅಲ್ಲದೆ ಸುಳಿವು ನೀಡಿದವರ ಹೆಸರನ್ನು, ಮೊಬೈಲ್‌ ಸಂಖ್ಯೆಯನ್ನು ಅವರಿಗೇ ನೀಡುತ್ತಾರೆ ಎಂದು ಆರೋಪಿಸಿದರು.
ಆದ್ದರಿಂದ ಜಾಗವನ್ನು ಮಾರಾಟ ಮಾಡಲು ಅವಕಾಶ ನೀಡದೆ ಸರಕಾರದ ವಶಕ್ಕೆ ಪಡೆದು ಅವಶ್ಯಕತೆ ಇರುವವರಿಗೆ ಕೈಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸದಸ್ಯ ಮಾರುತಿ ನಾಯ್ಕ ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಇನ್ನುಳಿದಂತೆ ತೋಟಗಾರಿಕೆ ಇಲಾಖೆ, ಮೀನುಗಾರಿಕೆ, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯ ಆರಂಭದಲ್ಲಿ ಇತ್ತೀಚೆಗೆ ವೀರಮರಣವನ್ನಪ್ಪಿದ್ದ ನಗರದ ಕೋಡಿಬಾಗದ ಯೋಧ ವಿಜಯಾನಂದ ನಾಯ್ಕ ಅವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಆಹಾರ ಇಲಾಖೆ ಅಧಿಕಾರಿ ಮಾತನಾಡಿ ಚುನಾವಣೆ ಪೂರ್ವದಲ್ಲಿ ಒಟ್ಟೂ 3812 ಹೊಸ ಪಡಿತರ ಚೀಟಿಗೆ ಅರ್ಜಿ ಬಂದಿದ್ದು ಅವುಗಳಲ್ಲಿ 3046 ವಿತರಿಸಲಾಗಿತ್ತು. ಬಾಕಿ ಇದ್ದ 766 ಅರ್ಜಿಗಳನ್ನು ಪರಿಶೀಲಿಸಿ ವಿತರಿಸಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಪಡಿತರ ಚೀಟಿ ಹೆಸರು ಸೇರಿಸುವ ಹಾಗೂ ತೆಗೆದು ಹಾಕುವ ಪ್ರಕ್ರಿಯೆಯು ಪುನಃ ಪ್ರಾರಂಭವಾಗಿದೆ. ಸಾವ್ಜನಿಕರು ತಮ್ಮ ಗ್ರಾಮ ಪಂಚಾಯತ್‌ ಕಚೇರಿಯಲ್ಲಿಯೇ ಈ ಸೇವೆಯನ್ನು ಪಡೆದುಕೊಳ್ಳಬಹುದು. ಅಲ್ದೆ ಹೊಸ ಅರ್ಜಿಗಳನ್ನು ಸಹ ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

loading...