ಅಂಗನವಾಡಿಯಲ್ಲಿ ಕಲಿಕಾ ಚಟುವಟಿಕೆ ನಡೆಯಬೇಕು

0
7
loading...

ಗುಳೇದಗುಡ್ಡ: ಚಿಕ್ಕಮಕ್ಕಳ ಅಕ್ಷರ ಕೋಣೆ ಅಂಗನವಾಡಿಗಳು ಮಕ್ಕಳ ಊಟ, ನಿದ್ರೆಗೆ ಮಾತ್ರ ಸೀಮಿತವಾಗಿವೆ. ಅಲ್ಲಿ ಕಲಿಕಾ ಚಟುವಟಿಕೆಗಳು ನಡೆಯಬೇಕು. ಅಕ್ಷರ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಅದಕ್ಕೆ ಕೋಟೆಕಲ್ಲ ಅಂಗನವಾಡಿ ಮಾದರಿಯಾಗಿದೆ ಎಂದು ನಿವೃತ್ತ ಬ್ರಿಗೇಡಿಯರ್ ಎಂ.ಎನ್.ಕಡಪಟ್ಟಿ ಹೇಳಿದರು. ಅವರು ಸ್ವಾತಂತ್ರö್ಯಯೋಧ ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನದ ವತಿಯಿಂದ ಸಮೀಪದ ಕೋಟೆಕಲ್ಲ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಕೋಟೆಕಲ್ಲ, ತೋಗುಣಸಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಕ್ಷಿÃಣಿಸುತ್ತಿದೆ. ಆದರ್ಶತೆ ಕಾಣೆಯಾಗಿದೆ. ಸಮಾಜದಲ್ಲಿ ಪರಿಶುದ್ಧತೆ ಇಲ್ಲವಾಗಿದೆ. ಶಿಕ್ಷಣದಲ್ಲಿ ಬದಲಾವಣೆ ಆಗಬೇಕಿದೆ. ಅಂಗನವಾಡಿಯಿಂದ ಮಕ್ಕಳ ಕಲಿಕೆಗೆ ಹೆಚ್ಚಿನ ಓಲವು ತೋರಿಸಬೇಕು ಎಂದು ಎಂ.ಎನ್.ಕಡಪಟ್ಟಿ ಹೇಳಿದರು.

ÉÆÃಟೆಕಲ್ಲದ ಶ್ರಿÃಹೊಳೆ ಹುಚ್ಚೆÃಶ್ವರ ಶ್ರಿÃಗಳು, ಮುರುಘಾಮಠದ ಶ್ರಿÃಕಾಶೀನಾಥ ಶ್ರಿÃಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾತಂತ್ರö್ಯಯೋಧ ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನದ ಅಧ್ಯಕ್ಷ ಶಂಕರ ಸಿಂಗದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತೋಗುಣಸಿ, ಕೋಟೆಕಲ್ಲದ ಅಂಗನವಾಡಿ ಕಾರ್ಯಕರ್ತೆಯರಿಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ನಾರಾಯಣ ಚಿತ್ರಗಾರ, ಜಿ.ಎಸ್.ದೇಸಾಯಿ, ಹನಮಂತ ಮಾವಿನಮರದ, ಸುಮಿತ್ರಾ ಕಲಬುರ್ಗಿ, ಪೂಜಾ ಕಲಬುರ್ಗಿ, ಪಾರ್ವತಿ ತೊಗರಿ, ಸುಭಾಸ ತೊಗರಿ, ಕಾರ್ಯದರ್ಶಿ ಎಸ್.ಎಸ್.ನಾಯನೇಗಲಿ, ಸಿ.ಎಂ.ಚಿಂದಿ, ಸಂಗನಬಸಪ್ಪ ಚಿಂದಿ, ಎಸ್.ಎಸ್.ನಾಯನೇಗಲಿ, ಡಾ.ಬಸವರಾಜ ಹಡಗಲಿ, ಬಿ.ಎ.ತೆಲಸಂಗ, ಎನ್.ಎಸ್.ಸಿಂದಗಿಮಠ, ಈರಣ್ಣ ಪಟ್ಟಣಶೆಟ್ಟಿ, ವಿ.ಎಸ್.ಬಳಿಗಾರ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಮಳ್ಳಿ ಮತ್ತಿತರರು ಇದ್ದರು.

loading...