ಅಕ್ರಮ ದಂಧೆಕೋರರಿಗೆ ಬ್ರೇಕ್‌ ಹಾಕಿದ ಪಿಎಸ್‌ಐ

0
19
loading...

ಕುಕನೂರ: ಅಕ್ರಮ ಮರಳು ಲೂಟಿಕೋರರಿಗೆ, ಅಕ್ರಮ ಮಧ್ಯ ಮಾರಾಟಗಾರರಿಗೆ, ಜೂಜು, ಇಸ್ಟಿಟ್‌ ಆಟಗಾರರಿಗೆ ಕುಕನೂರ ಪಿಎಸ್‌ಐ ಜಿ.ಎಸ್‌.ರಾಘವೇಂದ್ರ ನಡುಕ ಹುಟ್ಟಿಸಿದ್ದಾರೆ.
ಈ ಮೊದಲು ಕುಕನೂರ ಸುತ್ತಮುತ್ತ ನಿರಂತರವಾಗಿ ಅಕ್ರಮ ಮರುಳು ಮಾಫಿಯಾ ಎಗ್ಗಿಲ್ಲದೆ ನಡೆಯಿತಿತ್ತು. ಆದರೆ ಸದ್ಯ ಇರುವ ಪಿಎಸ್‌ಐ ರಾಘವೇಂದ್ರರವರು ಪರವಾನಿಗೆ ಇಲ್ಲದೆ ಮರಳು ತುಂಬುವ ಪ್ರತಿಯೊಂದು ವಾಹನಗಳ ಮೇಲೆ ದಾಳಿ ಮಾಡಿ ಮಾಲಕರ ಮತ್ತು ಚಾಲಕರ ಮೇಲೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸುತ್ತಿದ್ದಾರೆ. ಅಲ್ಲದೆ ಕೇವಲ ಮರಳು ಮಾಫಿಯಾವಲ್ಲದೆ ಅಕ್ರಮ ಮದ್ಯಕೋರರಿಗೆ, ಜೂಜು, ಇಸ್ಟಿಟ್‌, ಮಟಕಾ ದಂಧೆಕೋರರಿಗೆ ಸಿಂಹ ಸ್ವಪ್ನವಾಗಿದ್ದಾರೆ.
ರಸ್ತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗಾಗ ವಾಹನ ಸವಾರರಿಗೆ ಎಚ್ಚರಿಕೆ ನೀಡಿ, ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ಹಚ್ಚಿರುವ ಅಂಗಡಿಗಳನ್ನು ರಸ್ತೆ ಬಿಟ್ಟು ಹಿಂದಕ್ಕೆ ಹಚ್ಚಿಸಿ, ದೂರು ಹೊತ್ತುಕೊಂಡು ಬರುವ ಜನಗಳ ಸಮಸ್ಯೆಗಳಿಗೆ ಸ್ಪಂದಿಸಿ ಜನಸೇಹಿ ಅಧಿಕಾರಿಯಾಗುತ್ತಿದ್ದಾರೆ. ಅದರ ಜೊತೆಗೆ ತಾಲೂಕಿನ ಸುತ್ತಮುತ್ತ ಶಾಲಾ ಕಾಲೇಜುಗಳಲ್ಲಿ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕಿಡಿಗೇಡಿಗಳ ಹಾವಳಿ ಆಗದಂತೆ ಜಾಗೃತ ವಹಿಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥರ್ಯ ತುಂಬಿದ್ದಾರೆ.

loading...